Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ರಿಂಕು ಸಿಂಗ್ ಐಪಿಎಲ್‌ನಿಂದ ಹೊರಕ್ಕೆ: ಕೆಕೆಆರ್ ತಂಡಕ್ಕೆ ಮಾಜಿ ಆರ್‌ಸಿಬಿ ಆಟಗಾರ ಸೇರ್ಪಡೆ

IPL 2021: KKRs Rinku Singh ruled out of upcoming IPL, Gurkeerat Mann joined as Replacement

ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಐಪಿಎಲ್‌ನ ಖ್ಯಾತ ಫ್ರಾಂಚೈಸಿಯಲ್ಲಿ ಒಂದಾದ ಕೊಲ್ಕತ್ತಾ ನೈಟ್ ರೈಡರ್ಸ್‌ನ ಆಟಗಾರ ರಿಂಗು ಸಿಂಗ್ ಗಾಯಗೊಂಡಿದ್ದಾರೆ. ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ರಿಂಕು ಸಿಂಗ್ ಮುಂಬರುವ ಐಪಿಎಲ್ ಆವೃತ್ತಿಯಿಂದ ಸಂಒಊರ್ಣವಾಗಿ ಹೊಇರಗುಳಿಯಲಿದ್ದಾರೆ.

ಈ ಹಿನ್ನೆಲೆಯಲ್ಲಿ ಕೊಲ್ಕತ್ತಾ ನೈಡರ್ಸ್‌ ತಂಡ ಮಾಜಿ ಆರ್‌ಸಿಬಿ ಆಟಗಾರ ಗುರ್ಕೀರತ್ ಸಿಂಗ್ ಮನ್ ಅವರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ರಿಂಕು ಸಿಂಗ್‌ಗೆ ಬದಲಿಯಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರಿಕೊಂಡಿರುವ ಗುರ್ಕೀರತ್ ಸಿಂಗ್ ಮುಂದಿನ ಆವೃತ್ತಿಯಲ್ಲಿ ಕೆಕೆಆರ್ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.

"ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗುರ್‌ಕೀರತ್ ಸಿಂಗ್ ಮನ್‌ಅವರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು ರಿಂಕು ಸಿಂಗ್ ಬದಲಿಯಾಗಿ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ರಿಂಕು ಸಿಂಗ್ ಮೊಣಕಾಲಿನ ಗಾಯದಿಂದಾಗಿ ಮುಂಬರುವ ಆವೃತ್ತಿಯ ಐಪಿಎಲ್‌ನಿಂದ ಸಂಪೊಊರ್ಣವಾಗಿ ಹೊರಹುಳಿಯಲಿದ್ದಾರೆ" ಎಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಗುರ್ಕೀರತ್ ಸಿಂಗ್ ಅವರನ್ನು 50 ಲಕ್ಷಗಳ ಮೂಲಬೆಲೆಗೆ ಕೆಕೆಆರ್‌ಗೆ ಸೇರ್ಪಡೆಗೊಳಿಸಿದೆ. ಇದು ಗುರ್ಕೀರತ್ ಸಿಂಗ್ ಅವರ 8ನೇ ಅಧಿಕೃತ ಐಪಿಎಲ್ ಆವೃತ್ತಿಯಾಘಿರಲಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರವಾಗಿ ಕಣಕ್ಕಿಳಿದಿದ್ದ ಗುರ್‌ಕೀರತ್ ಸಿಂಗ್ ಹರಾಜಿಗೂ ಮುನ್ನ ಬಿಡುಗಡೆಗೊಂಡಿದ್ದರು.

ಕಳೆದ ಆವೃತ್ತಿಯಲ್ಲಿ ಗುರ್‌ಕೀರತ್ ಸಿಂಗ್ ಮನ್ 8 ಪಂದ್ಯಗಳಲ್ಲಿ ಆರ್‌ಸಿಬಿ ಪರವಾಗಿ ಬ್ಯಾಟಿಂಗ್‌ಗೆ ಇಳಿದಿದ್ದರು. ಇದರಲ್ಲಿ ಗುರ್‌ಕೀರತ್ ಸಿಂಗ್ ಕೇವಲ 71 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. 88.75ರ ಸರಾಸರಿಯಲ್ಲಿ ಅವರು ಬ್ಯಾಟ್ ಬೀಸಿದ್ದರು. ಈವರೆಗೆ ಅವರು 41 ಐಪಿಎಲ್ ಪಂದ್ಯಗಳಲ್ಲಿ ಆಡಲಿಳಿದಿದ್ದಾರೆ. 2012ರಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ಪರವಾಗಿ ಆಡುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು.

Story first published: Monday, April 5, 2021, 10:49 [IST]
Other articles published on Apr 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+