Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೋರಿಸ್‌ಗೆ ಸಿಂಗಲ್‌ ನಿರಾಕರಿಸಿದ ಸಂಜು ಸ್ಯಾಮ್ಸನ್: ನೆಟ್ಟಿಗರ ತಮಾಷೆ

IPL 2021: How The World Reacted To Sanju Samson Denying Chris Morris A Single In Last Over

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 13) ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್‌ ನಡುವಿನ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಮುಖ್ಯಾವಾಗಿ ಸಂಜು ಸ್ಯಾಮ್ಸನ್ ಅವರ 119 (63 ಎಸೆತ) ರನ್ ಕೊಡುಗೆ ಹೆಚ್ಚು ಗಮನ ಸೆಳೆದಿತ್ತು. ಅಂತಿಮವಾಗಿ ರಾಜಸ್ಥಾನ್ 4 ರನ್‌ನಿಂದ ಸೋತಿದ್ದು ನಿಜ. ಆದರೆ ಪಂದ್ಯ ರೋಚಕ ಹಂತಕ್ಕೆ ತಲುಪಿದ್ದಂತೂ ಹೌದು.

ಇತ್ತಂಡಗಳ ಈ ಕುತೂಹಲಕಾರಿ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್‌ನ ಕ್ರಿಸ್ ಮೋರಿಸ್ ಮತ್ತು ನಾಯಕ ಸಂಜು ಸ್ಯಾಮ್ಸನ್ ನಡುವಿನ ಬ್ಯಾಟಿಂಗ್‌ ಗಮನ ಸೆಳೆದಿತ್ತು. ಕೊನೇ ಓವರ್‌ನಲ್ಲಿ ಸಿಂಗಲ್ ತೆಗೆಯಲು ಅವಕಾಶವಿದ್ದರೂ ಕೂಡ ನಾಲ್ ಸ್ಟ್ರೈಕ್‌ನಲ್ಲಿದ್ದ ಮೋರಿಸ್‌ಗೆ ಸಂಜು ಸ್ಟ್ರೈಕ್ ನೀಡಲು ನಿರಾಕರಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ತಮಾಷೆಗೆ ಗುರಿಯಾಗಿದೆ.

ಆರ್‌ಆರ್‌ ಇನ್ನಿಂಗ್ಸ್‌ ವೇಳೆ ಕೊನೇ ಎರಡು ಎಸೆತಗಳಿಗೆ ಆರ್‌ಆರ್‌ ಗೆಲ್ಲಲು 5 ರನ್‌ಗಳು ಬೇಕಿತ್ತು. ಆಗ ಅರ್ಷ್‌ದೀಪ್‌ ಸಿಂಗ್ ಅವರ 5ನೇ ಎಸೆತಕ್ಕೆ ಸ್ಯಾಮ್ಸನ್ ಅವರು ಡೀಪ್‌ ಎಕ್ಸ್‌ಸ್ಟ್ರಾ ಕವರ್‌ನತ್ತ ಚೆಂಡು ಅಟ್ಟಿದರು. ಆಗ ಸಿಂಗಲ್‌ ತೆಗೆಯಲು ಅವಕಾಶವಿತ್ತು. ಆದರೆ ಕೊನೇ ಎಸೆತಕ್ಕೆ ಮೋರಿಸ್‌ಗೆ ಸ್ಟ್ರೈಕ್ ನೀಡಲು ಸ್ಯಾಮ್ಸನ್ ನಿರಾಕರಿಸಿದರು.

ಸಂಜು ಸ್ಯಾಮ್ಸನ್ ಅವರ ಈ ನಡೆಗೆ ಒಮ್ಮೆ ಮೋರಿಸ್ ಕೂಡ ಅವರತ್ತ ವಿಚಿತ್ರವಾಗಿ ನೋಡಿದ್ದರು. ಯಾಕೆಂದರೆ ಆಲ್ ರೌಂಡರ್ ಕ್ರಿಸ್ ಮೋರಿಸ್ ಆರ್‌ಆರ್‌ನಲ್ಲಿ ದುಬಾರಿ ಆಟಗಾರ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಮೋರಿಸ್ ಅವರನ್ನು ಆರ್‌ಆರ್ ಭರ್ಜರಿ 16.25 ಕೋಟಿ ರೂ.ಗೆ ಖರೀದಿಸಿತ್ತು. ಸ್ಯಾಮ್ಸನ್-ಮೋರಿಸ್ ನಡುವಿನ ಈ ನಡೆಗೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Story first published: Tuesday, April 13, 2021, 21:22 [IST]
Other articles published on Apr 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+