Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಮ್ಮ ಪಂದ್ಯ ಬ್ಲಾಕ್‌ಬಸ್ಟರ್; ಪಂದ್ಯಕ್ಕೂ ಮುನ್ನ ಧೋನಿ ಬಗ್ಗೆ ಆರ್‌ಸಿಬಿ ಹೇಳಿದ್ದಿಷ್ಟು

IPL 2021 : It promises to be no less than a blockbuster when these two legends come together says RCB

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕಾಯುವಷ್ಟು ಬಹುಷಃ ಐಪಿಎಲ್ ಟೂರ್ನಿಯ ಬೇರೆ ಯಾವುದೇ ತಂಡಗಳ ನಡುವಿನ ಪಂದ್ಯಗಳಿಗೂ ಕಾಯುವುದಿಲ್ಲ ಎನಿಸುತ್ತದೆ. ಭಾನುವಾರ ( ಏಪ್ರಿಲ್ 25 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿದ್ದು ಪಂದ್ಯದ ಬಗ್ಗೆ 2 ದಿನಗಳ ಮುನ್ನವೇ ಟ್ವಿಟರ್ ಟ್ರೆಂಡ್ ನಡೆದಿತ್ತು.

ಕೇವಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಮಾತ್ರವಲ್ಲದೆ ಇತರ ತಂಡದ ಅಭಿಮಾನಿಗಳು ಸಹ ಈ 2 ತಂಡಗಳ ನಡುವಿನ ಪಂದ್ಯ ಎಂದರೆ ತೀವ್ರ ಕುತೂಹಲದಿಂದ ವೀಕ್ಷಿಸುತ್ತಾರೆ. ಭಾನುವಾರದ ಪಂದ್ಯದ ಕುರಿತು ಸಹ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟಿಕೊಂಡಿದ್ದು, ಈ ಬಾರಿಯ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ಈ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಮಾಜಿಕ ಜಾಲತಾಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಮುಖಾಮುಖಿಯ ಕುರಿತು ಹೆಮ್ಮೆಯ ಪೋಸ್ಟ್‌ವೊಂದನ್ನು ಮಾಡಿದೆ. 'ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಈ ಇಬ್ಬರು ಲೆಜೆಂಡ್ಸ್ ಒಟ್ಟಿಗೆ ಬಂದಾಗ ಅದು ಯಾವ ಬ್ಲಾಕ್‌ಬಸ್ಟರ್ ಗೂ ಕಡಿಮೆಯಿಲ್ಲ, ಇದಕ್ಕಿಂತ ಉತ್ತಮವಾದ ಭಾನುವಾರದ ಟ್ರೀಟ್ ಮತ್ತೊಂದಿಲ್ಲ' ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಇಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಬರೆದುಕೊಂಡಿದೆ.

ಭಾನುವಾರ ನಡೆಯಲಿರುವ ಇಬ್ಬರ ನಡುವಿನ ಪಂದ್ಯ ಅಗ್ರಸ್ಥಾನಕ್ಕಾಗಿ ನಡೆಯುವ ಗುದ್ದಾಟ ಎಂದೇ ಹೇಳಬಹುದು. ಟೂರ್ನಿಯಲ್ಲಿ ಸೋಲನ್ನೇ ಕಂಡಿರದ ಬೆಂಗಳೂರು ತಂಡ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಲಿದೆಯೇ? ಅಥವಾ ಸತತವಾಗಿ 3 ಪಂದ್ಯಗಳನ್ನು ಗೆದ್ದು ಯಶಸ್ಸಿನ ಹಾದಿಯಲ್ಲಿರುವ ಚೆನ್ನೈ ಮತ್ತೊಂದು ಪಂದ್ಯದಲ್ಲಿ ಜಯಭೇರಿ ಬಾರಿಸಲಿದೆಯೇ? ಕಾದು ನೋಡಬೇಕು.

Story first published: Sunday, April 25, 2021, 10:41 [IST]
Other articles published on Apr 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+