ಆರ್‌ಸಿಬಿ, ಕೆಕೆಆರ್, ಪಂಜಾಬ್ ಪ್ಲೇ ಆಫ್ಸ್ ಅವಕಾಶ ಹೇಗಿದೆ? ಇಲ್ಲಿದೆ ವಿವರಣೆ!

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 1) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್ ಜಯ ಗಳಿಸಿದೆ. ನಾಯಕ ಕೆಎಲ್ ರಾಹುಲ್ 67 ರನ್ ಮತ್ತು ಮಯಾಂಕ್ ಅಗರ್ವಾಲ್ 40 ರನ್ ಕೊಡುಗೆ ಮತ್ತು ಅರ್ಷ್‌ದೀಪ್ ಸಿಂಗ್ ಬೌಲಿಂಗ್ ಬಲದಿಂದ ಪಂಜಾಬ್ ಪ್ಲೇ ಆಫ್ಸ್ ಆಸೆ ಜೀವಂತವಾಗಿರಿಸಿಕೊಂಡಿದೆ.
45ನೇ ಐಪಿಎಲ್ ಪಂದ್ಯವಾಗಿ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯ ಬಳಿಕ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೆಕೆಆರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮಧ್ಯೆ ಪ್ಲೇ ಆಫ್ಸ್‌ಗೆ ಹಣಾಹಣಿ ಬಾಕಿ ಉಳಿದಿದೆ. ಮುಂದಿನ ಪಂದ್ಯಗಳಲ್ಲಿ ಅಗ್ರ ನಾಲ್ಕು ಸ್ಥಾನಗಳು ಹೇಗೆ ನಿರ್ಧಾರವಾಗಲಿವೆ? ಇಲ್ಲಿದೆ ಕುತೂಹಲಕಾರಿ ವಿವರಣೆ.

ಕೋಲ್ಕತ್ತಾ ನೈಟ್ ರೈಡರ್ಸ್-ಪಂಜಾಬ್ ಕಿಂಗ್ಸ್ ಪ್ಲೇ ಆಫ್ಸ್ ಅವಕಾಶ
ಐಪಿಎಲ್ ಅಂಕಪಟ್ಟಿಯಲ್ಲಿ ಈಗಾಗಲೇ ಅಗ್ರ ಎರಡು ಸ್ಥಾನಗಳನ್ನು ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್ಸ್‌ಗೆ ಪ್ರವೇಶ ಪಡೆದುಕೊಂಡಿವೆ. ಇನ್ನೆರಡು ಸ್ಥಾನಗಳಿಗಾಗಿ ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ತಂಡಗಳು ಕಾದಾಡಲಿವೆ. ಈ ನಾಲ್ಕೂ ತಂಡಗಳ ಪ್ಲೇ ಆಫ್ಸ್ ಅವಕಾಶ ಇನ್ನುಳಿದಿರುವ ಎರಡು ತಂಡಗಳ ಗೆಲುವನ್ನಷ್ಟೇ ಅವಲಂಭಿಸಿಲ್ಲ, ಬೇರೆ ಬೇರೆ ತಂಡಗಳ ಸೋಲು ಗೆಲುವನ್ನ ಅವಲಂಭಿಸಿವೆ. ಸದ್ಯದ ಮಟ್ಟಿಗೆ ಪ್ಲೇ ಆಫ್ಸ್ ಅವಕಾಶ ಕೋಲ್ಕತ್ತಾ, ರಾಯಲ್ ಚಾಲೆಂಜರ್ಸ್ ಮತ್ತು ಪಂಜಾಬ್ ತಂಡಕ್ಕೆ ಸ್ವಲ್ಪ ಹೆಚ್ಚಿದೆ. ಅದೂ ಕೂಡ ಈ ಮೂರೂ ತಂಡಗಳೂ ಮುಂದಿನ ಎರಡು ಪಂದ್ಯಗಳನ್ನು ಗೆದ್ದ ಮೇಲಷ್ಟೇ ಪ್ಲೇ ಆಫ್ಸ್ ದಾರಿ ತೆರೆದಿರುತ್ತದೆ.

ಕೋಲ್ಕತ್ತಾದ ಪ್ಲೇ ಆಫ್ಸ್ ಅವಕಾಶ ಹೀಗಿದೆ ನೋಡಿ
ಕೋಲ್ಕತ್ತಾ ನೈಟ್ ರೈಡರ್ಸ್ ಆಡಿರುವ 12 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 10 ಅಂಕ ಕಲೆ ಹಾಕಿದೆ. ಮುಂದೆ ಕೆಕೆಆರ್‌ಗೆ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯವಿದೆ. ಈ ಪಂದ್ಯಗಳಲ್ಲಿ ಕೆಕೆಆರ್ ಗೆದ್ದರೆ 14 ಪಾಯಿಂಟ್ಸ್ ಸಿಗುತ್ತವೆ. ಕೆಕೆಆರ್ ಈಗಾಗಲೇ + ನೆಟ್ ರನ್‌ರೇಟ್ ಹೊಂದಿರುವುದರಿಂದ ಪ್ಲೇ ಆಫ್ಸ್ ಅವಕಾಶ ಹೆಚ್ಚಿದೆ. ಆದರೆ ಕೆಕೆಆರ್ ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಮುಂದಿನ ಮೂರು ಪಂದ್ಯಗಳಲ್ಲಿ 16 ಅಂಕ ಕಲೆ ಹಾಕಬಾರದು. ಎರಡು ತಂಡಗಳು 16 ಪಾಯಿಂಟ್ಸ್ ಗಳಿಸಿದರೆ, ಎರಡರಲ್ಲಿ ನೆಟ್ ರನ್‌ರೇಟ್ ಚೆನ್ನಾಗಿರುವ ತಂಡ ಪ್ಲೇ ಆಫ್ಸ್ ಅವಕಾಶ ಪಡೆದುಕೊಳ್ಳುತ್ತದೆ. ಆರ್‌ಸಿಬಿ ಈಗಾಗಲೇ 14 ಪಾಯಿಂಟ್ಸ್ ಗಳಿಸಿದೆ. ಆದರೆ ಅದರ ನೆಟ್ ರನ್‌ರೇಟ್ ಮೈನಸ್ ಇದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಆರ್‌ಸಿಬಿ ಮತ್ತು ಮುಂಬೈ ಸೋಲು-ಗೆಲುವು ಕೆಕೆಆರ್ ಪ್ಲೇ ಆಫ್ಸ್ ಸಾಧ್ಯತೆ ನಿರ್ಧರಿಸುತ್ತವೆ.

ಪಂಜಾಬ್ ಕಿಂಗ್ಸ್ ಪ್ಲೇ ಆಫ್ಸ್‌ಗೆ ಪ್ರವೇಶಿಸುವುದು ಹೇಗೆ?
ಪಂಜಾಬ್ ಕಿಂಗ್ಸ್‌ಗೆ ಪ್ಲೇ ಆಫ್ಸ್ ಅವಕಾಶ ಇನ್ನೂ ಇದೆ. ಇದೂ ಕೂಡ ಮುಂದಿನ ಗೆಲುವುಗಳನ್ನಷ್ಟೇ ಅವಲಂಭಿಸಿಲ್ಲ. ಬದಲಿಗೆ ಬೇರೆ ತಂಡಗಳ ಸೋಲು ಗೆಲುವುಗಳು ಪಂಜಾಬ್ ಪ್ಲೇ ಆಫ್ಸ್ ಸಾಧ್ಯತೆ ನಿರ್ಧರಿಸುತ್ತವೆ. ಉಳಿದಿರುವ ಇನ್ನೆರಡು ಪಂದ್ಯಗಳಲ್ಲಿ ಪಂಜಾಬ್ ಗೆದ್ದರೆ 14 ಪಾಯಿಂಟ್ಸ್ ಗಳಿಸುತ್ತದೆ. ಆದರೆ ಮುಂದಿನ ಪಂದ್ಯಗಳಲ್ಲಿ ಕೋಲ್ಕತ್ತಾ ಮತ್ತು ಮುಂಬೈ 16 ಅಂಕಗಳಿಸದಿದ್ದರೆ ಅಥವಾ ಮುಂದಿನ ಪಂದ್ಯಗಳಲ್ಲಿ ಸೋತರೆ ಮಾತ್ರ ಪಂಜಾಬ್ ನೆಟ್ ರನ್‌ರೇಟ್ ಆಧಾರದಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಲು ಸಾಧ್ಯವಾಗುತ್ತದೆ. ಮುಂದೆ ಪಂಜಾಬ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯಗಳಿವೆ. ಈ ಎರಡೂ ಪಂದ್ಯಗಳಲ್ಲೂ ಪಂಜಾಬ್ ಗೆಲ್ಲಲೇಬೇಕು. ಆರ್‌ಸಿಬಿ ಇನ್ನು ಮುಂದಿನ ಪಂದ್ಯಗಳಲ್ಲಿ ಗೆದ್ದು 16 ಅಂಕ ಕಲೆ ಹಾಕಿದರೆ ಪ್ಲೇ ಆಫ್ಸ್ ಅವಕಾಶ ಆರ್‌ಸಿಬಿಗೆ ಹೆಚ್ಚಿದೆ. ಏಕೆಂದರೆ ಆರ್‌ಸಿಬಿಗೆ ಇನ್ನೂ ಮೂರು ಲೀಗ್ ಹಂತದ ಪಂದ್ಯಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications