ಐಪಿಎಲ್ 2021: ಕಿಂಗ್ಸ್ XI ಪಂಜಾಬ್ ತಂಡದ ಹೆಸರು ಹಾಗೂ ಲೋಗೋ ಬದಲಾವಣೆ ಸಾಧ್ಯತೆ

14ನೇ ಆವೃತ್ತಿಯ ಐಪಿಎಲ್‌ಗೆ ಪೂರಕ ಸಿದ್ಧತೆಗಳು ಈಗಾಗಲೇ ನಡೆಯುತ್ತಿದೆ. ಮಿನಿ ಹರಾಜಿಗೆ ದಿನಗಣನೆಯೂ ಆರಂಭವಾಗಿದೆ. ಈ ಮಧ್ಯೆ ಐಪಿಎಲ್‌ನ ಪ್ರಮುಖ ಫ್ರಾಂಚೈಸಿಯಾದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತನ್ನ ಹೆಸರು ಹಾಗೂ ಲೋಗೋ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಅನಧಿಕೃತ ಟ್ವಿಟ್ಟರ್ ಖಾತೆಯ ರಿಪ್ಲೈ ಒಂದು ಈ ಬಗ್ಗೆ ಸುಳಿವನ್ನು ನೀಡಿದೆ.
ಟ್ವಿಟ್ಟರ್‌ನಿಂದ ವೆರಿಫೈ ಆಗದ ಖಾತೆಯೊಂದು ಹೆಸರನ್ನು ಬಹಿರಂಗೊಡಿಸದೇ ಈ ಬಗ್ಗೆ ಮೂಲಗಳ ಹೇಳಿಕೆಯೊಂದನ್ನು ಉಲ್ಲೇಖ ಮಾಡಿದೆ. ಈ ಟ್ವೀಟ್‌ನ ಪ್ರಕಾರ ಫೆಬ್ರವರಿ 17ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದಿದೆ. ಐಪಿಎಲ್‌ನ ಆರಂಭಿಕ ಆವೃತ್ತಿಯಿಂದಲೂ ಭಾಗವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈವರೆಗೂ ಪ್ರಶಸ್ತಿಯನ್ನು ಜಯಿಸುವಲ್ಲಿ ವಿಫಲವಾಗಿದೆ. ಕಳೆದ ಬಾರಿ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ಮೊದಲಾರ್ಧದ ಬಳಿಕ ನೀಡಿದ ಕಳಪೆ ಪ್ರದರ್ಶನದಿಂದ ಪ್ಲೇಆಫ್ ಹಂತಕ್ಕೇ ಪ್ರವೇಶ ಪಡೆಯಲಿ ವಿಫಲವಾಗಿತ್ತು.

ಹರಾಜಿಗೂ ಮುನ್ನ ಬದಲಾವಣೆ?
ಚೆನ್ನೈನಲ್ಲಿ ಫೆಬ್ರವರಿ 18ರಂದು ಐಪಿಎಲ್‌ನ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗೂ ಒಂದು ದಿನ ಮುನ್ನ ಪಂಜಾಬ್ ತನ್ನ ಹೆಸರು ಹಾಗೂ ಲೋಗೋ ಬದಲಾವಣೆಯ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮಾಹಿತಿ ನೀಡಿಲ್ಲ. ಹೀಗಾಗಿ ಈ ಬಗ್ಗೆ ಕುತೂಹಲಗಳು ಹಾಗೆಯೇ ಉಳಿದುಕೊಂಡಿದೆ.

ಕನ್ನಡಿಗರೇ ಅಧಿಕವಿರುವ ತಂಡ
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಿಕೊಂಡಿದ್ದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಈ ತಂಡದ ಮಾಲೀಕತ್ವದಲ್ಲಿ ಪಾಲುಹೊಂದಿದ್ದಾರೆ.

ರೀಟೈನ್ ಮಾಡಿಕೊಂಡ ಆಟಗಾರರು
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಉಳಿಸಿಕೊಂಡ ಆಟಗಾರರು: ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡ, ಪ್ರಭಸೀಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಅರ್ಷ್‌ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ಇಶಾನ್ ಪೋರ್

ಬಿಡುಗಡೆಯಾದ ಆಟಗಾರರು
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬಿಡುಗಡೆಗೊಳಿಸಿದ ಆಟಗಾರರು: ಗ್ಲೆನ್ ಮ್ಯಾಕ್ಸ್‌ವೆಲ್, ಕರುಣ್ ನಾಯರ್, ಹರ್ದಸ್ ವಿಲ್ಜೋಯೆನ್, ಜಗದೀಶಾ ಸುಚಿತ್, ಮುಜೀಬ್ ಉರ್ ರಹಮಾನ್, ಶೆಲ್ಡನ್ ಕಾಟ್ರೆಲ್, ಜಿಮ್ಮಿ ನೀಶಮ್, ಕೃಷ್ಣಪ್ಪ ಗೌತಮ್, ತಾಜಿಂದರ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications