Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಸನಿಹದಲ್ಲಿ ಆರ್‌ಸಿಬಿ ಪರ ಡೈಲಾಗ್ ಹೊಡೆದು ಚಾಲೆಂಜ್ ಹಾಕಿದ ನಟ ಚಿಕ್ಕಣ್ಣ

IPL 2021: Kannada Comedy Actor Chikkanna Dialogue on RCB

ಐಪಿಎಲ್ ಹತ್ತಿರ ಬರುತ್ತಿದ್ದಂತೆಯೇ ಆರ್‌ಸಿಬಿ ಅಭಿಮಾನಿಗಳು ಈಗ ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲಿಸಲು ಸಜ್ಜಾಗಿದ್ದಾರೆ. ಭಿನ್ನ ವಿಭಿನ್ನ ರೀತಿಯಲ್ಲಿ ಅಭಿಮಾನವನ್ನು ವ್ಯಕ್ತಪಡಿಸುವ ಅಭಿಮಾನಿಗಳು ಆರ್‌ಸಿಬಿಗೋಸ್ಕರ ಸಾಕಷ್ಟು ಸ್ಲೋಗನ್‌ಗಳನ್ನು ಹೇಳುತ್ತಾ ಬೆಂಬಲವನ್ನು ವ್ಯಕ್ತಡಿಸುತ್ತಾರೆ. ಇದಕ್ಕೆ ಈಗ ಕನ್ನಡದ ಹಾಸ್ಯ ನಟ ಚಿಕ್ಕಣ್ಣ ಚಾಲೆಂಜ್ ಒಂದನ್ನು ನೀಡುವ ಮೂಲಕ ಮತ್ತಷ್ಟು ರಂಗು ತುಂಬಿದ್ದಾರೆ.

ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಕನ್ನಡ ಸಿನಿಮಾ 'ಕೃಷ್ಣ ಟಾಕೀಸ್' ಚಿತ್ರದಲ್ಲಿ ಈ ಆರ್‌ಸಿಬಿ ಪರವಾದ ಡೈಲಾಗ್ ಇದೆ. ಹೀಗಾಗಿ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಒಂದೇ ಉಸಿರಿನಲ್ಲಿ ಆರ್‌ಸಿಬಿ ಪರವಾಗಿ ಇಷ್ಟುದ್ದದ ಪಂಚಿಂಗ್ ಡೈಲಾಗ್ ಹೊಡೆಯುವ ಚಿಕ್ಕಣ್ಣ ಈ ಡೈಲಾಗ್ ಅನ್ನು ಹೇಳುವಂತೆ ಚಿತ್ರದ ನಾಯಕ ನಟ ಅಜಯ್ ರಾವ್ ಅವರಿಗೆ ಸವಾಲು ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಅಜಯ್‌ ರಾವ್‌ಗೆ ಚಿಕ್ಕಣ್ಣ ಸವಾಲೆಸೆದಿದ್ದಾರೆ.

ಚಿಕ್ಕಣ್ಣ ಸವಾಲು ನೀಡಿದ ಡೈಲಾಗ್:

"ಎಬಿಸಿಡಿ ಹೇಳುವುದು ಬೇಕಾದರೆ ಬಿಡ್ತೀವಿ, ಆದರೆ ಎಬಿಡಿ ಎಬಿಡಿ ಅಂತ ಕೂಗುವುದು ಬಿಡಲ್ಲ
ಆರ್ ಆರು ಜನ ಹುಡುಗಿರ್ನಾ ಬೇಕಾದ್ರು ಚೇಂಜ್ ಮಾಡ್ತೀವಿ, ಆದರೆ ಆರ್‌ಸಿಬಿ ಫಾರ್ ಲೈಫ್ ಎಂಬ ಸ್ಲೋಗನ್ ಮಾತ್ರ ಬಿಡಲ್ಲ....

ಕೋಳಿ ತಿನ್ನುವುದು ಬೇಕಾದರೂ ಬಿಡ್ತೀವಿ, ಆದರೆ ಕೊಹ್ಲಿ ಮೇಲಿನ ಅಭಿಮಾನ ಬಿಡಲ್ಲ....

ಗೆದ್ರು, ಸೋತ್ರು, ಗೋಲಿ ಆಡೋ ಮಕ್ಕಳು ಅವಮಾನ ಮಾಡಿದ್ರು, ಅಕ್ಕ ಪಕ್ಕ ಸ್ಟೇಟ್ಸ್ ಅವರು ಆಡ್ಕೊಂಡ್ರು ಬೆಟ್ಟಿಂಗ್‌ನಲ್ಲಿ ದುಡ್ಡು ಸೋತ್ರು, ಮನೆಯವರು ಮುಖಕ್ಕೆ ಉಗಿದ್ರು, ನಾವು ಕೇರ್ ಮಾಡಲ್ಲ.....

ಇದು ಗೆಲ್ಲೊ ಕುದುರೆ ಹಿಂದೆ ಬೀಳೋ ಜಗತ್ತು, ಗೆದ್ರು, ಸೋತ್ರು ಆರ್‌ಸಿಬಿಗೆ ನಮ್ಮ ನಿಯತ್ತು ಅಂತ ಸ್ಟೇಟಸ್ ಹಾಕ್ಕೊಂಡು, ನಮ್ಮ ಟೀಂ ಪಾಯಿಂಟ್ಸ್ ಟೇಬಲ್‌ನಲ್ಲಿ ಲಾಸ್ಟ್‌ನಲ್ಲಿದ್ರು, ಪಾಯಿಂಟ್ಸ್ ಟೇಬಲ್‌ನಲ್ಲಿ ನಮ್ಮ ಟೀಂನ ಟಾಪ್‌ನಲ್ಲಿ ಇಟ್ಕೊಂಡು, ಪ್ರತಿ ಸಲ ಐಪಿಎಲ್ ಬಂದಾಗಲೂ ಈ ಸಲ ಕಪ್ ನಮ್ದೆ, ಈ ಸಲ ಕಪ್ ನಮ್ದೆ ಅಂತ ಕಾಲರ್ ಎತ್ಕೊಂಡು ಓಡಾಡೋ ಆರ್‌ಸಿಬಿ ಫ್ಯಾನ್ಸ್ ಕಣೋ ನಾವು."

ಚಿಕ್ಕಣ್ಣ ಹೊಡೆದ ಈ ಡೈಲಾಗ್‌ಗೆ ಆರ್‌ಸಿಬಿ ಅಭಿಮಾನಿಗಳು ಮನಸೋತಿದ್ದಾರೆ. ಆದರೆ ಚಿಕ್ಕಣ್ಣ ಸವಾಲನ್ನು ನಾಯಕ ನಟ ಅಜಯ್ ರಾವ್ ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಕುತೂಹಲ ಉಂಟಾಗಿದೆ. ಇದರ ಜೊತೆಗೆ ಕೆಲ ಆರ್‌ಸಿಬಿ ಅಭಿಮಾನಿಗಳು ಕೂಡ ಚಿಕ್ಕಣ್ಣ ಹಾಕಿದ ಈ ಸವಾಲನ್ನು ಸ್ವಿಚ್ಛೆಯಿಂದ ಸ್ವೀಕರಿಸಿ ಹಂಚಿಕೊಳ್ಳುತ್ತಿದ್ದಾರೆ

Story first published: Thursday, April 1, 2021, 16:01 [IST]
Other articles published on Apr 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+