For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕೆಕೆಆರ್ vs ಆರ್‌ಆರ್: ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟ ಆಟಗಾರರು!

IPL 2021, KKR vs RR, match 54, Miller, Morgan, Narine eye on Milestone

ಐಪಿಎಲ್ 14ನೇ ಆವೃತ್ತಿಯ ಲೀಗ್ ಹಂತ ಅಂತಿಮ ಘಟ್ಟಕ್ಕೆ ತಲುಪಿದೆ. ಇಂದು ಎರಡು ಪಂದ್ಯಗಳು ನಡೆಯುತ್ತಿದ್ದು ಇಂದಿನ ಎರಡನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ರಾಜಸ್ಥಾನ್ ರಾಯಲ್ಸ್ ಈಗಾಗಲೇ ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದಿದ್ದು ಈ ಪಂದ್ಯವನ್ನು ಸೋತರೂ ಆರ್‌ಆರ್ ಕಳೆದುಕೊಳ್ಳುವಂತದ್ದೇನೂ ಇಲ್ಲ. ಆದರೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೆಕೆಆರ್ ತಂಡಕ್ಕೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದ್ದು ಮುಂದಿನ ಹಂತಕ್ಕೇರಲು ಗೆಲುವು ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಈ ಪಂದ್ಯ ಅತ್ಯಂತ ಕುತೂಹಲ ಮೂಡಿಸಿದೆ. ಅಲ್ಲದೆ ಕೆಕೆಆರ್‌ಗೆ ಮಾತ್ರವಲ್ಲ ಈ ಪಂದ್ಯದ ಫಲಿತಾಂಶ ಮುಂಬೈ ಇಂಡಿಯನ್ಸ್ ಮೇಲೆಯೂ ನೇರವಾಗಿ ಪರಿಣಾಮ ಬೀರಲಿದೆ. ಕೆಕೆಆರ್ ಈ ಪಂದ್ಯದಲ್ಲಿ ಸೋತರೆ ಅದು ಮುಂಬೈ ಮುಂದಿನ ಹಂತಕ್ಕೇರಲು ಸುಲಭ ದಾರಿ ಮಾಡಿಕೊಟ್ಟಂತಾಗುತ್ತದೆ. ಸದ್ಯ ಮುಂಬೈ ಹಾಗೂ ಕೊಲ್ಕತ್ತಾ ತಂಡಗಳು ಸಮಾನ ಅಂಕಗಳನ್ನು ಹೊಂದಿದ್ದು ಕೆಕೆಆರ್ ನೆಟ್ ರನ್‌ರೇಟ್‌ನಲ್ಲಿ ಮುಂದಿದೆ.

ಇನ್ನು ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಆಟಗಾರರು ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟಿದ್ದಾರೆ. ಯಾವೆಲ್ಲಾ ಆಟಗಾರರು ಯಾವ ಮೈಲಿಗಲ್ಲಿಗಳ ಸನಿಹದಲ್ಲಿದ್ದಾರೆ? ಮುಂದೆ ಓದಿ..

ದಿನೇಶ್ ಕಾರ್ತಿಕ್: ಕೋಲ್ಕತಾ ನೈಟ್ ರೈಡರ್ಸ್ ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ 400 ಬೌಂಡರಿ ಬಾರಿಸಿದ ಆಟಗಾರರ ಪಟ್ಟಿಗೆ ಸೇರಲು ಸಿದ್ಧರಾಗಿದ್ದಾರೆ. ಈ ಸಾಧನೆಗೆ ಡಿಕೆ ಎರಡು ಬೌಂಡರಿಗಳನ್ನು ಇಂದಿನ ಪಂದ್ಯದಲ್ಲಿ ಸಿಡಿಸಬೇಕಿದೆ

ಇಯಾನ್ ಮಾರ್ಗನ್: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯೊನ್ ಮಾರ್ಗನ್ ಈ ಬಾರಿಯ ಐಪಿಎಲ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. ಕೋಲ್ಕತಾ ಮೂಲದ ಫ್ರಾಂಚೈಸಿ ಪರವಾಗಿ 1000 ರನ್ ಗಳಿಸಿದ 13 ನೇ ಆಟಗಾರ ಎನಿಸಲು ಮಾರ್ಗನ್ ಇಂದಿನ ಪಂದ್ಯದಲ್ಲಿ 27 ರನ್ ಗಳಿಸಬೇಕಿದೆ.

ಸುನಿಲ್ ನರೈನ್: ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ಸುನೀಲ್ ನರೈನ್ ಐಪಿಎಲ್ ನಲ್ಲಿ 1000 ರನ್ ಪೂರೈಸಲು 74 ರಗಳ ಅಗತ್ಯವಿದೆ. ಇನ್ನು ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯ್ಲಿ ಎರಡನೇ ಸ್ಥಾನಕ್ಕೇರುವ ಅವಕಾಶ ಕೂಡ ನರೈನ್ ಮುಂದಿದ್ದು ಇದಕ್ಕಾಗಿ ಇಂದಿನ ಪಂದ್ಯದಲ್ಲಿ ನರೈನ್ ಕೇವಲ ಎರಡು ವಿಕೆಟ್ ಪಡೆಯಬೇಕಿದೆ. ಸದ್ಯ ನರೈನ್ 419 ವಿಕೆಟ್ ಪಡೆದು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಇಮ್ರಾನ್ ತಾಹಿರ್ 420 ವಿಕೆಟ್ ಪಡೆದಿದ್ದಾರೆ. ಹೀಗಾಗಿ ತಾಹಿರ್ ಹಿಂದಿಕ್ಕುವ ಅವಕಾಶ ನರೈನ್ ಮುಂದಿದೆ. ಒಟ್ಟಾರೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಡ್ವೇಯ್ನ್ ಬ್ರಾವೋ ಇದ್ದು ಬ್ರಾವೋ ಖಾತೆಯಲ್ಲಿ ಒಟ್ಟು 549 ವಿಕೆಟ್‌ಗಳಿವೆ.

ಡೇವಿಡ್ ಮಿಲ್ಲರ್: ಐಪಿಎಲ್‌ನಲ್ಲಿ 2000 ರನ್‌ಗಳಿಸಲು ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್‌ಗೆ 26 ರನ್‌ಗಳ ಅಗತ್ಯವಿದೆ. ಈ ಮೈಲಿಗಲ್ಲು ಸಾಧಿಸಿದರೆ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಆರನೇ ದಕ್ಷಿಣ ಆಫ್ರಿಕಾದ ಆಟಗಾರ ಎನಿಸಲಿದ್ದಾರೆ.

ಶ್ರೇಯಸ್ ಗೋಪಾಲ್: ರಾಜಸ್ಥಾನ ರಾಯಲ್ಸ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಐಪಿಎಲ್‌ನಲ್ಲಿ 50 ವಿಕೆಟ್ ಪಡೆದ ಆಟಗಾರರ ಪಟ್ಟಿಗೆ ಸೇರಿಕೊಳ್ಳುವ ಸನಿಹದಲ್ಲಿದ್ದಾರೆ. ಇದಕ್ಕಾಗಿ ಶ್ರೇಯಸ್ ಎರಡು ವಿಕೆಟ್ ಪಡೆಯಬೇಕಿದೆ.

ಲಿಯಾಮ್ ಲಿವಿಂಗ್ಸ್ಟನ್: ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಇಂದಿನ ಪಂದ್ಯದಲ್ಲಿ ಲಿಯಾಮ್ ಲಿವಿಂಗ್‌ಸ್ಟನ್‌ಗೆ ಅವಕಾಶ ನೀಡಿದರೆ ಟಿ20 ಕ್ರಿಕೆಟ್‌ನಲ್ಲಿ ಮೈಲಿಗಲ್ಲೊಂದನ್ನು ದಾಟುವ ಅವಕಾಶವಿದೆ. ಇಂಗ್ಲೆಂಡ್‌ನ ಈ ಆಲ್ ರೌಂಡರ್ ಟಿ 20 ಕ್ರಿಕೆಟ್ ನಲ್ಲಿ 4000 ರನ್ ಪೂರೈಸಲು ಕೇವಲ 14 ರನ್ ದೂರದಲ್ಲಿದೆ.

ರಾಜಸ್ಥಾನ್ ರಾಯಲ್ಸ್: ಇಂಡಿಯನ್ ಪ್ರೀಮಿಯರ್ ಲೀಗ್‌ನ ಈ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ 72 ಶೇಕಡಾ ಯಶಸ್ವಿ ಕ್ಯಾಚ್ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ 70 ಶೇಕಡಾ ಕ್ಯಾಚ್ ಪಡೆದ ಮುಂಬೈ ಇಂಡಿಯನ್ಸ್ ತಂಡವಿದೆ. ಅವರಿಗೆ ನೀಡಲಾದ 64 ಕ್ಯಾಚ್ ಅವಕಾಶಗಳಲ್ಲಿ 18ನ್ನು ಕೈ ಚೆಲ್ಲಿದ್ದಾರೆ

ರಾಜಸ್ಥಾನ್ ರಾಯಲ್ಸ್: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಅಂತಿಮ ಎರಡು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸಿದೆ. ಆದರೆ ಈ ಬಾರಿಯ ಆವೃತ್ತಿಯ ಭಾರತದಲ್ಲಿ ನಡೆದ ಮೊದಲ ಹಂತದ ಪಂದ್ಯದಲ್ಲಿ ಕೊಲ್ಕತ್ತಾ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಂಡಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಸಂಪೂರ್ಣ ಸ್ಕ್ವಾಡ್: ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಇಯಾನ್ ಮಾರ್ಗನ್ (ನಾಯಕ), ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಶಕೀಬ್ ಅಲ್ ಹಸನ್, ಸುನೀಲ್ ನರೈನ್, ಶಿವಂ ಮಾವಿ, ಟಿಮ್ ಸೀಫರ್ಟ್, ವರುಣ್ ಚಕ್ರವರ್ತಿ, ಹರ್ಭಜನ್ ಸಿಂಗ್, ಟಿಮ್ ಸೌತಿ, ಆಂಡ್ರೆ ರಸೆಲ್, ಬೆನ್ ಕಟ್ಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರ್ಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಸಂದೀಪ್ ವಾರಿಯರ್, ಪ್ರಸದ್ಧ್ ಕೃಷ್ಣ, ಲಾಕಿ ಫರ್ಗುಸನ್, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ವೈಭವ್ ಅರೋರಾ

ರಾಜಸ್ಥಾನ ರಾಯಲ್ಸ್ ಸಂಪೂರ್ಣ ಸ್ಕ್ವಾಡ್: ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತೇವಟಿಯಾ, ಶ್ರೇಯಸ್ ಗೋಪಾಲ್, ಚೇತನ್ ಸಕಾರಿಯಾ, ಕುಲ್ದಿಪ್ ಯಾದವ್, ಮುಸ್ತಫಿಜುರ್ ರಹಮಾನ್, ಜಯದೇವ್ ಉನದ್ಕಟ್, ಕ್ರಿಸ್ ಮೋರಿಸ್, ಮನನ್ ವೊಹ್ರಾ, ಲಿಯಾಮ್ ಲಿವಿಂಗ್‌ಸ್ಟೋನ್, ತಬ್ರೇಜ್ ಶಮ್ಸಿ, ಕೆಸಿ ಕರಿಯಪ್ಪ, ಮಹಿಪಾಲ್ ಲೊಮರ್, ಓಶಾನೆ ಥಾಮಸ್, ರಿಯಾನ್ ಪರಾಗ್, ಮಯಾಂಕ್ ಮಾರ್ಕಂಡೆ, ಅನುಜ್ ರಾವತ್, ಕಾರ್ತಿಕ್ ತ್ಯಾಗಿ, ಜೆರಾಲ್ಡ್ ಕೋಟ್ಜಿ, ಆಕಾಶ್ ಸಿಂಗ್

Story first published: Thursday, October 7, 2021, 17:27 [IST]
Other articles published on Oct 7, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+