Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಆರ್‌ಸಿಬಿಯ ಪ್ರಭಾವಿ ಆಟಗಾರನ ಹೆಸರಿಸಿದ ಮೈಕ್ ಹೆಸನ್

IPL 2021: Glenn Maxwell is X-factor Player For RCB Says Mike Hesson

ಬೆಂಗಳೂರು: 2021ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗೆ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗುತ್ತಿದೆ. ಈ ಬಾರಿ ಪ್ರಶಸ್ತಿ ಗೆಲ್ಲುವತ್ತ ಚಿತ್ತ ನೆಟ್ಟಿರುವ ಆರ್‌ಸಿಬಿಯ ಪ್ರಭಾವಿ ಆಟಗಾರ ಯಾರೆಂಬುದನ್ನು ಆರ್‌ಸಿಬಿ ನಿರ್ದೇಶಕ, ನ್ಯೂಜಿಲೆಂಡ್ ಮಾಜಿ ಮುಖ್ಯ ಕೋಚ್, ಕಿವೀಸ್ ಮಾಜಿ ಆಟಗಾರ ಮೈಕ್ ಹೆಸನ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿ ಆರ್‌ಸಿಬಿ ತಂಡದಲ್ಲಿದ್ದಾರೆ. ಹೀಗಾಗಿ ಆರ್‌ಸಿಬಿ ಮಧ್ಯಮ ಬ್ಯಾಟಿಂಗ್‌ ಕ್ರಮಾಂಕ ಇನ್ನಷ್ಟು ಬಲಿಷ್ಠವಾಗಲಿದೆ. ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ಪ್ರಭಾವಿ ಆಟಗಾರನಾಗಿ ಬಳಸಿಕೊಳ್ಳಲಿದೆ ಎಂದು ಮೈಕ್ ಹೆಸನ್ ಹೇಳಿದ್ದಾರೆ.

'ಗ್ಲೆನ್ ಮ್ಯಾಕ್ಸ್‌ವೆಲ್ ಒಬ್ಬ ಅದ್ಭುತ ಆಟಗಾರ. ನಮಗೆ ಅಗತ್ಯವಿದ್ದ ಮಧ್ಯಮ ಕ್ರಮಾಂಕಕ್ಕೆ ಅವರು ಚೆನ್ನಾಗಿ ಫಿಟ್ ಆಗ್ತಾರೆ. ನಮಗೆ ತಂಡದಲ್ಲಿ ಕೆಲ ಪ್ರಭಾವಿ ಆಟಗಾರರು ಬೇಕಿದ್ದಾರೆ. ಮ್ಯಾಕ್ಸ್‌ವೆಲ್ ಅಂಥವರನ್ನೇ ನಾವು ಪ್ರಭಾವಿ ಆಟಗಾರರಾಗಿ ಈ ಮೊದಲು ಮಾತನಾಡಿದ್ದೆವು,' ಎಂದು ಇಎಸ್‌ಪಿನ್ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಹೆಸನ್ ತಿಳಿಸಿದ್ದಾರೆ.

ಮಾತು ಮುಂದುವರೆಸಿದ ಹೆಸನ್, 'ನಾವು ಕೆಲಸ ಮಾಡಲು ಬೇಕಾದ ಪ್ರದೇಶ ಮಧ್ಯಮ ಓವರ್‌ ಎಂದು ನಾವು ಕಂಡುಕೊಂಡಿದ್ದೇವೆ. ಆ ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿ ವಿಲಿಯರ್ಸ್‌ಗೆ ಜೊತೆಯಾಗಿ ಒಬ್ಬ ಆಟಗಾರಬೇಕಿತ್ತು. ಆ ಅಗತ್ಯತೆಯನ್ನು ಮ್ಯಾಕ್ಸ್‌ವೆಲ್ ನೀಗಿಸಿದ್ದಾರೆ,' ಎಂದಿದ್ದಾರೆ. ಐಪಿಎಲ್ ಉದ್ಘಾಟನೆ ಪಂದ್ಯ ನಡೆಯುವ ಏಪ್ರಿಲ್ 9ರಂದು ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಕಾದಾಡಲಿವೆ. ಚೆನ್ನೈನಲ್ಲಿ ಈ ಪಂದ್ಯ ನಡೆಯಲಿದೆ.

Story first published: Thursday, April 1, 2021, 13:33 [IST]
Other articles published on Apr 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+