For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಬೆಂಗಳೂರು vs ಕೊಲ್ಕತ್ತಾ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?

IPL 2021 : KKR vs RCB Head-to-head record, highest run-getters, top wicket-takers

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 11ನೇ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 18) ನಡೆಯಲಿದ್ದು, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಇಯಾನ್ ಮಾರ್ಗನ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡಲಿವೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳೆರಡೂ ತಲಾ 2 ಪಂದ್ಯಗಳನ್ನಾಡಿದ್ದು, ಬೆಂಗಳೂರು ತಂಡ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದೆ ಹಾಗೂ ಕೊಲ್ಕತ್ತಾ ತಂಡ ಒಂದರಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋಲು ಕಂಡಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಐಪಿಎಲ್ ಇತಿಹಾಸದಲ್ಲಿ ಒಟ್ಟು 27 ಬಾರಿ ಮುಖಾಮುಖಿಯಾಗಿದ್ದು ಕೊಲ್ಕತ್ತಾ 15 ಪಂದ್ಯಗಳಲ್ಲಿ ಜಯ ಗಳಿಸಿದ್ದರೆ, ಬೆಂಗಳೂರು 12 ಪಂದ್ಯಗಳಲ್ಲಿ ಜಯ ಗಳಿಸಿದೆ. ಈ ಅಂಕಿ ಅಂಶಗಳ ಪ್ರಕಾರ ಐಪಿಎಲ್ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ಕಿಂತ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೇಲುಗೈ ಸಾಧಿಸಿದೆ.

 ಕೊಲ್ಕತ್ತಾ - ಬೆಂಗಳೂರು ಮುಖಾಮುಖಿಯ ಕೊನೆಯ 5 ಪಂದ್ಯಗಳು

ಕೊಲ್ಕತ್ತಾ - ಬೆಂಗಳೂರು ಮುಖಾಮುಖಿಯ ಕೊನೆಯ 5 ಪಂದ್ಯಗಳು

ಒಟ್ಟಾರೆ ಐಪಿಎಲ್ ಮುಖಾಮುಖಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೇಲುಗೈ ಸಾಧಿಸಿದ್ದರೆ, ಕೊನೆಯ 5 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3 ಪಂದ್ಯಗಳನ್ನು ಗೆಲ್ಲುವುದರ ಮೂಲಕ ಮೇಲುಗೈ ಸಾಧಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕೊನೆಯ 5 ಪಂದ್ಯಗಳ ಮುಖಾಮುಖಿಯಲ್ಲಿ 2 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿದೆ.

ಕಳೆದ ಆವೃತ್ತಿಯ ಫಲಿತಾಂಶ

ಕಳೆದ ಆವೃತ್ತಿಯ ಫಲಿತಾಂಶ

2020ರ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಲೀಗ್ ಹಂತದಲ್ಲಿ 2 ಬಾರಿ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಜಯಗಳಿಸಿತ್ತು.

ಕೊಲ್ಕತ್ತಾ - ಬೆಂಗಳೂರು ಮುಖಾಮುಖಿ ಪಂದ್ಯಗಳಲ್ಲಿ ಟಾಪ್ ಸ್ಕೋರರ್ಸ್

ಕೊಲ್ಕತ್ತಾ - ಬೆಂಗಳೂರು ಮುಖಾಮುಖಿ ಪಂದ್ಯಗಳಲ್ಲಿ ಟಾಪ್ ಸ್ಕೋರರ್ಸ್

ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮುಖಾಮುಖಿ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ವಿರಾಟ್ ಕೊಹ್ಲಿ 725 ರನ್ ಗಳಿಸಿದ್ದರೆ, ಕ್ರಿಸ್ ಗೇಲ್ 557 ಮತ್ತು ಗೌತಮ್ ಗಂಭೀರ್ 530 ರನ್ ಗಳಿಸಿದ್ದಾರೆ.

ಕೊಲ್ಕತ್ತಾ - ಬೆಂಗಳೂರು ಮುಖಾಮುಖಿ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಪಡೆದವರು

ಕೊಲ್ಕತ್ತಾ - ಬೆಂಗಳೂರು ಮುಖಾಮುಖಿ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಪಡೆದವರು

ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಸುನಿಲ್ ನರೇನ್. ಎರಡೂ ತಂಡಗಳ ಮುಖಾಮುಖಿ ಪಂದ್ಯಗಳಲ್ಲಿ ಸುನಿಲ್ ನರೇನ್ 16 ವಿಕೆಟ್ ಪಡೆದಿದ್ದರೆ, ಯುಜ್ವೇಂದ್ರ ಚಹಾಲ್ 14 ವಿಕೆಟ್ ಹಾಗೂ ವಿನಯ್ ಕುಮಾರ್ 13 ವಿಕೆಟ್‍ಗಳನ್ನು ಪಡೆದಿದ್ದಾರೆ.

ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಎರಡೂ ತಂಡಗಳ ಆಟಗಾರರ ಪಟ್ಟಿ

ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಎರಡೂ ತಂಡಗಳ ಆಟಗಾರರ ಪಟ್ಟಿ

ಅತಿ ಹೆಚ್ಚು ರನ್ ಗಳಿಸಿದವರು:

1. ದೇವದತ್ ಪಡಿಕ್ಕಲ್ - 473 ರನ್
2. ವಿರಾಟ್ ಕೊಹ್ಲಿ - 466 ರನ್
3. ಎಬಿ ಡಿವಿಲಿಯರ್ಸ್ - 454 ರನ್

ಅತಿ ಹೆಚ್ಚು ವಿಕೆಟ್ ಪಡೆದವರು :

1. ಯುಜ್ವೇಂದ್ರ ಚಹಾಲ್ - 21
2. ವರುಣ್ ಚಕ್ರವರ್ತಿ - 17
3. ಪ್ಯಾಟ್ ಕಮಿನ್ಸ್ - 12

Story first published: Sunday, April 18, 2021, 11:54 [IST]
Other articles published on Apr 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+