For Quick Alerts
ALLOW NOTIFICATIONS  
For Daily Alerts
 

ಈ ಐಪಿಎಲ್ ದಾಖಲೆಯಲ್ಲಿ ಆರ್‌ಸಿಬಿಯದ್ದೇ ಪಾರುಪತ್ಯ

IPL 2021 : Highest partnership in IPL

ದೇಶದಾದ್ಯಂತ ಇಂಡಿಯನ್ ಪ್ರೀಮಿಯರ್ ಲೀಗ್ ಜ್ವರ ಮತ್ತೆ ಶುರುವಾಗಿದೆ. ಇಂದು ( ಏಪ್ರಿಲ್ 9 ) ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡುತ್ತಿವೆ. ಇದುವರೆಗೂ ಮುರಿಯಲಾಗದಿರುವ ಈ ದಾಖಲೆಯನ್ನು ಈ ವರ್ಷವಾದರೂ ಆಟಗಾರರು ಸರಿಗಟ್ಟುತ್ತಾರಾ ಎಂಬುದನ್ನು ನೋಡಬೇಕು.

ಹೌದು 2016ರ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಜೋಡಿ ನಿರ್ಮಿಸಿದ್ದ ಅತ್ಯಧಿಕ ಜತೆಯಾಟದ ರನ್ ದಾಖಲೆಯನ್ನು ಇದುವರೆಗೂ ಸಹ ಯಾರೂ ಸರಿಗಟ್ಟಲು ಆಗಿಲ್ಲ. 2016ರ ಮೇ 14 ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಲಯನ್ಸ್ ನಡುವಿನ ಪಂದ್ಯದಲ್ಲಿ ಜತೆಯಾದ ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ 229 ರನ್‌ಗಳ ಜತೆಯಾಟವಾಡುವ ಮೂಲಕ ಸಾರ್ವಕಾಲಿಕ ದಾಖಲೆಯನ್ನು ಬರೆದರು. ವಿರಾಟ್ ಮತ್ತು ಎಬಿಡಿ ಜತೆಯಾಟದಿಂದ ಬಂದ 229 ರನ್ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಧಿಕ ಜತೆಯಾಟದ ರನ್ ದಾಖಲೆಯಾಗಿದೆ.

ಇದನ್ನು ಹೊರತುಪಡಿಸಿ ಎರಡನೇ ಜತೆಯಾಟದ ಅತ್ಯಧಿಕ ರನ್ ಕೂಡ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಹೆಸರಿನಲ್ಲಿಯೇ ಇದೆ. 2015ರ ಮೇ 10ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ವಿರಾಟ್ ಮತ್ತು ಎಬಿಡಿ ಜೋಡಿ ಅಜೇಯ 215 ರನ್‌ಗಳ ಜತೆಯಾಟವಾಡಿತ್ತು. ಇದನ್ನು ಹೊರತುಪಡಿಸಿದರೆ ಅತ್ಯಧಿಕ ಜತೆಯಾಟದ ರನ್ ದಾಖಲೆ ಗಿಲ್ ಕ್ರಿಸ್ಟ್ ಮತ್ತು ಶಾನ್ ಮಾರ್ಷ್ ಹೆಸರಿನಲ್ಲಿದೆ. 2011ರ ಮೇ 17ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಆರ್ ಸಿಬಿ ನಡುವಿನ ಪಂದ್ಯದಲ್ಲಿ ಈ ಜೋಡಿ 206 ರನ್ ಜತೆಯಾಟವಾಡಿತ್ತು.

ಅತ್ಯಧಿಕ ಜತೆಯಾಟದ ರನ್ ದಾಖಲೆಯಲ್ಲಿ ಮತ್ತೊಂದು ಸ್ಥಾನ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರದ್ದೇ. ಕ್ರಿಸ್ ಗೇಲ್ ಮತ್ತು ಕೊಹ್ಲಿ 2012ರ ಮೇ 17ರಂದು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಜೇಯ 204 ರನ್ ಬಾರಿಸಿತ್ತು. ಕ್ರಿಸ್ ಗೇಲ್ ಮತ್ತು ಕೊಹ್ಲಿ ಅವರ ಈ ಜತೆಯಾಟವು ಅತ್ಯಧಿಕ ಜತೆಯಾಟದ ರನ್ ದಾಖಲೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಐಪಿಎಲ್ ಟೂರ್ನಿಯಲ್ಲಿ 200ಕ್ಕೂ ಹೆಚ್ಚು ರನ್ ಜತೆಯಾಟವಾಡಿರುವ ದಾಖಲೆಯ ಪಟ್ಟಿಯಲ್ಲಿ 3 ಸ್ಥಾನಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರದ್ದೇ ಆಗಿದೆ.

Story first published: Saturday, April 10, 2021, 10:35 [IST]
Other articles published on Apr 10, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+