ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬಗ್ಗೆ ತಂಡದ ವೇಗಿ, ಪರ್ಪಲ್ ಕ್ಯಾಪ್ ಹೋಲ್ಡರ್ ಹರ್ಷಲ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿ ಒಬ್ಬ ಅದ್ಭುತ ನಾಯಕ. ಆತನ ತಂಡದಲ್ಲಿರುವ ಎಲ್ಲರೊಳಗೂ ಎಲ್ಲಾ ಕ್ಷಣದಲ್ಲಿಯೂ ಆತ್ಮವಿಶ್ವಾಸ ತುಂಬುತ್ತಿರುತ್ತಾರೆ ಎಂದು ಹೇಳಿದ್ದಾರೆ.
ಆರ್ಸಿಬಿ ಟ್ರೋಲರ್ಗಳಿಗೆ ಗ್ಲೆನ್ ಮ್ಯಾಕ್ಸ್ವೆಲ್ ಟ್ವೀಟ್ ತಿರುಗೇಟು!
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ (ಅಕ್ಟೋಬರ್ 11) ನಡೆದಿದ್ದ ಐಪಿಎಲ್ 2021ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಡಿದ್ದವು. ಇದರಲ್ಲಿ ಕೆಕೆಆರ್ 4 ವಿಕೆಟ್ ಗೆಲುವನ್ನಾಚರಿಸಿತು. ಈ ಸೋಲಿನೊಂದಿಗೆ ಆರ್ಸಿಬಿ ಟ್ರೋಫಿ ಗೆಲುವಿನ ಕನಸು ಕಮರಿ ಹೋಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ 39, ದೇವದತ್ ಪಡಿಕ್ಕಲ್ 21, ಶ್ರೀಕರ್ ಭಾರತ್ 9, ಗ್ಲೆನ್ ಮ್ಯಾಕ್ಸ್ವೆಲ್ 15, ಎಬಿ ಡಿವಿಲಿಯರ್ಸ್ 11, ಡೇನಿಯಲ್ ಕ್ರಿಶ್ಚಿಯನ್ 9, ಶಹಬಾಜ್ ಅಹ್ಮದ್ 13, ಹರ್ಷಲ್ ಪಟೇಲ್ 8 ರನ್ನೊಂದಿಗೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದು 138 ರನ್ ಗಳಿಸಿತ್ತು.
ಐಪಿಎಲ್ನಲ್ಲಿ ಆರ್ಸಿಬಿ ನಾಯಕರಾಗಿ ವಿರಾಟ್ ಕೊಹ್ಲಿ ಅಂಕಿ-ಅಂಶಗಳು!
ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್ಮನ್ ಗಿಲ್ 29, ವೆಂಕಟೇಶ್ ಅಯ್ಯರ್ 26, ನಿತೀಶ್ ರಾಣಾ 23, ರಾಹುಲ್ ತ್ರಿಪಾಠಿ 6, ಇಯೋನ್ ಮಾರ್ಗನ್ 5, ದಿನೇಶ್ ಕಾರ್ತಿಕ್ 10, ಶಕೀಬ್ ಅಲ್ ಹಸನ್ 9, ಸುನಿಲ್ ನರೈನ್ 26 ರನ್ನೊಂದಿಗೆ 19.4 ಓವರ್ಗೆ 6 ವಿಕೆಟ್ ಕಳೆದು 139 ರನ್ ಗಳಿಸಿ ಗೆಲುವು ಸಂಭ್ರಮಾಚರಿಸಿತು.
ಸೋಮವಾರದ ಪಂದ್ಯದಲ್ಲಿ ಹರ್ಷಲ್ ಪಟೇಲ್ 19 ರನ್ಗೆ 2 ವಿಕೆಟ್ ಪಡೆದುಕೊಂಡಿದ್ದರು. ಈ ವಿಕೆಟ್ನೊಂದಿಗೆ ಈ ಐಪಿಎಲ್ ಸೀಸನ್ನಲ್ಲಿ ಒಟ್ಟು 32 ವಿಕೆಟ್ಗಳೊಂದಿಗೆ ಪಟೇಲ್ ಅವರು ಐಪಿಎಲ್ ಸೀಸನ್ ಒಂದರಲ್ಲಿ ಅತ್ಯಧಿಕ ವಿಕೆಟ್ ಪಡೆದ ಡ್ವೇನ್ ಬ್ರಾವೋ ದಾಖಲೆ ಸರಿದೂಗಿಸಿಕೊಂಡಿದ್ದಾರೆ. ಈ ಸೀಸನ್ನಲ್ಲಿ ಅತೀ ಹೆಚ್ಚು ವಿಕೆಟ್ಗಾಗಿ ನೀಡಲಾಗುವ ಪರ್ಪಲ್ ಕ್ಯಾಪ್ ಸದ್ಯ ಹರ್ಷಲ್ ಕೈಯಲ್ಲಿದೆ.
ಪಂಜಾಬ್ ಕಿಂಗ್ಸ್ ಬಿಟ್ಟು ಹೊರಬರುವ ಕೆಎಲ್ ರಾಹುಲ್ಗೆ ನಾಯಕ ಸ್ಥಾನ ನೀಡಲು ಸಿದ್ಧವಾಗಿವೆ ಈ 3 ತಂಡಗಳು!
ಈ ಸೀಸನ್ನಿಂದ ಆರ್ಸಿಬಿ ಹೊರ ಬಿದ್ದ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಹರ್ಷಲ್ ಮಾತನಾಡಿದ್ದಾರೆ. "ಕ್ಯಾಪ್ಟನ್ಸಿಯಲ್ಲಿ ಕ್ಯಾಪ್ಟನ್ ಮತ್ತು ಲೀಡರ್ಗಳಿರುತ್ತಾರೆ. ಕೊಹ್ಲಿ ಒಬ್ಬ ಲೀಡರ್ ಆಗಿದ್ದಾರೆ. ಆತ ಪ್ರತೀಸಾರಿಯೂ ಬೌಲರ್ಗಳ ಬೆಂಬಲಕ್ಕೆ ಸಿಲ್ಲುತ್ತಾರೆ. ಆತ ನಮ್ಮ ಯೋಜನೆ ಕಾರ್ಯರೂಪಕ್ಕೆ ತರಲು ಆತ್ಮವಿಶ್ವಾಸ ತುಂಬುತ್ತಾರೆ. ಬೌಲರ್ ಆಗಿ ನಾನು ಬೆಳೆಯಲು ಕಾರಣರಾದ ಅವರಿಗೆ ನಾನು ಋಣಿಯಾಗಿದ್ದೇನೆ," ಎಂದು ಪಟೇಲ್ ಹೇಳಿದ್ದಾರೆ.