Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021 : ಅತಿಹೆಚ್ಚು ರನ್ ನೀಡಿದ ಬೌಲರ್‌ಗಳ ಪಟ್ಟಿ

IPL 2021 : Here is the list of bowlers who conceded most runs in IPL 2021

ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ರದ್ದಾಗಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ರದ್ದು ಮಾಡಿದೆ. ಇನ್ನುಳಿದ 31 ಪಂದ್ಯಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಸಬೇಕೆಂಬ ಚಿಂತನೆಯಲ್ಲಿದೆ ಬಿಸಿಸಿಐ.

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ನಡೆದಿರುವ 29 ಪಂದ್ಯಗಳಲ್ಲಿ ಅನ್‌ಕ್ಯಾಪ್ಡ್ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ಮಿಂಚಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಚೇತನ್ ಸಕಾರಿಯಾ ಉತ್ತಮ ಪ್ರದರ್ಶನ ನೀಡಿದ ಅನ್‌ಕ್ಯಾಪ್ಡ್ ಬೌಲರ್‌ಗಳು. ಹೀಗೆ ಉತ್ತಮ ಪ್ರದರ್ಶನ ನೀಡಿದ ಅನ್‌ಕ್ಯಾಪ್ಡ್ ಬೌಲರ್‌ಗಳ ಪೈಕಿ ಕೆಲವೊಂದಷ್ಟು ಬೌಲರ್‌ಗಳು ಅತಿ ಹೆಚ್ಚು ರನ್ ನೀಡಿದ ಬೌಲರ್‌ಗಳ ಪಟ್ಟಿಗೂ ಸೇರಿಕೊಂಡಿದ್ದಾರೆ.

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಇಲ್ಲಿಯವರೆಗೂ ನಡೆದಿರುವ ಪಂದ್ಯಗಳ ಪೈಕಿ ಅತಿಹೆಚ್ಚು ರನ್ ನೀಡಿದ ಬೌಲರ್‌ಗಳ ಪಟ್ಟಿ ಹೀಗಿದೆ : ಶಾರ್ದೂಲ್ ಠಾಕೂರ್ 267, ಹರ್ಷಲ್ ಪಟೇಲ್ 257, ಪ್ರಸಿದ್ಧ್ ಕೃಷ್ಣ 243, ಪ್ಯಾಟ್ ಕಮಿನ್ಸ್ 237, ಮೊಹಮ್ಮದ್ ಶಮಿ 234, ಅವೇಶ್ ಖಾನ್ 231 ಹಾಗೂ ಕಗಿಸೊ ರಬಾಡ 228 ರನ್‌ಗಳು. ಹೀಗೆ ಅತಿಹೆಚ್ಚು ರನ್ ನೀಡಿರುವ ಈ ಬೌಲರ್‌ಗಳು ಸೆಪ್ಟೆಂಬರ್‌ನಲ್ಲಿ ಮುಂದುವರಿಯಲಿರುವ ಐಪಿಎಲ್ ಪಂದ್ಯಗಳಲ್ಲಿ ಇದೇ ರೀತಿ ಹೆಚ್ಚು ರನ್ ನೀಡುತ್ತಾರಾ ಅಥವಾ ಕಡಿಮೆ ರನ್ ನೀಡಿ ಈ ಪಟ್ಟಿಯಿಂದ ಹೊರಗುಳಿಯುತ್ತಾರಾ ಎಂಬುದನ್ನು ಕಾದು ನೋಡಬೇಕು.

Story first published: Friday, May 7, 2021, 20:39 [IST]
Other articles published on May 7, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+