Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿಯ 14.25 ಕೋಟಿ ರೂ. ಒಪ್ಪಂದ ಅಚ್ಚರಿ ತರಿಸಿಲ್ಲ: ಮ್ಯಾಕ್ಸ್‌ವೆಲ್

IPL 2021: Glenn Maxwell explains why ₹14.25 crore RCB contract didnt surprise him

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಕಣಕ್ಕಿಳಿಯಲು ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ, ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಜೊತೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಿಕೊಳ್ಳಲು ಕೂಡ ಮ್ಯಾಕ್ಸ್‌ವೆಲ್ ಕಾತರರಾಗಿದ್ದಾರೆ.

ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 4ನೇ ಫ್ರಾಂಚೈಸಿ. ಇದಕ್ಕೂ ಮುನ್ನ ಮ್ಯಾಕ್ಸ್‌ವೆಲ್ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್), ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ತಂಡಗಳನ್ನು ಪ್ರತಿನಿಧಿಸಿದ್ದರು.

ಹರಾಜಿನ ವೇಳೆ ಆರ್‌ಸಿಬಿಗೆ ಬರುವ ಮುನ್ನ ಮ್ಯಾಕ್ಸ್‌ವೆಲ್ ಕಳೆದ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ 13 ಪಂದ್ಯಗಳಲ್ಲಿ 101.88ರ ಸ್ಟ್ರೈಕ್‌ರೇಟ್‌ನಂತೆ ಕೇವಲ 108 ರನ್ ಗಳಿಸಿದ್ದರು. ಹೀಗಾಗಿ ಪಂಜಾಬ್‌ ಫ್ರಾಂಚೈಸಿ ಮ್ಯಾಕ್ಸ್‌ವೆಲ್ ಅವರನ್ನು ರಿಲೀಸ್ ಮಾಡಿತ್ತು. ಹರಾಜಿನಲ್ಲಿ ಆರ್‌ಸಿಬಿ ಗ್ಲೆನ್ ಅವರನ್ನು 14.25 ಕೋಟಿ ರೂ.ಗೆ ಖರೀದಿಸಿತ್ತು.

ಆರ್‌ಸಿಬಿ ತನ್ನನ್ನು ಆರಿಸಿರುವ ಬಗ್ಗೆ ಮ್ಯಾಕ್ಸ್‌ವೆಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಮ್ಯಾಕ್ಸ್‌ವೆಲ್, 'ನಿಜಕ್ಕೂ ಅಚ್ಚರಿಯಾಗಿಲ್ಲ. ಬಹಳಷ್ಟು ತಂಡಗಳಿಗೆ ಒಳ್ಳೆಯ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಬೇಕಿರುವುದರಿಂದ ಯಾರಿಗಾದರೂ ನನ್ನತ್ತ ಆಸಕ್ತಿ ಇದ್ದೇ ಇರುತ್ತದೆ ಎಂದುಕೊಂಡಿದ್ದೆ. ಎರಡು ತಂಡಗಳು ಜಿದ್ದಾಗಿದ್ದಿ ನಡೆಸಿ ಕಡೆಗೆ ಆರ್‌ಸಿಬಿ ಆರಿಸಿದ್ದು ಖುಷಿ ನೀಡಿದೆ,' ಎಂದಿದ್ದಾರೆ.

Story first published: Thursday, April 8, 2021, 13:36 [IST]
Other articles published on Apr 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+