ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಶೂನ್ಯ ಸುತ್ತಿದ ಆಟಗಾರರು

ಏಪ್ರಿಲ್ 10ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಹೀನಾಯ ಸೋಲನ್ನು ಕಂಡಿತ್ತು. ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಸೋಲುವುದರ ಮೂಲಕ ನಿರಾಶಾದಾಯಕ ಆರಂಭವನ್ನು ಪಡೆದುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶುಕ್ರವಾರ ( ಏಪ್ರಿಲ್ 16 ) ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವುದರ ಮೂಲಕ ಯಶಸ್ಸಿನ ಹಾದಿಗೆ ಮರಳಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಪವರ್ ಪ್ಲೇ ಮುಗಿಯುವಷ್ಟರಲ್ಲಿಯೇ ತಂಡದ ಬಹುತೇಕ ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿಕೊಂಡಿತು. ಆರನೇ ಕ್ರಮಾಂಕದಲ್ಲಿ ಬಂದ ಶಾರುಖ್ ಖಾನ್ ಹೊರತುಪಡಿಸಿ ಬೇರೆ ಯಾವ ಆಟಗಾರರೂ ಸಹ ಪಂಜಾಬ್ ಕಿಂಗ್ಸ್ ತಂಡದ ಪರ ಉತ್ತಮ ಪ್ರದರ್ಶನ ನೀಡಲೇ ಇಲ್ಲ. 20 ಓವರ್‌ಗಳಲ್ಲಿ 8 ವಿಕೆಟ್‍ ನಷ್ಟಕ್ಕೆ ಪಂಜಾಬ್ ಕಿಂಗ್ಸ್ 106 ರನ್ ಗಳಿಸಲಷ್ಟೇ ಶಕ್ತವಾಯಿತು.

107 ರನ್‌ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಾಫ್ ಡು ಪ್ಲೆಸಿಸ್ ಮತ್ತು ಮೊಯಿನ್ ಅಲಿ ಭರ್ಜರಿ ಬ್ಯಾಟಿಂಗ್ ನೆರವಿನಿಂದ 15.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಚೆನ್ನೈ ತಂಡ 107 ರನ್‌ಗಳ ಗುರಿ ಮುಟ್ಟಿ 6 ವಿಕೆಟ್‍ಗಳ ಭರ್ಜರಿ ಸಾಧಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿತಾದರೂ ಸಹ ಐದನೇ ಕ್ರಮಾಂಕದಲ್ಲಿ ಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಅಂಬಾಟಿ ರಾಯುಡು ಶೂನ್ಯಕ್ಕೆ ಔಟ್ ಆಗುವ ಮೂಲಕ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹೌದು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಆದ ಆಟಗಾರರ ಪಟ್ಟಿಯಲ್ಲಿ ಅಂಬಾಟಿ ರಾಯುಡು 13 ಪಂದ್ಯಗಳಲ್ಲಿ ಡಕ್ ಔಟ್ ಆಗುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

ಅಂಬಾಟಿ ರಾಯುಡು ಹೊರತುಪಡಿಸಿ ಉಳಿದಂತೆ ರೋಹಿತ್ ಶರ್ಮಾ, ಹರ್ಭಜನ್ ಸಿಂಗ್, ಅಜಿಂಕ್ಯಾ ರಹಾನೆ ಹಾಗೂ ಪಾರ್ಥಿವ್ ಪಟೇಲ್ ಸಹ ತಲಾ 13 ಐಪಿಎಲ್ ಪಂದ್ಯಗಳಲ್ಲಿ ಡಕ್ ಔಟ್ ಆಗಿದ್ದು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಔಟ್ ಆದ ಆಟಗಾರರು ಎಂಬ ಕೆಟ್ಟ ದಾಖಲೆಯನ್ನು ಹೊಂದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, April 17, 2021, 9:32 [IST]
Other articles published on Apr 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X