ಸೂಪರ್ ಓವರ್‌ಗೆ ನನ್ನನ್ನೂ ಪರಿಗಣಿಸುವಂತೆ ಕೇಳಿಕೊಂಡಿದ್ದೆ: ಅಕ್ಷರ್ ಪಟೇಲ್

ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಹೋರಾಟ ಸಾಕಷ್ಟು ಕುತೂಹಲ ಮೂಡಿಸಿತ್ತು. ಅಂತಿಮ ಹಂತದಲ್ಲಿ ರೋಚಕವಾಗಿ ಸಾಗಿದ ಪಂದ್ಯ ಟೈ ಆಗಿ ಸೂಪರ್ ಓವರ್‌ನಲ್ಲಿ ಫಲಿತಾಂಶವನ್ನು ಪಡೆದುಕೊಂಡಿತು. ಆದರೆ ಈ ಸೂಪರ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಕ್ಷರ್ ಪಟೇಲ್ ಅವರನ್ನು ದಾಳಿಗಿಳಿಸಿ ಯಶಸ್ವಿಯಾಗಿತ್ತು. ಈ ನಿರ್ಧಾರದ ಬಗ್ಗೆ ಸ್ವತಃ ಅಕ್ಷರ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ.
"ಪಂದ್ಯದ ಸ್ಕೋರ್ ಸಮಾನವಾಗಿ ಟೈ ಫಲಿತಾಂಶ ಪಡೆದ ನಂತರ ನಾನು ರಿಷಭ್ ಪಂತ್ ಜೊತೆಗೆ ಮಾತನಾಡುತ್ತಾ ಈ ಪಿಚ್‌ನಲ್ಲಿ ನಾನು ಸಮರ್ಥವಾಗಿ ಬೌಲಿಂಗ್ ದಾಳಿ ನಡೆಸಬಲ್ಲೆ. ನನ್ನನ್ನು ಕೂಡ ಸೂಪರ್ ಓವರ್‌ನಲ್ಲಿ ಪರಿಗಣಿಸಬಹುದು ಎಂದು ಹೇಳಿಕೊಂಡಿದ್ದೆ" ಎಂದು ಅಕ್ಷರ್ ಪಟೇಲ್ ವಿವರಿಸಿದ್ದಾರೆ.
"ಈ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ರನ್ ಗಳಿಸುವುದು ಅಸಾಧ್ಯ ಎಂದು ತಿಳಿದಿತ್ತು. ಬಳಿಕ ರಿಷಬ್ ಪಂತ್ ರಿಕಿ ಪಾಂಟಿಂಗ್ ಜೊತೆಗೆ ಮಾತನಾಡಿ ನನಗೆ ಬೌಲಿಂಗ್ ನಡೆಸಲು ಸೂಚನೆಯನ್ನು ನೀಡಿದರು" ಎಂದು ಅಕ್ಷರ್ ಪಟೇಲ್ ಹೇಳಿಕೆಯನ್ನು ನೀಡಿದ್ದಾರೆ.
ಅಕ್ಷರ್ ಪಟೇಲ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಮದ್ಯದಲ್ಲಿ ಈ ಬಾರಿಯ ಐಪಿಎಲ್‌ನ ಪ್ರಥಮ ಪಂದ್ಯವನ್ನು ಆಡಿದರು. ಕೊರೊನಾ ವೈರಸ್‌ಗೆ ತುತ್ತಾಗಿದ್ದ ಅಕ್ಷರ್ ಪಟೇಲ್ ಕ್ವಾರಂಟೈನ್‌ನಲ್ಲಿ ಸುದೀರ್ಘ ಕಾಲ ಕಳೆದಿದ್ದರು. ಸಂಪೂರ್ಣ ಚೇತರಿಕೆ ಕಂಡ ಬಳಿಕ ಈಗ ತಂಡವನ್ನು ಸೇರಿಕೊಂಡಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications