ಈ ವಿಷಯದಲ್ಲಿ ಸದ್ಯಕ್ಕೆ ಸಿರಾಜ್ ಐಪಿಎಲ್ ಟೂರ್ನಿಯ ಬೆಸ್ಟ್ ಬೌಲರ್!

2017ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರನಾಗಿ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಮೊಹಮ್ಮದ್ ಸಿರಾಜ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2018ರಲ್ಲಿ ಖರೀದಿಸಿತು. ಆದರೆ ಮೊಹಮ್ಮದ್ ಸಿರಾಜ್ ಶುರುವಿನಲ್ಲಿ ಬೆಂಗಳೂರು ತಂಡದ ಪರ ಕಳಪೆ ಪ್ರದರ್ಶನ ನೀಡಿದ್ದೇ ಹೆಚ್ಚು. ಹೀಗಾಗಿಯೇ ಮೊಹಮ್ಮದ್ ಸಿರಾಜ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಕೂಡ ಮಾಡಲಾಗಿತ್ತು.
ಆದರೆ ಸಿರಾಜ್ ಮೇಲೆ ಹೆಚ್ಚಿನ ನಂಬಿಕೆ ಇದ್ದ ವಿರಾಟ್ ಕೊಹ್ಲಿ ಆಡಲು ಮರು ಅವಕಾಶಗಳನ್ನು ನೀಡಿದರು. ವಿರಾಟ್ ಕೊಹ್ಲಿ ನಂಬಿಕೆಯನ್ನು ಮೊಹಮ್ಮದ್ ಸಿರಾಜ್ ಇತ್ತೀಚಿನ ದಿನಗಳಲ್ಲಿ ಉಳಿಸಿಕೊಂಡು ಒಬ್ಬ ಯಶಸ್ವಿ ಐಪಿಎಲ್ ಬೌಲರ್ ಆಗಿದ್ದಾರೆ. 2020ರ ಐಪಿಎಲ್ ಟೂರ್ನಿಯ ಪಂದ್ಯವೊಂದರಲ್ಲಿ ಎರಡು ಮೇಡನ್ ಓವರ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಪಂದ್ಯವೊಂದರಲ್ಲಿ ಎರಡು ಮೇಡನ್ ಓವರ್ ಮಾಡಿದ ಮೊದಲ ಬೌಲರ್ ಎಂಬ ದಾಖಲೆಯನ್ನು ಬರೆದರು.
ಕಳೆದ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಅತ್ಯುತ್ತಮ ಪ್ರದರ್ಶನ ತೋರಿದ ಮೊಹಮ್ಮದ್ ಸಿರಾಜ್ ತಮ್ಮ ಉತ್ತಮ ಆಟವನ್ನು ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿಯೂ ಮುಂದುವರಿಸಿದ್ದಾರೆ. ಭಾನುವಾರ (ಏಪ್ರಿಲ್ 18) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಯಾವುದೇ ವಿಕೆಟ್ ಪಡೆಯದೇ ಇದ್ದರೂ ಸಹ ಪಂದ್ಯದ ದಿಕ್ಕನ್ನೇ ಬದಲಿಸುವಂತಹ ಪ್ರದರ್ಶನ ನೀಡಿದರು ಹಾಗೂ 3 ಓವರ್ ಎಸೆದ ಸಿರಾಜ್ ಕೇವಲ 17 ರನ್ ನೀಡಿದರು.
205 ರನ್‌ಗಳ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕೊನೆಯ 12 ಎಸೆತಗಳಲ್ಲಿ 44 ರನ್ ಬೇಕಿತ್ತು. 13 ಎಸೆತಗಳಲ್ಲಿ 30 ರನ್ ಚಚ್ಚಿದ್ದ ಡೇಂಜರಸ್ ರಸೆಲ್ ಬ್ಯಾಟಿಂಗ್ ಮಾಡುತ್ತಿದ್ದರು, ಹೀಗಾಗಿ ಕೊನೆಯ 2 ಓವರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಹುಮುಖ್ಯವಾಗಿತ್ತು, 19ನೇ ಓವರ್‌ನಲ್ಲಿ ಹೆಚ್ಚಿನ ರನ್ ನೀಡಿದರೆ ಪಂದ್ಯ ಕೈತಪ್ಪುವ ಸಾಧ್ಯತೆಗಳಿತ್ತು. ಇಂತಹ ಸಂದರ್ಭದಲ್ಲಿ ವಿರಾಟ್ 19ನೇ ಓವರ್ ಮಾಡಲು ಮೊಹಮ್ಮದ್ ಸಿರಾಜ್ ಗೆ ಬಾಲ್ ನೀಡಿದರು. 19ನೇ ಓವರ್ ಮಾಡಿದ ಸಿರಾಜ್ ಸತತ 5 ಡಾಟ್ ಬಾಲ್ ಹಾಕುವ ಮೂಲಕ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಡೆಗೆ ತಿರುಗಿಸಿದರು. ಆ ಓವರ್‌ನಲ್ಲಿ, ಅದು ಕೂಡ ಡೇಂಜರಸ್ ಆ್ಯಂಡ್ರೆ ರಸೆಲ್ ಬ್ಯಾಟಿಂಗ್‌ನಲ್ಲಿ ಸಿರಾಜ್ ನೀಡಿದ್ದು ಕೇವಲ ಒಂದೇ ಒಂದು ರನ್.
ಸಿರಾಜ್ ಈ ಅತ್ಯದ್ಭುತ ಓವರ್ ಮಾಡುವ ಮೂಲಕ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಹಾಕಿದ ಬೌಲರ್ ಎನಿಸಿಕೊಂಡಿದ್ದಾರೆ. ಎಲ್ಲಾ ತಂಡಗಳು ತಲಾ 3 ಪಂದ್ಯಗಳನ್ನಾಡಿದ ನಂತರ ಅತಿಹೆಚ್ಚು ಡಾಟ್ ಬಾಲ್ ಹಾಕಿದ ಟಾಪ್ 5 ಬೌಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ.

