For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕೆಕೆಆರ್ vs ಆರ್‌ಆರ್, ಟಾಸ್ ವರದಿ, ಪ್ಲೇಯಿಂಗ್ XI, Live ಸ್ಕೋರ್

IPL 2021, KKR vs RR, match 54, toss report, playing XI and Live score

ಐಪಿಎಲ್‌ನಲ್ಲಿ ಇಂದು ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ. ಕೆಕೆಆರ್‌ಗೆ ಪ್ಲೇ ಆಫ್ ಹಂತಕ್ಕೇರಲು ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

1
50859
1
50859

ರಾಜಸ್ಥಾನ್ ರಾಯಲ್ಸ್ ಈಗಾಗಲೇ ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದಿದ್ದು ಈ ಪಂದ್ಯವನ್ನು ಸೋತರೂ ಆರ್‌ಆರ್ ಕಳೆದುಕೊಳ್ಳುವಂತದ್ದೇನೂ ಇಲ್ಲ. ಆದರೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೆಕೆಆರ್ ತಂಡಕ್ಕೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದ್ದು ಮುಂದಿನ ಹಂತಕ್ಕೇರಲು ಗೆಲುವು ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಈ ಪಂದ್ಯ ಅತ್ಯಂತ ಕುತೂಹಲ ಮೂಡಿಸಿದೆ. ಅಲ್ಲದೆ ಕೆಕೆಆರ್‌ಗೆ ಮಾತ್ರವಲ್ಲ ಈ ಪಂದ್ಯದ ಫಲಿತಾಂಶ ಮುಂಬೈ ಇಂಡಿಯನ್ಸ್ ಮೇಲೆಯೂ ನೇರವಾಗಿ ಪರಿಣಾಮ ಬೀರಲಿದೆ. ಕೆಕೆಆರ್ ಈ ಪಂದ್ಯದಲ್ಲಿ ಸೋತರೆ ಅದು ಮುಂಬೈ ಮುಂದಿನ ಹಂತಕ್ಕೇರಲು ಸುಲಭ ದಾರಿ ಮಾಡಿಕೊಟ್ಟಂತಾಗುತ್ತದೆ. ಸದ್ಯ ಮುಂಬೈ ಹಾಗೂ ಕೊಲ್ಕತ್ತಾ ತಂಡಗಳು ಸಮಾನ ಅಂಕಗಳನ್ನು ಹೊಂದಿದ್ದು ಕೆಕೆಆರ್ ನೆಟ್ ರನ್‌ರೇಟ್‌ನಲ್ಲಿ ಮುಂದಿದೆ.

1
4-2021

ಇನ್ನು ಈ ಪಂದ್ಯಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಿಕೊಳ್ಳಲಾಗಿದೆ. ಲಿಯಾಮ್ ಲಿವಿಂಗ್ಸ್ಟನ್, ಕ್ರಿಸ್ ಮೋರಿಸ್, ಅನುಜ್ ರಾವತ್ ಹಾಗೂ ಜಯ್‌ದೇವ್ ಉನಾದ್ಕಟ್ ಆಡುವ ಬಳಗಕ್ಕೆ ವಾಪಾಸಾಗಿದ್ದಾರೆ.

ಮತ್ತೊಂದೆಡೆ ಕೆಕೆಆರ್ ತಂಡದಲ್ಲಿ ಕೂಡ ಒಮದು ಬದಲಕಾವಣೆ ಮಾಡಿಕೊಳ್ಳಲಾಗಿದೆ. ಲೂಕಿ ಫರ್ಗ್ಯೂಸನ್ ಈ ಪಂದ್ಯದಲ್ಲಿ ಆಡುವ ಬಳಗಕ್ಕೆ ಸೇರ್ಪಡೆಯಾಗಿದ್ದು ಟಿಮ್ ಸೌಥಿ ತಂಡದಿಂದ ಹೊರಬಿದ್ದಿದ್ದಾರೆ. ಉಳಿದಂತೆ ಎಲ್ಲರೂ ಈ ಹಿಂದಿನ ಪಂದ್ಯದಲ್ಲಿದ್ದ ಆಟಗಾರರೇ ಮುಂದುವರಿದಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್: ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ನಾಯಲ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
ಬೆಂಚ್: ಹರ್ಭಜನ್ ಸಿಂಗ್, ಟಿಮ್ ಸೌಥಿ, ಆಂಡ್ರೆ ರಸೆಲ್, ಬೆನ್ ಕಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರ್ಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಸಂದೀಪ್ ವಾರಿಯರ್, ಪ್ರಸಿದ್ ಕೃಷ್ಣ, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ವೈಭವ್ ಅರೋರಾ, ಟಿಮ್ ಸೀಫರ್ಟ್

MS Dhoni ಮುಂದಿನ ಬಾರಿ CSKಗೆ Coach ಆಗ್ತಾರಾ? | Oneindia Kannada

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಲಿಯಾಮ್ ಲಿವಿಂಗ್ಸ್ಟನ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಶಿವಂ ದುಬೆ, ಕ್ರಿಸ್ ಮೋರಿಸ್, ರಾಹುಲ್ ತೇವಟಿಯಾ, ಜಯದೇವ್ ಉನಾದ್ಕಟ್, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್
ಬೆಂಚ್ ಮನನ್ ವೋಹ್ರಾ, ತಬ್ರೇಜ್ ಶಮ್ಸಿ, ಕೆಸಿ ಕರಿಯಪ್ಪ, ಮಹಿಪಾಲ್ ಲೊಮರ್, ಓಶಾನೆ ಥಾಮಸ್, ರಿಯಾನ್ ಪರಾಗ್, ಮಯಾಂಕ್ ಮಾರ್ಕಂಡೆ, ಕಾರ್ತಿಕ್ ತ್ಯಾಗಿ, ಜೆರಾಲ್ಡ್ ಕೋಟ್ಜಿ, ಆಕಾಶ್ ಸಿಂಗ್, ಎವಿನ್ ಲೂಯಿಸ್, ಶ್ರೇಯಸ್ ಗೋಪಾಲ್, ಡೇವಿಡ್ ಮಿಲ್ಲರ್, ಕುಲ್ದಿಪ್ ಯಾದವ್

Story first published: Thursday, October 7, 2021, 19:38 [IST]
Other articles published on Oct 7, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+