ಐಪಿಎಲ್ 2021: ನಾಯಕತ್ವವನ್ನು ಅನುಭವಿಸಲು ಆರಂಭಿಸಿದ್ದೇನೆ: ರಿಷಭ್ ಪಂತ್

ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಮಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅದ್ಭುತ ಜಯವನ್ನು ದಾಖಲಸಿತು. ಈ ಗೆಲುವಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಪ್ರತಿಕ್ರಿಯಿಸಿದ್ದು ತಾನೀಗ ನಾಯಕತ್ವವನ್ನು ಆನುಭವಿಸಲು ಆರಂಭಿಸಿದ್ದೇನೆ ಎಂದಿದ್ದಾರೆ.

ಸೋಲಿನ ನಂತರ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಬಹಳ ಮುಖ್ಯವಾಗುತ್ತದೆ. ನಾನು ಈಗಾಗಲೇ ನಾಯಕತ್ವವನ್ನು ಅನುಭವಿಸಲು ಆರಂಭಿಸಿದ್ದೇನೆ. ನಾನು ನನ್ನ ಸುತ್ತಲಿನ ವಾತಾವರಣವನ್ನು ಹಗುರವಾಗಿಡಲು ಬಯಸುತ್ತೇನೆ. ಹಾಗಿದ್ದಾಗ ಆಟಗಾರರು ಸಹಜತನದಿಂದ ತಮ್ಮ ಆಟವನ್ನು ಆನಂದಿಸಬಹುದು ಎಂದು ಭಾವಿಸುತ್ತೇನೆ" ಎಂದಿದ್ದಾರೆ ರಿಷಭ್ ಪಂತ್.

ಐಪಿಎಲ್: ಎಂಎಸ್ ಧೋನಿಗೆ ಗೌರವ ಸಲ್ಲಿಸಿದ ರಾಜಸ್ಥಾನ್ ರಾಯಲ್ಸ್

"ನಾವು ನಿಜಕ್ಕೂ ಒತ್ತಡದಲ್ಲಿದ್ದೆವು. ಯಾಕೆಂದರೆ ಪಿಚ್ ಬೌಲಿಂಗ್‌ನಲ್ಲಿ ನಮಗೆ ಹೆಚ್ಚು ಸಹಕಾರಿಯಾಗಿರಲಿಲ್ಲ. ಜೊತಗೆ ಅವರು ಅತ್ಯುತ್ತಮ ಆರಂಭವನ್ನು ಪಡೆದುಕೊಂಡರು. ಆದರೆ ನಮ್ಮ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ಅವರನ್ನು 190ರ ಸನಿಹದಲ್ಲಿ ಕಟ್ಟಿಹಾಕಲು ಯಶಸ್ವಿಯಾದರು" ಎಂದು ಪಂತ್ ಪ್ರತಿಕ್ರಿಯಿಸಿದ್ದಾರೆ.

ಇನ್ನು ಇದೇ ಸಂದರ್ಣದಲ್ಲಿ ಶಿಖರ್ ಧವನ್ ಪ್ರದರ್ಶನದ ಬಗ್ಗೆ ಮಾತನಾಡಿದ ಪಂತ್, "ಆತ ಸಾಕಷ್ಟು ಅನುಭವವನ್ನು ಹೊಂದಿರುವ ಆಟಗಾರ. ನೀವು ಆತನೊಂದಿಗೆ ಯಾವುದೇ ವೊಚಾರದ ಬಗ್ಗೆಯೂ ಮಾತನಾಡಬಹುದು, ಫೀಲ್ಡಿಂಗ್ ಹೇಗೆ ನಿಲ್ಲಿಸಬಹುದು ಎಂಬಲ್ಲಿದ ಹಿಡಿದು ಸಾಕಷ್ಟು ವಿಚಾರಗಳನ್ನು ಆತನಿಂದ ಪಡೆಯಬಹುದು. ಅಂತಿಮವಾಗಿ ಆತ ನೀಡುವ ಸಲಹೆಗಳು ತಂಡಕ್ಕೆ ಉಪಯುಕ್ತವಾಗಿರುತ್ತದೆ" ಎಂದು ರಿಷಭ್ ಪಂತ್ ಹೇಳಿದ್ದಾರೆ,

For Quick Alerts
ALLOW NOTIFICATIONS
For Daily Alerts
Story first published: Monday, April 19, 2021, 21:04 [IST]
Other articles published on Apr 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X