ಇಂಗ್ಲೆಂಡ್ ಟಿ20 ಸರಣಿಯ ಬಳಿಕ ಮುಂಬೈ ತಂಡವನ್ನು ಸೇರಿಕೊಂಡ ಇಶಾನ್ ಕಿಶನ್

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪದಾರ್ಪಣೆ ಮಾಡಿ ಅದ್ಭುತ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಭರವಸೆ ಮೂಡಿಸಿದ ಆಟಗಾರ ಇಶಾನ್ ಕಿಶನ್. ಮೊದಲ ಪಂದ್ಯದಲ್ಲೇ ನಿರ್ಭೀತ ಆಟವನ್ನು ಪ್ರದರ್ಶಿಸಿ ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದರು. ಟಿ20 ಸರಣಿ ಈಗ ಅಂತ್ಯವಾಗಿದ್ದು ಇಶಾನ್ ಕಿಶನ್ ಐಪಿಎಲ್‌ಗೆ ಸಜ್ಜಾಗಿದ್ದಾರೆ.
ಟೀಮ್ ಇಂಡಿಯಾದ ಯಶಸ್ವೀ ಸರಣಿಯ ನಂತರ ಇಶಾನ್ ಕಿಶನ್ ಈಗ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದು ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರ ಮುಂಬೈ ಇಮಡಿಯನ್ಸ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ಬಳಗವನ್ನು ಕೂಡಿಕೊಂಡಿರುವುದನ್ನು ಖಚಿತಪಡಿಸಿದೆ. "ರಾಷ್ಟ್ರೀಯ ಸೇವೆಯಿಂದ ನೇರವಾಗಿ... ಈತ ಮನೆಗೆ ಬಂದಿದ್ದಾನೆ, ಸ್ವಾಗತ ಇಶಾನ್ ಕಿಶನ್" ಎಂದು ಮುಂಬೈ ಇಂಡಿಯನ್ಸ್ ಸ್ವಾಗತಿಸಿದೆ.
ಇನ್ನು ಬಳಿಕ ಸ್ವತಃ ಇಶಾನ್ ಕಿಶನ್ ಪ್ರತಿಕ್ರಿಯೆಯನ್ನು ನೀಡಿದ್ದು ಟೀಮ್ ಇಂಡಿಯಾ ಪರವಾಗಿ ಮೊದಲ ಬಾರಿಗೆ ಆಡಿದ ಅನುಭವವನ್ನು ಹೇಳಿಕೊಂಡಿದ್ದಾರೆ. "ತೆರೆಮರೆ ಹಾಕಿದ ಸಾಕಷ್ಟು ಶ್ರಮ, ನಂಬಿಕೆ ಮತ್ತು ಬೆಂಬಲಗೆ ಬೆಲೆ ದೊರೆತಿದೆ. ನಿಮ್ಮ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಭಾರತ ಪರ ಆಡುವದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ" ಎಂದು ಇಶಾನ್ ಕಿಶನ್ ಹೇಳಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ನೀಡಿದ ಅದ್ಭುತವಾದ ಪ್ರದರ್ಶನದ ಹಿನ್ನೆಲೆಯಲ್ಲಿ ಇಶಾನ್ ಕಿಶನ್ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದರು. 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಕಿಶನ್ 14 ಪಂದ್ಯಗಳಲ್ಲಿ 57ರ ಸರಾಸರಿಯಲ್ಲಿ 516 ರನ್ ಗಳಿಸಿದ್ದರು.
ಇದೀಗ ಇಶಾನ್ ಕಿಶನ್ ಮತ್ತೊಂದು ಐಪಿಎಲ್‌ಗೆ ಸಜ್ಜಾಗಿದ್ದು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಮತ್ತೊಮ್ಮೆ ಮಿಂಚುಹರಿಸಲು ಅವರು ಸಜ್ಜಾಗಿದ್ದಾರೆ. ಏಪ್ರಿಲ್ 9ರಿಂದ ಐಪಿಎಲ್ 14ನೇ ಆವೃತ್ತಿ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications