ಕೆಕೆಆರ್‌ನ ಹರ್ಭಜನ್ ಸಿಂಗ್ ಕ್ವಾರಂಟೈನ್ ಮುಕ್ತಾಯ, ಅಭ್ಯಾಸ ಆರಂಭ

ಕೋಲ್ಕತ್ತಾ: ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಕ್ವಾರಂಟೈನ್ ಮುಕ್ತಾಯಗೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯಲಿರುವ ಭಜ್ಜಿ, ಶನಿವಾರ (ಏಪ್ರಿಲ್ 3)ದಿಂದ ಅಭ್ಯಾಸ ಆರಂಭಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿದ್ದ 2020ರ ಐಪಿಎಲ್‌ನಲ್ಲಿ ಹರ್ಭಜನ್ ಸಿಂಗ್ ಆಡಿರಲಿಲ್ಲ. ವೈಯಕ್ತಿಕ ಕಾರಣ ನೀಡಿ ಹರ್ಭಜನ್ ಟುರ್ನಿಯಿಂದ ದೂರ ಉಳಿದಿದ್ದರು. ಈ ಬಾರಿ ಭಜ್ಜಿ ಕೆಕೆಆರ್ ಪರ ಆಡಲಿದ್ದಾರೆ. ಕಳೆದ ಸೀಸನ್‌ನಲ್ಲಿ ಹರ್ಭಜನ್, ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದರು.
ಕೋಲ್ಕತ್ತಾ ನೈಟ್ ರೈಡರ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಭಜ್ಜಿ ತಂಡಕ್ಕೆ ಎಂಟ್ರಿ ಕೊಟ್ಟಿರುವ ವಿಡಿಯೋ ಹಾಕಿಕೊಳ್ಳಲಾಗಿದೆ. ಹರ್ಭಜನ್ ರೂಮ್ ಎಂಟ್ರ ಕೊಡುವಲ್ಲಿಂದ ಹಿಡಿದು, ಮೈದಾನದಲ್ಲಿ ಅಭ್ಯಾಸಕ್ಕೆ ಇಳಿಯುವವರೆಗಿನ ಚಿತ್ರಣ ವಿಡಿಯೋದಲ್ಲಿದೆ. ಈ ವಿಡಿಯೋದಲ್ಲಿ ಭಜ್ಜಿ ಬಲ್ಲೆ ಬಲ್ಲೆ ಡ್ಯಾನ್ಸ್ ಕೂಡ ಸಣ್ಣದಾಗಿ ಮಾಡಿದ್ದಾರೆ.
ಏಪ್ರಿಲ್ 9ರಂದು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಸೆಣಸಾಡಲಿವೆ. ಏಪ್ರಿಲ್ 10ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ರನ್ನರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಪರ್ಧಿಸಲಿವೆ. ಏಪ್ರಿಲ್ 11ರಂದು ಕೋಲ್ಕತ್ತಾ ಮತ್ತು ಹೈದರಾಬಾದ್ ಮಧ್ಯೆ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications