ಐಪಿಎಲ್ : ಈತ ಎಬಿ ಡಿವಿಲಿಯರ್ಸ್ ಗಿಂತ ಡೇಂಜರಸ್ ಆಟಗಾರ

ಎಬಿ ಡಿ ವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೋಸ್ಟ್ ಡೇಂಜರಸ್ ಬ್ಯಾಟ್ಸ್‌ಮನ್ ಎಂದೇ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಅದರಲ್ಲಿಯೂ ಡೆತ್ ಓವರ್‌ಗಳಲ್ಲಿ ಎಬಿ ಡಿ ವಿಲಿಯರ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆಂದರೆ ತಂಡದ ಮೊತ್ತ ದೊಡ್ಡ ಮಟ್ಟಕ್ಕೆ ಹೋಗಿ ತಲುಪುವುದು ನಿಶ್ಚಿತ. ಇನ್ನು ಎದುರಾಳಿ ಬೌಲರ್‌ಗಳಿಗಂತೂ ನಡುಕ ತಪ್ಪಿದ್ದಲ್ಲ.
ಇಷ್ಟೆಲ್ಲ ಡೇಂಜರಸ್ ಆಗಿರುವ ಎಬಿ ಡಿವಿಲಿಯರ್ಸ್ ಅವರನ್ನು ಮೀರಿಸುವ ಸ್ಫೋಟಕ ಐಪಿಎಲ್ ಆಟಗಾರ ಮತ್ತೊಬ್ಬರಿದ್ದಾರೆ. ಅದು ಬೇರೆ ಯಾರೂ ಅಲ್ಲ ಮುಂಬೈ ಇಂಡಿಯನ್ಸ್ ತಂಡದ ಕಿರಾನ್ ಪೊಲಾರ್ಡ್. ಹೌದು ಕಿರಾನ್ ಪೊಲಾರ್ಡ್ ಆಟ ಎಬಿ ಡಿವಿಲಿಯರ್ಸ್ ಆಟಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಈ ಕೆಳಗಿನ ಅಂಕಿಅಂಶಗಳು ಹೇಳುತ್ತವೆ..

200ಕ್ಕಿಂತ ಅಧಿಕ ಸ್ಟ್ರೈಕ್ ರೇಟ್ ನೊಂದಿಗೆ ಅತಿ ಹೆಚ್ಚು ಇನಿಂಗ್ಸ್ ಆಡಿರುವ ಆಟಗಾರರ ಪಟ್ಟಿಯಲ್ಲಿ ಕಿರಾನ್ ಪೊಲಾರ್ಡ್ ಅಗ್ರಸ್ಥಾನದಲ್ಲಿದ್ದಾರೆ. ಹೌದು ಇದುವರೆಗೂ 147 ಐಪಿಎಲ್ ಇನ್ನಿಂಗ್ಸ್ ಆಡಿರುವ ಕಿರಾನ್ ಪೊಲಾರ್ಡ್ ಅದರಲ್ಲಿ 28 ಇನ್ನಿಂಗ್ಸ್‌ಗಳಲ್ಲಿ 200+ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
156 ಇನ್ನಿಂಗ್ಸ್‌ಗಳನ್ನು ಆಡಿರುವ ಎಬಿ ಡಿವಿಲಿಯರ್ಸ್ 24 ಇನ್ನಿಂಗ್ಸ್‌ಗಳಲ್ಲಿ 200+ ಸ್ಟ್ರೈಕ್ ರೇಟ್ ಹೊಂದಿದ್ದು ಅತಿ ಹೆಚ್ಚು ಇನ್ನಿಂಗ್ಸ್‌ಗಳಲ್ಲಿ 200ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಐಪಿಎಲ್ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
200+ ಸ್ಟ್ರೈಕ್ ರೇಟ್ ಹೊಂದಿರುವ ಟಾಪ್ 5 ಐಪಿಎಲ್ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.
1. ಕಿರಾನ್ ಪೊಲಾರ್ಡ್ : 28 ಇನ್ನಿಂಗ್ಸ್ (ಒಟ್ಟಾರೆ 147 ಇನ್ನಿಂಗ್ಸ್ ಆಡಿದ್ದಾರೆ )
2. ಎಬಿ ಡಿವಿಲಿಯರ್ಸ್ : 24 ಇನ್ನಿಂಗ್ಸ್ ( 156 ಇನ್ನಿಂಗ್ಸ್ ಆಡಿದ್ದಾರೆ )
3. ಹಾರ್ದಿಕ್ ಪಾಂಡ್ಯ : 23 ಇನ್ನಿಂಗ್ಸ್ ( ಕೇವಲ 74 ಇನ್ನಿಂಗ್ಸ್ ಆಡಿದ್ದಾರೆ )
4. ಎಂಎಸ್ ಧೋನಿ : 22 ಇನ್ನಿಂಗ್ಸ್ ( 182 ಇನ್ನಿಂಗ್ಸ್ ಆಡಿದ್ದಾರೆ )
5. ರವೀಂದ್ರ ಜಡೇಜಾ : 21 ಇನ್ನಿಂಗ್ಸ್ ( 139 ಇನ್ನಿಂಗ್ಸ್ ಆಡಿದ್ದಾರೆ )
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications