ಬಟ್ಲರ್ ಮುದ್ದಾದ ಪುತ್ರಿಗೆ ವಿಶೇಷ ಸಂದೇಶ ಬರೆದ ರಾಜಸ್ಥಾನ್ ರಾಯಲ್ಸ್

ಚೆನ್ನೈ: ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರ ಪುತ್ರಿ ಜಾರ್ಜಿಯಾ ಏಪ್ರಿಲ್ 20ಕ್ಕೆ 2ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ತಮ್ಮ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿರುವ ಬಟ್ಲರ್ ಅವರ ಪುತ್ರಿಗೆ ರಾಜಸ್ಥಾನ್ ರಾಯಲ್ಸ್ ವಿಶೇಷ ಸಂದೇಶ ಬರೆದುಕೊಂಡಿದೆ (ಚಿತ್ರಕೃಪೆ: ರಾಜಸ್ಥಾನ್ ರಾಯಲ್ಸ್).
ಟ್ವಿಟರ್‌ನಲ್ಲಿ ಜಾರ್ಜಿಯಾ ತನ್ನ ತಂದೆ ಜೋಸ್ ಬಟ್ಲರ್ ಜೊತೆ ಇರುವ ಚಿತ್ರವನ್ನು ಹಾಕಿಕೊಂಡಿರುವ ರಾಜಸ್ಥಾನ್ ರಾಯಲ್ಸ್, 'ನಮ್ಮ ಮುದ್ದಾದ ರಾಯಲ್ಸ್ 2ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾಳೆ. ಜಾರ್ಜಿಯಾಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದೆ.
ರಾಜಸ್ಥಾನ್ ತಂಡ ಈ ಐಪಿಎಲ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 1 ಪಂದ್ಯ ಗೆದ್ದು 2ರಲ್ಲಿ ಸೋತಿದೆ. ಅಂಕ ಪಟ್ಟಿಯಲ್ಲಿ ರಾಜಸ್ಥಾನ್ 6ನೇ ಸ್ಥಾನದಲ್ಲಿದೆ. -0.719 ನೆಟ್ ರನ್‌ರೇಟ್ ಹೊಂದಿರುವ ರಾಜಸ್ಥಾನ್‌ಗೆ ಮುಂದಿನ ಪಂದ್ಯಗಳಲ್ಲಿ ಗೆಲುವು ಅನಿವಾರ್ಯವೆನಿಸಿದೆ.
30ರ ಹರೆಯದ ಜೋಸ್ ಬಟ್ಲರ್ 50 ಟೆಸ್ಟ್ ಪಂದ್ಯಗಳಲ್ಲಿ 2728 ರನ್, 148 ಏಕದಿನ ಪಂದ್ಯಗಳಲ್ಲಿ 3872 ರನ್, 79 ಟಿ20ಐ ಪಂದ್ಯಗಳಲ್ಲಿ 1723 ರನ್, 61 ಐಪಿಎಲ್ ಪಂದ್ಯಗಳಲ್ಲಿ 1790 ರನ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications