ಐಪಿಎಲ್ 2021: ಕೊರೊನಾಗೆ ತುತ್ತಾಗಿದ್ದ ನಿತೀಶ್ ರಾಣಾ COVID ವರದಿ ನೆಗೆಟಿವ್

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರಿಗೆ ಕೊರೊನಾ ವೈರಸ್ ತಗುಲಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿತ್ತು. ಆದರೆ ಈಗ ಅವರು ಕೊರೊನಾ ವೈರಸ್‌ನಿಂದ ಸಂಪೂರ್ಣವಾಗೊ ಮುಕ್ತವಾಗಿದ್ದಾರೆ. ಏಪ್ರಿಲ್ 1ರಂದು ನಡೆಸಲಾದ ಪರೀಕ್ಷೆಯಲ್ಲಿ ನಿತೀಶ್ ರಾಣಾ ಕೊರೊನಾ ವೈರಸ್‌ನಿಂದ ಮುಕ್ತರಾಗಿರುವುದು ಖಚಿತವಾಗಿದೆ. ಇದನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಅಧಿಕೃತವಾಗಿ ಮಾಹಿತಿ ನೀಡಿದೆ.
ನೆಗೆಟಿವ್ ವರದಿಯೊಂದಿಗೆ ನಿತೀಶ್ ರಾಣಾ ಕೊಲ್ಕತ್ತಾ ನೈಟ್ ರೈಡರ್ಸ್ ಬಯೋಬಬಲ್ ಸೇರಿಕೊಂಡು ಏಳು ದಿನಗಳ ಕಡ್ಡಾಯ ಕ್ವಾರಂಟೈನ್‌ನಲ್ಲಿ ಭಾಗಿಯಾಗಿದ್ದರು. ಆದರೆ ಕಳೆದ ಮಾರ್ಚ್ 22ರಂದು ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನಿತೀಶ್ ರಾಣಾಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಈಗ ರಾಣಾಗೆ ಮತ್ತೊಂದು ಪರೀಕ್ಷೆ ನಡೆಸಲಾಗಿದ್ದು ಅವರ ವರದಿ ನೆಗೆಟಿವ್ ಬಂದಿದೆ ಎಂದು ಕೆಕೆಆರ್ ಮೂಲಗಳು ಮಾಹಿತಿ ನೀಡಿದೆ.
ಐಪಿಎಲ್‌ನಲ್ಲಿ ಎಲ್ಲಾ ಆಟಗಾರರು ಹೊರಾಂಗಣ ತರಬೇತಿಯಲ್ಲಿ ಪಾಲ್ಗೊಳ್ಳುವ ಮುನ್ನ ಕಡ್ಡಾಯ ಏಳು ದಿನಗಳ ಕಡ್ಡಾಯ ತಮ್ಮ ಹೋಟೆಲ್ ರೂಮ್‌ನಲ್ಲಿ ಕ್ವಾರಂಟೈನ್ ಪಾಲಿಸಬೇಕಿದೆ. ಅದರಲ್ಲಿ ನೆಗೆಟಿವ್ ವರದಿ ಪಡೆದುಕೊಂಡ ಬಳಿಕವೇ ಹೊರಾಂಗಣ ತರಬೇತಿಗೆ ಅವಕಾಶ ದೊರೆಯುತ್ತದೆ.
27ರ ಹರೆಯದ ನಿತೀಶ್ ರಾಣಾ 2016ರಲ್ಲಿ ಮುಂಬೈ ಇಂಡಿಯನ್ಸ್ ಮೈಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. 2018ರಲ್ಲಿ ಕೆಕೆಆರ್ ತಂಡದ ಪಾಲಾಗುವ ಮುನ್ನ ಎರಡು ಆವೃತ್ತುಗಳಲ್ಲಿ ಮುಂಬೈ ತಂಡದ ಭಾಗವಾಗಿದ್ದರು. ಈವರೆಗೆ ರಾಣಾ 60 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 1437 ರನ್‌ಗಳಿಸಿದ್ದಾರೆ. 28.17ರ ಸರಾಸರಿಯಲ್ಲಿ 11 ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ.
ನಿತೀಶ್ ರಾಣಾಗೆ ನೆಗೆಟಿವ್ ವರದಿ ಬಂದಿರುವುದನ್ನು ಸ್ಪಷ್ಟಪಡಿಸಲು ಸಂತಸವಾಗುತ್ತದೆ. ಸದ್ಯದಲಲ್ಇಯೇ ಅವರು ತಂಡದೊಂದಿಗೆ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಆವೃತ್ತಿಯ ಆರಂಭಕ್ಕೂ ಮುನ್ನ ಅವರು ಸಂಒಊರ್ಣವಾಗಿ ಶಕ್ತರಾಗಲಿದ್ದಾರೆ" ಎಂದು ಕೆಕೆಆರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications