ಶಾ ಅದ್ಭುತ ಬ್ಯಾಟಿಂಗ್‌ಗೆ 'ಗುಸುಗುಸು ಗೆಳತಿ' ಪ್ರಚಿ ಪ್ರತಿಕ್ರಿಯೆ ನೋಡಿ!

ಅಹ್ಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್‌ನ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಶಾ ಒಂದೇ ಓವರ್‌ನಲ್ಲಿ ಸತತ ಆರು ಬೌಂಡರಿ ಬಾರಿಸಿ ಗಮನ ಸೆಳೆದಿದ್ದರು. ಶಾ ಸ್ಫೋಟಕ ಬ್ಯಾಟಿಂಗ್‌ಗೆ ಅವರ ಗುಸುಗುಸು (ಗಾಸಿಪ್) ಗೆಳತಿ ಪ್ರಚಿ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಿಯ ಪೋಸ್ಟ್ ವೈರಲ್ ಆಗಿದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್ 25ನೇ ಪಂದ್ಯದಲ್ಲಿ ಪೃಥ್ವಿ ಶಾ 41 ಎಸೆತಗಳಿಗೆ 82 ರನ್ ಬಾರಿಸಿದ್ದರು. ಇದರಲ್ಲಿ ಓವರ್ ಒಂದರಲ್ಲಿ ಸತತ 6 ಫೋರ್ಸ್ ದಾಖಲೆಯೂ ಸೇರಿತ್ತು. ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಸುಲಭ ಜಯ ಗಳಿಸಿತ್ತು.

ಒಂದೇ ಓವರ್‌ನಲ್ಲಿ 6 ಫೋರ್ಸ್
ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ 6 ಫೋರ್ಸ್ ಬಾರಿಸಿದ ವಿಶಿಷ್ಠ ದಾಖಲೆ ಪಟ್ಟಿಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಪೃಥ್ವಿ ಶಾ ಕೂಡ ಸೇರಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್‌ನ ಯುವ ಮಧ್ಯಮ ವೇಗಿ ಶಿವಂ ಮಾವಿ ಅವರ ಆರಂಭಿಕ ಓವರ್‌ನಲ್ಲೇ 6 ಫೋರ್ಸ್ ಬಾರಿಸಿ ಪೃಥ್ವಿ ಈ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ, ಸದ್ಯ ಇದೇ ಡೆಲ್ಲಿ ತಂಡದಲ್ಲಿರುವ ಅಜಿಂಕ್ಯ ರಹಾನೆ ಕೂಡ ಒಂದು ಓವರ್‌ನಲ್ಲಿ 6 ಫೋರ್ಸ್ ದಾಖಲೆ ಬರೆದಿದ್ದರು.

ಪೃಥ್ವಿ ಗೆಳತಿ ಪ್ರಚಿ ಪ್ರತಿಕ್ರಿಯೆ
ಪೃಥ್ವಿ ಶಾ ಮತ್ತು ಪ್ರಚಿ ಸಿಂಗ್ ಎಂಬಾಕೆ ಮಧ್ಯೆ ಪ್ರೇಮ ಸಂಬಂಧವಿದೆ ಎಂಬ ಗಾಳಿ ಸುದ್ದಿಗಳು ಹಿಂದಿನಿಂದಲೂ ಕೇಳಿಬರುತ್ತಿತ್ತು. ಅದಕ್ಕೆ ಸಾಕ್ಷಿಯೆಂಬಂತೆ, ಪೃಥ್ವಿ ಭರ್ಜರಿ ಬ್ಯಾಟಿಂಗ್ ಬಳಿಕ ಪ್ರಚಿ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಪೃಥ್ವಿ ಅವರು ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದ ಪ್ರಚಿ, 'ನಿನ್ನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ' ಎಂದು ಬರೆದುಕೊಂಡು ಜೊತೆಗೊಂದು ಹೃದಯದ ಇಮೋಜಿ ಹಾಕಿಕೊಂಡಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ, ನಿಂಗೆ ಬಂದ ಪ್ರಶಸ್ತಿಗಳನ್ನೆಲ್ಲಾ ಪ್ಯಾಕ್ ಮಾಡಲು ಇನ್ನೊಂದು ಸೂಟ್‌ಕೇಸ್ ಬೇಕಾಗುತ್ತದೆ ಎಂದು ಬರೆದುಕೊಂಡಿದ್ದರು.

ಪಂದ್ಯದ ಸಂಕ್ಷಿಪ್ತ ಸ್ಕೋರ್
* ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ 20 ಓವರ್‌ಗೆ 6 ವಿಕೆಟ್ ಕಳೆದು 154 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ, ಪೃಥ್ವಿ ಶಾ 82 (41), ಶಿಖರ್ ಧವನ್ 46 ರನ್‌ನೊಂದಿಗೆ 16.3 ಓವರ್‌ಗೆ 3 ವಿಕೆಟ್ ಕಳೆದು 156 ರನ್ ಬಾರಿಸಿ ಗೆಲುವನ್ನಾಚರಿಸಿತು.
* ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಪೃಥ್ವಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಪಂದ್ಯದಲ್ಲಿ ಪೃಥ್ವಿ ಒಟ್ಟು 11 ಫೋರ್ಸ್, 3 ಸಿಕ್ಸರ್ ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications