
ಚೆನ್ನೈ: ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಸ್ಪೋಟಕ ಬ್ಯಾಟಿಂಗ್‌ಗಾಗೇ ಹೆಸರಾದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಆಡುವ ಕೀರನ್ ಪೊಲಾರ್ಡ್ ಒಂದು ವಿಶೇಷ ದಾಖಲೆಯ ಸಮೀಪದಲ್ಲಿದ್ದಾರೆ. ಐಪಿಎಲ್‌ನಲ್ಲಿ 200 ಸಿಕ್ಸರ್ ಬಾರಿಸಿದ 6ನೇ ಬ್ಯಾಟ್ಸ್‌ಮನ್ ಆಗಿ ಪೊಲಾರ್ಡ್ ಗುರುತಿಸಿಕೊಳ್ಳುವುದರಲ್ಲಿದ್ದಾರೆ.
ಏಪ್ರಿಲ್ 9ರಂದು ಐಪಿಎಲ್ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಈ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ಮೈದಾನಕ್ಕಿಳಿದರೆ ಅವರ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗುವ ಸಾಧ್ಯತೆಯಿದೆ.
ಐಪಿಎಲ್‌ನಲ್ಲಿ 164 ಪಂದ್ಯಗಳಲ್ಲಿ ಪೊಲಾರ್ಡ್ 198 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನು 2 ಸಿಕ್ಸರ್ ಬಾರಿಸಿದರೆ 200 ಸಿಕ್ಸರ್ ದಾಖಲೆ ಪಟ್ಟಿಗೆ ಪೊಲಾರ್ಡ್ ಸೇರಿಕೊಳ್ಳಲಿದ್ದಾರೆ. 200+ ಸಿಕ್ಸರ್ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್‌ನ ಕ್ರಿಸ್ ಗೇಲ್ 349 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಎಬಿ ಡಿ ವಿಲಿಯರ್ಸ್ 235 ಸಿಕ್ಸರ್, ಚೆನ್ನೈ ಸೂಪರ್ ಕಿಂಗ್ಸ್‌ನ ಎಂಎಸ್ ಧೋನಿ 216 ಸಿಕ್ಸರ್, ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ 213 ಸಿಕ್ಸರ್, ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ 201 ಸಿಕ್ಸರ್ ದಾಖಲೆ ಹೊಂದಿದ್ದಾರೆ. ಈ ಐಪಿಎಲ್‌ನಲ್ಲಿ ಇನ್ನು 4 ಫೋರ್ಸ್ ಬಾರಿಸಿದರೂ ಪೊಲಾರ್ಡ್ ಹೆಸರಿನಲ್ಲಿ 200 ಫೋರ್‌ಗಳು ದಾಖಲಾಗಲಿವೆ.