ಐಪಿಎಲ್ 2021: ಆಡುವ ಬಳಗಕ್ಕೆ ಸೇರಿಕೊಳ್ಳಲು ಕಗಿಸೋ ರಬಡಾಗೆ ಸಿಕ್ತು ಗ್ರೀನ್ ಸಿಗ್ನಲ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಡುವ ಬಳಗಕ್ಕೆ ಸೇರಿಕೊಳ್ಳಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಂದ್ಯಕ್ಕೆ ಮುನ್ನ ಈ ಬೆಳವಣಿಗೆ ಆಗಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಅನ್ರಿಕ್ ನಾರ್ಕಿಯಾ ಕೊರೊನಾ ವೈರಸ್ ತುತ್ತಾಗಿರುವುದು ಖಚಿತವಾದ ನಂತರ ಕಗಿಸೋ ರಬಡಾ ಅವರ ಕೊರೊನಾ ವೈರಸ್ ವರದಿಯ ಬಗ್ಗೆಯೂ ಆತಂಕ ಮೂಡಿಸಿತ್ತು. ರಬಡಾ ಅವವರ ವರದಿ ನೆಗೆಟಿವ್ ಬಂದಿತ್ತಾದರೂ ಮತ್ತೊಂದು ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿತ್ತು. ಅದರಲ್ಲಿಯೂ ಕಗಿಸೋ ರಬಡಾ ಅವರ ವರದಿ ನೆಗೆಟಿವ್ ಬಂದಿದೆ.
ದಕ್ಷಿಣ ಆಫ್ರಿಕಾ ತಂಡದ ವೇಗಿಗಳಾದ ಕಗಿಸೋ ರಬಡಾ ಹಾಗೂ ಅನ್ರಿಕ್ ನಾರ್ಕಿಯಾ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ರಾಷ್ಟ್ರೀಯ ತಂಡದ ಸೇವೆಯ ನಂತರ ಐಪಿಎಲ್ ಆಡಲು ಭಾರತಕ್ಕೆ ಬಂದು ಕಡ್ಡಾಯ ಕ್ವಾರಂಟೈನ್‌ನಲ್ಲಿ ಭಾಗಿಯಾಗಿದ್ದರು. ಆದರೆ ಈ ಸಂದರ್ಭದಲ್ಲಿ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನಾರ್ಕಿಯಾ ಅವರ ವರದಿಯ ಪಾಸಿಟಿವ್ ಬಂದಿತ್ತು. ಹೀಗಾಗಿ ರಬಡಾ ಅವರ ಮತ್ತೊಂದು ವರದಿಗೆ ಕಾಯಲಾಗಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ವಿಟ್ಟರ್ ಖಾತೆಯಲ್ಲಿ ರಬಡಾ ಅವರು ಅಂತಿಮ ಹಂತದ ಅಭ್ಯಾಸದಲ್ಲಿ ತೊಡಗಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ವೇಗಿ ಸಜ್ಜಾಗುತ್ತಿರುವುದನ್ನು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications