ಐಪಿಎಲ್ 2021: ರೋಚಕ ಪಂದ್ಯದಲ್ಲಿ ಗೆದ್ದ ಕೆಕೆಆರ್ ಫೈನಲ್ ಪ್ರವೇಶ: ಕಡೇ ತನಕ ಹೋರಾಡಿ ಮಣಿದ ಪಂತ್ ಪಡೆ

ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಕ್ವಾಲಿಫೈಯರ್ 2 ಪಂದ್ಯ ಅತ್ಯಂತ ರೋಚಕವಾಗಿ ಅಂತ್ಯವಾಗಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ ತಂಡ ಅಂತಿಮ ಹಂತದ ವರೆಗೂ ನಡೆಸಿದ ಹೋರಾಟ ಪಂದ್ಯದ ರೋಚಕತೆಯನ್ನು ಹೆಚ್ಚಿಸಿತ್ತು. ಆದರೆ ಒಂದು ಎಸೆತ ಉಳಿದಿರುವಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ವಿರೋಚಿತ ಸೋಲು ಅನುಭವಿಸಿದೆ. ಈ ಮೂಲಕ 14ನೇ ಆವೃತ್ತಿಯ್ಲಲಿ 3ನೇ ಸ್ಥಾನದೊಂದಿಗೆ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಈ ರೋಚಕ ಗೆಲುವಿನ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಕೆಕೆಆರ್ ತನ್ನ ಮೂರನೇ ಪ್ರಶಸ್ತಿಗಾಗಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಾಡಲಿದ್ದು ಈ ಪಂದ್ಯ ಮುಂದಿನ ಶುಕ್ರವಾರದಂದು ನಡೆಯಲಿದೆ. ಈ ಪಂದ್ಯದಲ್ಲಿ ಈ ಬಾರಿಯ ಆವೃತ್ತಿಯ ಚಾಂಪಿಯನ್ ಯಾರು ಎಂಬುದು ನಿರ್ಧಾರವಾಗಲಿ.

ಸುಲಭ ಜಯದತ್ತ ಮುನ್ನುಗ್ಗುತ್ತಿದ್ದ ಕೆಕೆಆರ್
ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗಾಗಿ 136 ರನ್‌ಗಳ ಗುರಿಯನ್ನು ಪಡೆದುಕೊಂಡಿತ್ತು. ಇದನ್ನು ಬೆನ್ನಟ್ಟಿದ ಕೆಕೆಆರ್‌ಗೆ ಅತ್ಯುತ್ತಮ ಆರಂಬ ದೊರೆಯಿತು. ಕೆಕೆಆರ್ ಪರವಾಗಿ ಆರಂಭಿಕ ಆಟಗಾರರು 12.2 ಓವರ್‌ಗಳನ್ನು ಭರ್ಜರಿ 96 ರನ್ ಜೊತೆಯಾಟವನ್ನು ನೀಡಿದರು. 55 ರನ್‌ಗಳಿಸಿದ್ದ ವೆಂಕಟೇಶ್ ಐಯ್ಯರ್ ವಿಕೆಟ್ ಕಳೆದುಕೊಳ್ಳುವ ಮೂಲಕ ಈ ಜೋಡಿ ಬೇರ್ಪಟ್ಟಿತು. ನಂತರ ಗಿಲ್ ಜೊತೆಗೆ ಸೇರಿದ ನಿರೀಶ್ ರಾಣಾ ತಂಡವನ್ನು ಗೆಲುವಿನ ಅಂಚಿನತ್ತ ಕೊಂಡಿಯ್ದರು. ತಂಡದ ಮೊತ್ತ 123 ರನ್‌ಗಳಾಗಿದ್ದಾಗ ಈ ಜೋಡಿ ಬೇರ್ಪಟ್ಟಿತು. ಈ ಹಂತದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ಗೆ ಅಗತ್ಯವಿದ್ದ ರನ್ 24 ಎಸೆತಗಳಲ್ಲಿ ಕೇವಲ 13 ರನ್.

ತಿರುಗಿ ಬಿದ್ದ ಡೆಲ್ಲಿ ಬೌಲರ್‌ಗಳು
ಈ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್‌ಗಳು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ತಿರುಗಿ ಬಿದ್ದರು. ರನ್ ನಿಯಂತ್ರಣ ಮಾಡುವ ಜೊತೆಗೆ ವಿಕೆಟ್ ಕೂಡ ಕಬಳಿಸುತ್ತಾ ಸಾಗಿದರು. ಡೆಲ್ಲಿ ತಂಡದ ಪ್ರಮುಖ ಆಟಗಾರರೆಲ್ಲರೂ ಒಬ್ಬರ ಹಿಂದೊಬ್ಬರಂತೆ ಫೆವಿಲಿಯನ್ ಸೇರಿಕೊಳ್ಳಲು ಆರಂಭಿಸಿದರು. 45 ರನ್‌ಗಳಿಸಿದ್ದ ಶುಬ್ಮನ್ ಗಿಲ್ ಔಟಾದ ನಂತರ ದಿನೇಶ್ ಕಾರ್ತಿಕ್, ಇಯಾನ್ ಮಾರ್ಗನ್, ಶಕೀಬ್ ಅಲ್ ಹಸನ್, ಸುನಿಲ್ ನರೈನ್ ಎಲ್ಲರೂ ಶೂನ್ಯ ಸುತ್ತಿಕೊಂಡು ಒಬ್ಬರ ನಂತರ ಮತ್ತೊಬ್ಬರು ಔಟಾಗುತ್ತಾ ಸಾಗಿದರು. ಅಮೋಘ ಪ್ರದರ್ಶನ ನೀಡಿದ ಡೆಲ್ಲಿ ಬೌಲರ್‌ಗಳು ಗೆಲುವಿನ ಸಾಧ್ಯತೆ ತೆರೆದಿಟ್ಟರು. ಅಂತಿಮ ಓವರ್‌ನಲ್ಲಿ ಕೆಕೆಆರ್ ತಂಡಕ್ಕೆ 7 ರನ್‌ಗಳ ಅಗತ್ಯವಿತ್ತು.

ಅಂತಿಮ ಓವರ್ ಎಸೆದ ಆರ್ ಅಶ್ವಿನ್
ಕೆಕೆಆರ್ ಗೆಲುವಿಗೆ 7 ರನ್‌ಗಳ ಅಗತ್ಯವಿದ್ದಾಗ ಅನುಭವಿ ಆರ್ ಅಶ್ವಿನ್ ಬೌಲಿಂಗ್ ದಾಳಿಗೆ ಇಳಿದಿದ್ದರು. ಈ ಓವರ್‌ನಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ತಮಡದ ಆರ್ ಅಶ್ವಿನ್ ಆರಂಭಿಕ ನಾಲ್ಕು ಎಸೆತಗಳಲ್ಲಿ ಕೇವಲ ಒಂದು ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು. ಈ ಮೂಲಕ ಸಂಪೂರ್ಣ ಕೈ ಜಾರಿದ್ದ ಪಂದ್ಯದಲ್ಲಿ ಡೆಲ್ಲಿ ನಿಯಂತ್ರಣ ಸಾಧಿಸಿತ್ತು. ಆದರೆ ಕೆಕೆಆರ್ ಗೆಲುವಿಗೆ ಒಂದು ಸಿಕ್ಸರ್‌ನ ಅಗತ್ಯ ಮಾತ್ರವೇ ಇತ್ತು.

ಡೆಲ್ಲಿ ಗೆಲುವಿನ ಕನಸು ಭಗ್ನಗೊಳಿಸಿದ ತ್ರಿಪಾಠಿ
ಕೆಕೆಆರ್ ಗೆಲುವಿಗೆ ಅಂತಿಮ ಎರಡು ಎಸೆತಗಳಲ್ಲಿ ಆರು ರನ್‌ಗಳ ಅಗತ್ಯವಿತ್ತು. ಆರ್ ಅಶ್ವಿನ್ ಐದನೇ ಎಸೆತವನ್ನು ಕ್ರೀಸ್‌ನಲ್ಲಿದ್ದ ರಾಹುಲ್ ತ್ರಿಪಾಠಿಗೆ ಎಸೆದರು. ಅದ್ಭುತ ನಿಯಂತ್ರಣ ಸಾಧಿಸಿದ್ದ ಆರ್ ಅಶ್ವಿನ್ ಈ ಎಸೆತದಲ್ಲಿ ಎಡವಿದ್ದರು. ತ್ರಿಪಾಠಿ ಈ ಎಸೆತವನ್ನು ಭರ್ಜರಿಯಾಗಿ ಸಿಕ್ಸರ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ ಕೆಕೆಆರ್ ಒಂದು ಎಸೆತ ಬಾಕಿಯಿರುವಂತೆಯೇ ಗೆದ್ದು ಬೀಗಿತು. ಈ ಮೂಲಕ ಡೆಲ್ಲಿ ಗೆಲುವಿನ ಕನಸನ್ನು ಕೆಕೆಆರ್ ಭಗ್ನಗೊಳಿಸಿತು.

ಫೈನಲ್‌ಗೆ ಪ್ರವೇಶಿಸಿದ ಇಯಾನ್ ಮಾರ್ಗನ್ ಬಳಗ
ಈ ಭರ್ಜರಿ ಗೆಲುವಿನ ಮೂಲಕ ಇಯಾನ್ ಮಾರ್ಗನ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಫೈನಲ್‌ಗೆ ಪ್ರವೇಶ ಪಡೆದಿದೆ. ಈ ಮೂಲಕ ಐಪಿಎಲ್‌ನಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ಅವಕಾಶವನ್ನು ಹೊಂದಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 9ನೇ ಬಾರಿಗೆ ಐಪಿಎಲ್‌ನ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು 4ನೇ ಬಾರಿಗೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳುವ ಅವಕಾಶ ಹೊಂದಿದೆ. ಅಕ್ಟೋಬರ್ 15ರಂದು ಈ ಪಂದ್ಯ ನಡೆಯಲಿದ್ದು ಯಾರಿಗೆ ಗೆಲುವು ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ / ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮೀರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಚ್ ನಾರ್ಕಿಯಾ
ಬೆಂಚ್: ಟಾಮ್ ಕುರ್ರನ್, ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಉಮೇಶ್ ಯಾದವ್, ಸ್ಟೀವನ್ ಸ್ಮಿತ್, ಸ್ಯಾಮ್ ಬಿಲ್ಲಿಂಗ್ಸ್, ಲುಕ್ಮನ್ ಮೇರಿವಾಲಾ, ಬೆನ್ ದ್ವಾರಶುಯಿಸ್, ಪ್ರವೀಣ್ ದುಬೆ, ವಿಷ್ಣು ವಿನೋದ್, ಕುಲ್ವಂತ್ ಖೇಜ್ರೋಲಿಯಾ, ಲಲಿತ್ ಯಾದವ್, ರಿಪಾಲ್ ಪಟೇಲ್
ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ಶಕೀಬ್ ಅಲ್ ಹಸನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
ಬೆಂಚ್: ಹರ್ಭಜನ್ ಸಿಂಗ್, ಟಿಮ್ ಸೌಥಿ, ಆಂಡ್ರೆ ರಸೆಲ್, ಬೆನ್ ಕಟ್ಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರ್ಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಸಂದೀಪ್ ವಾರಿಯರ್, ಟಿಮ್ ಸೀಫೆರ್ಟ್, ಪ್ರಸಿದ್ ಕೃಷ್ಣ, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ವೈಭವ್ ಅರೋರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications