Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: 2020ರ ಐಪಿಎಲ್ ಬ್ರ್ಯಾಂಡ್ ಮೌಲ್ಯ ಕುಸಿತ

IPL 2021: IPL brand value 2020 falls by 3.6%, says Duff & Phelps

ನವದೆಹಲಿ: ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ 2020ರ ಬ್ರ್ಯಾಂಡ್‌ ವ್ಯಾಲ್ಯೂ ಶೇ. 3.6%ರಷ್ಟು ಕುಸಿದಿದೆ ಎಂದು ಡಫ್ & ಫೆಲ್ಪ್ಸ್ ವರದಿ ಹೇಳಿದೆ. 2020ರಲ್ಲಿ ನಗದು ಶ್ರೀಮಂತ ಕ್ರಿಕೆಟ್ ಟೂರ್ನಿಯನ್ನು ಕಾಡಿದ ಮಾರಕ ಕೊರೊನಾವೈರಸ್‌ನಿಂದಾಗಿ ಐಪಿಎಲ್‌ ಮೌಲ್ಯ ಕುಸಿತ ಕಂಡಿದ್ದಾಗಿ ವರದಿ ತಿಳಿಸಿದೆ.

ಕೋವಿಡ್ 19ನಿಂದಾಗಿ 2020ರಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಆರ್ಥಿಕತೆ ಕುಸಿದಿತ್ತು. ಕ್ರೀಡಾಕ್ಷೇತ್ರಕ್ಕೂ ಕೊರೊನಾ ಬಿಸಿ ತಟ್ಟಿತ್ತು. ಒಂದಿಡೀ ವರ್ಷ ಪ್ರಮುಖ ಕ್ರೀಡಾಕೂಟಗಳನ್ನು ನಡೆಸಲಾಗಿರಲಿಲ್ಲ. ಮುಖ್ಯವಾಗಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿರಲಿಲ್ಲ. ಐಪಿಎಲ್ ಮೌಲ್ಯ ಕುಸಿತವನ್ನು ಕೋ.ರೂ.ಗಳಲ್ಲಿ ಅಂದಾಜಿಸುವುದಾದರೆ 47,500 ಕೋ.ರೂ.ನಿಂದ 45,800 ಕೋ.ರೂ.ಗೆ ಕುಸಿತ ಕಂಡಿದೆ.

ಬ್ರ್ಯಾಂಡ್‌ ಮೌಲ್ಯಗಳನ್ನು ಕಳೆದು ಕೊಂಡ ಐಪಿಎಲ್ ಫ್ರಾಂಚೈಸಿಗಳಲ್ಲಿ ಮೊದಲ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಇದೆ. ಕಳೆದ ವರ್ಷ ಸಿಎಸ್‌ಕೆ ಬ್ರ್ಯಾಂಡ್‌ ಮೌಲ್ಯ 732 ಕೋ.ರೂ.ನಿಂದ 611 ಕೋ.ರೂ. ಕುಸಿತ ಕಂಡಿತ್ತು. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಮೌಲ್ಯ 629 ಕೋ.ರೂ.ನಿಂದ 543 ಕೋ.ರೂ.ಗೆ ಕುಸಿದಿತ್ತು.

ಐಪಿಎಲ್ ಫ್ರಾಂಚೈಸಿಗಳಲ್ಲಿ ಅತೀ ಹೆಚ್ಚು ಬ್ರ್ಯಾಂಡ್‌ ಮೌಲ್ಯ ಹೊಂದಿರುವ, ಕಳೆದ ಐದು ವರ್ಷಗಳಿಂದಲೂ ಬ್ರ್ಯಾಂಡ್‌ ಮೌಲ್ಯ ವಿಚಾರವಾಗಿ ನಂ.1 ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ಬ್ರ್ಯಾಂಡ್‌ ಮೌಲ್ಯ 2019ರಲ್ಲಿ 761 ಕೋ.ರೂ. ಇತ್ತು. ಆದರೆ ಕಳೆದ ವರ್ಷ ಎಂಐ ಮೌಲ್ಯ ಕೂಡ 5.9 ಶೇ. ಇಳಿದಿತ್ತು.

Story first published: Wednesday, March 10, 2021, 19:55 [IST]
Other articles published on Mar 10, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+