ಐಪಿಎಲ್ 2021 : ಚೆನ್ನೈ - ಕೊಲ್ಕತ್ತಾ ಪಂದ್ಯದ ಪ್ರಮುಖ ಅಂಕಿ ಅಂಶ ಮತ್ತು ನಿರ್ಮಾಣವಾದ ದಾಖಲೆಗಳು

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 15ನೇ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ( ಏಪ್ರಿಲ್ 21 ) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ 3 ವಿಕೆಟ್ ನಷ್ಟಕ್ಕೆ 20 ಓವರ್‌ಗಳಲ್ಲಿ 220 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಮಾಡಿದರು.
221 ರನ್‌ಗಳ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೇಲಿನ ಕ್ರಮಾಂಕದ ಆಟಗಾರರು ಕಳಪೆ ಪ್ರದರ್ಶನ ನೀಡಿದರೂ ಸಹ ಮಧ್ಯಮ ಕ್ರಮಾಂಕದ ಆಟಗಾರರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಗೆಲುವಿನ ಸನಿಹಕ್ಕೆ ಬಂದಿತ್ತು. ತೀವ್ರ ಪೈಪೋಟಿ ನೀಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 19.1 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ 18 ರನ್‌ಗಳಿಂದ ಸೋಲುಂಡಿತು.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಈ ರೋಚಕ ಪಂದ್ಯದಲ್ಲಿ ಕೆಲವೊಂದಷ್ಟು ದಾಖಲೆಗಳು ನಿರ್ಮಾಣವಾದವು. ಈ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳು ಮತ್ತು ಕೆಲವೊಂದಷ್ಟು ಪ್ರಮುಖ ಅಂಕಿ ಅಂಶಗಳು ಮುಂದೆ ಇದೆ ಓದಿ.
ಪ್ಯಾಟ್ ಕಮಿನ್ಸ್: ಕೊಲ್ಕತ್ತಾ ಗೆಲುವಿಗಾಗಿ ಕೊನೆಯ ತನಕ ಹೋರಾಟ ನಡೆಸಿದ ಪ್ಯಾಟ್ ಕಮಿನ್ಸ್ 34 ಎಸೆತಗಳಿಗೆ 66 ರನ್ ಗಳಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಎಂಟನೇ ಕ್ರಮಾಂಕದಲ್ಲಿ ಇಳಿದ ಆಟಗಾರನೊಬ್ಬ ಗಳಿಸಿರುವ ಅತ್ಯಧಿಕ ರನ್ ಆಗಿದೆ.
ಸ್ಯಾಮ್ ಕರನ್: ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ಓವರ್ ಎಸೆದ ಚೆನ್ನೈ ತಂಡದ ಸ್ಯಾಮ್ ಕರನ್ 58 ರನ್ ಬಿಟ್ಟುಕೊಡುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ 4 ಓವರ್ ಮಾಡಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಚೆನ್ನೈ ಬೌಲರ್ ಎಂಬ ಕೆಟ್ಟ ದಾಖಲೆಯನ್ನು ಮೋಹಿತ್ ಶರ್ಮಾ ಅವರ ಜೊತೆ ಹಂಚಿಕೊಂಡಿದ್ದಾರೆ. ಈ ಹಿಂದೆ ಚೆನ್ನೈ ತಂಡದ ಪರ ಆಡಿದ್ದ ಮೋಹಿತ್ ಶರ್ಮಾ ಕೂಡ 4 ಓವರ್ ಮಾಡಿ 58 ರನ್ ನೀಡಿದ್ದರು.
ಎಂಎಸ್ ಧೋನಿ: ಈ ಪಂದ್ಯದ ಮೂಲಕ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ವಿಕೆಟ್ ಕೀಪರ್ ಆಗಿ 150 ಔಟ್ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
26 ಸಿಕ್ಸರ್: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಸಿಕ್ಸರ್ ಮಳೆ ಸುರಿದಿದ್ದು ಎರಡೂ ತಂಡಗಳ ಆಟಗಾರರು ಒಟ್ಟು 26 ಸಿಕ್ಸರ್ ಬಾರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications