ಮುಂಬೈ ಇಂಡಿಯನ್ಸ್ ಬಯೋಬಬಲ್ ಸೇರಿಕೊಂಡ ಹಾರ್ದಿಕ್, ಕೃನಾಲ್ ಹಾಗೂ ಸೂರ್ಯಕುಮಾರ್

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯವಾಗಿದ್ದು ಭಾರತ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಸರಣಿಯ ಮುಕ್ತಾಯವಾಗುತ್ತಿದ್ದಂತೆಯೇ ಟೀಮ್ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಮುಂಬರುವ ಐಪಿಎಲ್ ಟೂರ್ನಿಗಾಗಿ ನೇರವಾಗಿ ಮುಂಬೈ ಇಂಡಿಯನ್ಸ್ ಬಯೋಬಬಲ್ ಸೇರಿಕೊಂಡಿದ್ದಾರೆ.
ಭಾನುವಾರ ರೋಮಾಂಚನಕಾರಿ ರೀತಿಯಲ್ಲಿ ಅಂತ್ಯವಾದ ಏಕದಿನ ಸರಣಿಯಲ್ಲಿ ಮೂವರು ಕೂಡ ಪಾಲ್ಗೊಂಡಿದ್ದರು. ಪಾಂಡ್ಯ ಬ್ರದರ್ಸ್ ಇಂಗ್ಲೆಂಡ್ ವಿರುದ್ಧಧ ಏದಕಿನ ಸರಣಿಯಲ್ಲಿ ಆಡುವ ಬಳಗದಲ್ಲಿಯೂ ಕಾಣಿಸಿಕೊಂಡಿದ್ದರು. ಇನ್ನು ಸೂರ್ಯಕುಮಾರ್ ಯಾದವ್ ಟಿ20 ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿ ಅದ್ಭುತವಾದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು.
ಈಗ ಈ ಮೂವರು ಕೂಡ ಮುಂಬೈ ಇಂಡಿಯನ್ಸ್ ಬಳಗವನ್ನು ಸೇರಿಕೊಂಡಿದ್ದಾರೆ. ಈ ಆಟಗಾರರು ಏಳು ದಿನಗಳ ಕಡ್ಡಾಯ ಕ್ವಾರಂಟೈನ್ ಪೂರೈಸಿದ ಬಳಿಕ ತಮ್ಮ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂವರು ಆಟಗಾರರು ಮುಂಬೈ ಪಾಳಯ ಸೇರಿಕೊಂಡಿರುವ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಹಂಚಿಕೊಂಡಿದೆ.
ಐದು ಬಾರಿಯ ಐಪಿಎಲ್ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಇತ್ತೀಚೆಗಷ್ಟೆ ತಂಡದ ಹೊಸ ಜರ್ಸಿಯನ್ನು ಬಿಡುಗಡೆಗೊಳಿಸಿತ್ತು. ಪಂಚಭೂತಗಳಾದ ಭೂಮಿ, ಜಲ, ಅಗ್ನಿ, ಗಾಳಿ ಹಾಗೂ ಆಕಾಶದ ಸಂಯೋಜನೆಯಲ್ಲಿ ಈ ವಿಶೇಷವಾದ ಜರ್ಸಿಯನ್ನು ಶಂತನು ಮತ್ತು ನಿಖಿಲ್ ವಿನ್ಯಾಸಗೊಳಿಸಿದ್ದರು.
ಏಪ್ರಿಲ್ 9 ರಿಂದ 14೦ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದ್ದು ಉದ್ಭಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆನೆಸಾಟವನ್ನು ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications