ಐಪಿಎಲ್ 2021: ವಿಶೇಷ ದಾಖಲೆ ಬರೆದ ಪಂಜಾಬ್ ನಾಯಕ ಕೆಎಲ್ ರಾಹುಲ್

ದುಬೈ: ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ರಾಹುಲ್ 3000 ರನ್ ದಾಖಲೆ ನಿರ್ಮಿಸಿದ್ದಾರೆ. ರಾಜಸ್ಥಾನ್ ವಿರುದ್ಧ ಐಪಿಎಲ್ 32ನೇ ಪಂದ್ಯದಲ್ಲಿ ರಾಹುಲ್ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಸೆಪ್ಟೆಂಬರ್ 21ರ ಮಂಗಳವಾರ ದುಬೈ ಇಂಟರ್ ನ್ಯಾನಷಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಆರಂಭಿಕರಾಗಿ ಆಡಿದ್ದ ರಾಹುಲ್ 33 ಎಸೆತಗಳಲ್ಲಿ 49 ರನ್ ಬಾರಿಸಿದರು.
ಆ ಬಳಿಕ ಚೇತನ್ ಸಕಾರಿಯಾ ಅವರ 11.5ರ ಓವರ್‌ನಲ್ಲಿ ಕಾರ್ತಿಕ್ ತ್ಯಾಗಿಗೆ ಕ್ಯಾಚಿತ್ತು ರಾಹುಲ್ ನಿರ್ಗಮಿಸಿದರು. ಈ ವೇಳೆಗಾಗಲೇ ರಾಹುಲ್ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿತ್ತು. 89ನೇ ಪಂದ್ಯದಲ್ಲಿ ರಾಹುಲ್ 3000 ರನ್ ಗಡಿ ಮುಟ್ಟಿದ್ದಾರೆ. ಈಗ ಒಟ್ಟಾರೆ ರಾಹುಲ್ ಐಪಿಎಲ್‌ನಲ್ಲಿ 3027 ರನ್ ಬಾರಿಸಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್, ರಾಜಸ್ಥಾನ್ ರಾಯಲ್ಸ್ ತಂಡ, ಎವಿನ್ ಲೆವಿಸ್ 36, ಯಶಸ್ವಿ ಜೈಸ್ವಾಲ್ 49, ಸಂಜು ಸ್ಯಾಮ್ಸನ್ 4, ಲಿಯಾಮ್ ಲಿವಿಂಗ್‌ಸ್ಟೋನ್ 25, ರಿಯಾನ್ ಪರಾಗ್ 4, ಮಹಿಪಾಲ್ ಲೋಮ್ರರ್ 43, ರಾಹುಲ್ ತೆವಾಟಿಯಾ 2, ಕ್ರಿಸ್ ಮೋರಿಸ್ 5, ಚೇತನ್ ಸಕಾರಿಯಾ 7, ಕಾರ್ತಿಕ್ ತ್ಯಾಗಿ 1 ರನ್‌ನೊಂದಿಗೆ 20 ಓವರ್ ಎಲ್ಲಾ ವಿಕೆಟ್ ಕಳೆದು 185 ರನ್ ಬಾರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications