Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ನಡೆಸುವುದು ಅಕ್ರಮವೆಂದು ಹಿಂದೆಸರಿದ ಇಂಗ್ಲೆಂಡ್! ; ಕಾರಣವೇನು ಗೊತ್ತಾ?

IPL 2021 : It will be illegal to host the IPL 2021 here says Hampshire county boss
IPL ಅಭಿಮಾನಿಗಳ ಆಸೆಗೆ ಹುಳಿ ಹಿಂಡಿದ ಇಂಗ್ಲೆಂಡ್ | Oneindia Kannada

ಪ್ರಸ್ತುತ ಐಪಿಎಲ್ ಟೂರ್ನಿ ಏಪ್ರಿಲ್ 9ರಂದು ಆರಂಭವಾಗಿ ಯಶಸ್ವಿಯಾಗಿ ಮೇ 4ರವರೆಗೂ ಯಾವುದೇ ಅಡಚಣೆಯಿಲ್ಲದೆ ನಡೆದಿತ್ತು. ನಂತರ ವಿವಿಧ ತಂಡಗಳ ಕೆಲ ಆಟಗಾರರಿಗೆ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಮುಂದೂಡಿದೆ. ಹೀಗಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಹೇಗಾದರೂ ಮಾಡಿ ಮೊಟಕುಗೊಂಡಿರುವ ಐಪಿಎಲ್ ಟೂರ್ನಿಯನ್ನು ಪೂರ್ಣಗೊಳಿಸಬೇಕೆಂದು ಬಿಸಿಸಿಐ ಚಿಂತನೆ ನಡೆಸಿದೆ.

ಭಾರತದಲ್ಲಿ ಐಪಿಎಲ್ ಪಂದ್ಯಗಳನ್ನು ನಿಲುಗಡೆ ಮಾಡಿದ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕೌಂಟಿ ಕ್ರಿಕೆಟ್ ಕ್ಲಬ್‌ಗಳು 2021ರ ಐಪಿಎಲ್ ಟೂರ್ನಿಯ ಆತಿಥ್ಯವನ್ನು ವಹಿಸಲು ಪ್ರಸ್ತಾಪಿಸಿದ್ದವು. ಐಪಿಎಲ್ ಟೂರ್ನಿಯನ್ನು ಇಂಗ್ಲೆಂಡ್‌ನಲ್ಲಿಯೇ ನಡೆಸಲಿ ಎಂದು ಎಂಸಿಸಿ, ಸರ್ರೆ, ವಾರ್ವಿಕ್‌ಷೈರ್ ಮತ್ತು ಲಂಕಾಷೈರ್ ಕೌಂಟಿಗಳು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ಗೆ ಪತ್ರದ ಮೂಲಕ ತಿಳಿಸಿದ್ದವು. ಇಂಗ್ಲೆಂಡ್ ಕೌಂಟಿಗಳ ಈ ಪ್ರಸ್ತಾಪದ ಸುದ್ದಿಯನ್ನು ಕೇಳಿ ಕ್ರೀಡಾಭಿಮಾನಿಗಳಲ್ಲಿ ಐಪಿಎಲ್ ಟೂರ್ನಿ ಮುಂದುವರಿಯುತ್ತದೆಂಬ ಸಂತಸ ಮೂಡಿತ್ತು. ಆದರೆ ಕೇವಲ ಒಂದೇ ದಿನದಲ್ಲಿ ಆ ಖುಷಿಗೆ ಹ್ಯಾಂಪ್‌ಶೈರ್ ಕೌಂಟಿ ತಣ್ಣೀರನ್ನು ಎರಚಿದೆ.

'ಇಂಗ್ಲೆಂಡ್‌ನಲ್ಲಿ ಐಪಿಎಲ್ ಟೂರ್ನಿಯ ಆತಿಥ್ಯ ವಹಿಸಲು ವಿವಿಧ ಕೌಂಟಿಗಳು ಹೇಗೆ ಪ್ರಸ್ತಾಪಿಸಿದವೋ ಅರ್ಥವಾಗುತ್ತಿಲ್ಲ, ಇಲ್ಲಿ ಐಪಿಎಲ್ ನಡೆಸುವ ಪ್ರಸ್ತಾಪ ನಡೆದಿದೆ ಎಂಬ ಸುದ್ದಿ ನನ್ನ ಕಿವಿಗೆ ಬಿತ್ತು, ಆದರೆ ಇದು ಹೇಗೆ ಸಾಧ್ಯವಾಗುತ್ತದೆ ಎಂಬುದು ನನಗಂತೂ ತಿಳಿದಿಲ್ಲ ಯಾಕೆಂದರೆ ಒಪ್ಪಂದವೊಂದರ ಪ್ರಕಾರ ಐಪಿಎಲ್ ಟೂರ್ನಿಯ ಆತಿಥ್ಯವನ್ನು ಇಂಗ್ಲೆಂಡ್‌ನಲ್ಲಿ ವಹಿಸುವುದು ಅಕ್ರಮ' ಎಂದು ಹ್ಯಾಂಪ್‌ಶೈರ್ ಕೌಂಟಿ ಬಾಸ್ ತಿಳಿಸಿದರು. ಈ ಮೂಲಕ ಇಂಗ್ಲೆಂಡ್‌ನಲ್ಲಿ ಐಪಿಎಲ್ ಟೂರ್ನಿ ಮುಂದುವರಿಯುತ್ತದೆ ಎಂದು ಖುಷಿಪಟ್ಟಿದ್ದ ಕ್ರೀಡಾಭಿಮಾನಿಗಳಿಗೆ ಭಾರೀ ನಿರಾಸೆಯುಂಟಾಗಿದೆ.

Story first published: Friday, May 7, 2021, 17:22 [IST]
Other articles published on May 7, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+