1. ಮೊಹಮ್ಮದ್ ಸಿರಾಜ್ : 37
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಮೊಹಮ್ಮದ್ ಸಿರಾಜ್ ಪ್ರಸ್ತುತ ಐಪಿಎಲ್ ಟೂರ್ನಿಯ 3 ಪಂದ್ಯಗಳಲ್ಲಿ 37 ಡಾಟ್ ಬಾಲ್ ಹಾಕಿದ್ದಾರೆ.

2. ಟ್ರೆಂಟ್ ಬೌಲ್ಟ್ : 36
ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಟ್ರೆಂಟ್ ಬೌಲ್ಟ್ ಪ್ರಸ್ತುತ ಐಪಿಎಲ್ ಟೂರ್ನಿಯ 3 ಪಂದ್ಯಗಳಲ್ಲಿ 36 ಡಾಟ್ ಬಾಲ್ ಹಾಕಿದ್ದಾರೆ.

3. ಕ್ರಿಸ್ ವೋಕ್ಸ್ : 33
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಕ್ರಿಸ್ ವೋಕ್ಸ್ ಪ್ರಸ್ತುತ ಐಪಿಎಲ್ ಟೂರ್ನಿಯ 3 ಪಂದ್ಯಗಳಲ್ಲಿ 33 ಡಾಟ್ ಬಾಲ್ ಹಾಕಿದ್ದಾರೆ.

4. ದೀಪಕ್ ಚಹರ್ : 33
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ ದೀಪಕ್ ಚಹರ್ ಕೂಡ ಪ್ರಸ್ತುತ ಐಪಿಎಲ್ ಟೂರ್ನಿಯ 3 ಪಂದ್ಯಗಳಲ್ಲಿ 33 ಡಾಟ್ ಬಾಲ್ ಹಾಕಿದ್ದಾರೆ.

5. ಮೊಹಮ್ಮದ್ ಶಮಿ : 32
ಪಂಜಾಬ್ ಕಿಂಗ್ಸ್ ತಂಡದ ಬೌಲರ್ ಮೊಹಮ್ಮದ್ ಶಮಿ ಪ್ರಸ್ತುತ ಐಪಿಎಲ್ ಟೂರ್ನಿಯ 3 ಪಂದ್ಯಗಳಲ್ಲಿ 32 ಡಾಟ್ ಬಾಲ್ ಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications