Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೈದರಾಬಾದ್‌ಗೆ ಶೀಘ್ರ ಮರಳುವ ಮುನ್ಸೂಚನೆ ನೀಡಿದ ವಿಲಿಯಮ್ಸನ್

IPL 2021: Kane Williamson Hoping to be fit and ready within the week

ಚೆನ್ನೈ: ನ್ಯೂಜಿಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್‌ ಕೇನ್ ವಿಲಿಯಮ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಆರಂಭಿ ಎರಡು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ಆದರೆ ಶೀಘ್ರ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯುವುದಾಗಿ ವಿಲಿಯಮ್ಸನ್ ಮಾಹಿತಿ ನೀಡಿದ್ದಾರೆ.

ಮೊಣಕ್ಕೈ ಗಾಯಕ್ಕೀಡಾಗಿದ್ದ ಕೇನ್ ವಿಲಿಯಮ್ಸನ್, ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಎರಡು ಪಂದ್ಯಗಳಲ್ಲಿ ಹೈದರಾಬಾದ್‌ ಸೋತಿತ್ತು.

30ರ ಹರೆಯದ ವಿಲಿಯಮ್ಸನ್ ಮತ್ತೆ ತಂಡ ಸೇರಿಕೊಂಡರೆ ಸನ್ ರೈಸರ್ಸ್ ಹೈದರಾಬಾದ್‌ನ ಮಿಡ್ಲ್‌ ಆರ್ಡರ್ ಇನ್ನಷ್ಟು ಬಲಗೊಳ್ಳಲಿದೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ವೇಳೆ ಮೊಣಕೈ ಗಾಯಕ್ಕೀಡಾಗಿದ್ದ ವಿಲಿಯಮ್ಸನ್ ತಂಡದಿಂದ ಹೊರಗುಳಿದಿದ್ದರು.

ಗಾಯದ ಸ್ಥಿತಿಯ ಬಗ್ಗೆ ಮಾತನಾಡಿದ ವಿಲಿಯಮ್ಸನ್, 'ಗಾಯ ಚೆನ್ನಾಗಿ ಗುಣವಾಗುತ್ತಿದೆ. ಒಂದು ವಾರದೊಳಗೆ ಫಿಟ್‌ ಆಗಿ ತಯಾರಾಗಲಿದ್ದೇನೆ,' ಎಂದಿದ್ದಾರೆ. ಹೈದರಾಬಾದ್ ತಂಡಕ್ಕೆ ಏಪ್ರಿಲ್ 17ರಂದು ಮುಂದಿನ ಪಂದ್ಯವಿದೆ. ಅಂದು ಡೇವಿಡ್ ವಾರ್ನರ್ ಪಡೆ ಮುಂಬೈ ಇಂಡಿಯನ್ಸ್ ಸವಾಲು ಸ್ವೀಕರಿಸಲಿದೆ. ಚೆನ್ನೈಯಲ್ಲಿ ಈ ಪಂದ್ಯ ನಡೆಯಲಿದೆ.

Story first published: Friday, April 16, 2021, 18:40 [IST]
Other articles published on Apr 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+