
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿಗಳಾದ ಕಗಿಸೋ ರಬಡಾ ಹಾಗೂ ಅನ್ರಿಕ್ ನಾರ್ಕಿಯಾ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿಳಿದಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊದಲ ಪಂದ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಈ ಇಬ್ಬರು ವೇಗಿಗಳು ಕೂಡ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಯೋಬಬಲ್‌ಗೆ ಸೇರಿಕೊಳ್ಳುವ ಮುನ್ನ ಕ್ವಾರಂಟೈನ್ ಪೂರೈಸಿಕೊಳ್ಳಬೇಕಿದೆ. 7 ದಿನಗಳ ಕ್ವಾರಂಟೈನ್ ಪೂರೈಸಿದ ಬಳಿಕವೇ ಡೆಲ್ಲಿ ತಂಡದ ಬಯೋಬಬಲ್‌ಅನ್ನು ಸೇರಿಕೊಳ್ಳಲಿದ್ದಾರೆ. ಹೀಗಾಗಿ ಚೆನ್ನೈ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಈ ಇಬ್ಬರು ಆಟಗಾರರ ಸೇವೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದುಕೊಳ್ಳಲಿದೆ.
ಕಳೆದ ಬಾರಿಯ ಆವೃತ್ತಿಯಲ್ಲಿ ಈ ಇಬ್ಬರು ವೇಗಿಗಳು ಕೂಡ ಡೆಲ್ಲಿ ತಂಡದ ಪರವಾಗಿ ಅದ್ಭುತವಾದ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದರು. ಈ ಕಾರಣದಿಂದಾಗಿ 13ನೇ ಆವೃತ್ತಿಯಲ್ಲಿ ಡೆಲ್ಲಿ ಫೈನಲ್ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಈ ಇಬ್ಬರು ಆಟಗಾರರನ್ನು ಕೂಡ ಡೆಲ್ಲಿ ತಂಡ ರೀಟೈನ್ ಮಾಡಿಕೊಂಡಿತ್ತು.
"ಡೆಲ್ಲಿ ಕ್ಯಾಪಿಟಲ್ಸ್‌ಮ ವೇಗಿಗಳಾದ ಕಗಿಸೋ ರಬಡಾ ಹಾಗೂ ಅನ್ರಿಕ್ ನಾರ್ಕಿಯಾ ಮಂಗಳವಾರ ಮುಂಬೈನ ಹೋಟೆಲ್‌ಗೆ ತಲುಪಿದ್ದಾರೆ. ರಬಡಾ ಹಾಗೂ ನಾರ್ಕಿಯಾ ಇಬ್ಬರು ಕೂಡ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ" ಎಂದು ಫ್ರಾಂಚೈಸಿ ಮಾಹಿತಿಯನ್ನು ನೀಡಿದೆ.
ಕಳೆದ ಬಾರಿಯ ಆವೃತ್ತಿಯಲ್ಲಿ ಶ್ರೇಯಸ್ ಐಯ್ಯರ್ ನೇತೃತ್ವದಲ್ಲಿ ಡೆಲ್ಲಿ ತಂಡ ಫೈನಲ್ ಪ್ರವೇಶ ಪಡೆದುಕೊಂಡಿತ್ತು. ಆದರೆ ಈ ಬಾರಿ ಶ್ರೇಯಸ್ ಐಯ್ಯರ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಲಭ್ಯರಾಗಿದ್ದು ರಿಷಬ್ ಪಂತ್‌ಗೆ ನಾಯಕತ್ವದ ಜವಾಬ್ಧಾರಿ ದೊರೆತಿದೆ.