Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ದಾಖಲೆಗಾಗಿ ಡೇವಿಡ್ ವಾರ್ನರ್ ಹಿಂದಿಕ್ಕಿದ ಕೆಎಲ್ ರಾಹುಲ್

IPL 2021: KL Rahul creates record for Fastest to score 3,000 IPL runs
KL Rahul ಪಂದ್ಯ ಮುಗಿದಾದ ನಂತರ ಹೀಗೆ ಹೇಳಿದ್ದೇಕೆ | Oneindia Kannada

ದುಬೈ: ಪಂಜಾಬ್ ಕಿಂಗ್ಸ್‌ ನಾಯಕ ಕೆಎಲ್ ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ವೇಗವಾಗಿ 3000 ರನ್ ಬಾರಿಸಿದ ದಾಖಲೆ ಪಟ್ಟಿಯಲ್ಲಿ ರಾಹುಲ್ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಈ ದಾಖಲೆಗಾಗಿ ರಾಹುಲ್ ಡೇವಿಡ್ ವಾರ್ನರ್ ದಾಖಲೆ ಸರಿಗಟ್ಟಿದ್ದಾರೆ.

ಸೆಪ್ಟೆಂಬರ್ 21ರ ಮಂಗಳವಾರ ದುಬೈ ಇಂಟರ್ ನ್ಯಾನಷಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಆರಂಭಿಕರಾಗಿ ಆಡಿದ್ದ ರಾಹುಲ್ 33 ಎಸೆತಗಳಲ್ಲಿ 49 ರನ್ ಬಾರಿಸಿದರು. ಆ ಬಳಿಕ ಚೇತನ್ ಸಕಾರಿಯಾ ಅವರ 11.5ರ ಓವರ್‌ನಲ್ಲಿ ಕಾರ್ತಿಕ್ ತ್ಯಾಗಿಗೆ ಕ್ಯಾಚಿತ್ತು ರಾಹುಲ್ ನಿರ್ಗಮಿಸಿದರು. ಈ ವೇಳೆಗಾಗಲೇ ರಾಹುಲ್ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿತ್ತು.

89ನೇ ಪಂದ್ಯದಲ್ಲಿ 80ನೇ ಇನ್ನಿಂಗ್ಸ್‌ನಲ್ಲಿ ರಾಹುಲ್ 3000+ ರನ್ ಗಡಿ ಮುಟ್ಟಿದ್ದಾರೆ. ಈಗ ಒಟ್ಟಾರೆ ರಾಹುಲ್ ಐಪಿಎಲ್‌ನಲ್ಲಿ 3027 ರನ್ ಬಾರಿಸಿದ್ದಾರೆ. ಅತೀ ವೇಗವಾಗಿ 3000 ರನ್ ಬಾರಿಸಿದ ದಾಖಲೆ ಪಟ್ಟಿಯಲ್ಲಿ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. 75 ಇನ್ನಿಂಗ್ಸ್‌ಗಳಲ್ಲಿ ಗೇಲ್ 3000 ರನ್ ಬಾರಿಸಿದ್ದರು.

ಐಪಿಎಲ್‌ನಲ್ಲಿ ವೇಗವಾಗಿ 3,000 ರನ್ ಬಾರಿಸಿದ ದಾಖಲೆಗಳ ಪಟ್ಟಿ
* ಕ್ರಿಸ್ ಗೇಲ್, 75 ಇನ್ನಿಂಗ್ಸ್
* ಕೆಎಲ್ ರಾಹುಲ್, 80 ಇನ್ನಿಂಗ್ಸ್
* ಡೇವಿಡ್ ವಾರ್ನರ್, 94 ಇನ್ನಿಂಗ್ಸ್
* ಸುರೇಶ್ ರೈನಾ, 103 ಇನ್ನಿಂಗ್ಸ್
* ಎಬಿ ಡಿ ವಿಲಿಯರ್ಸ್, 104 ಇನ್ನಿಂಗ್ಸ್
* ಅಜಿಂಕ್ಯ ರಹಾನೆ, 104 ಇನ್ನಿಂಗ್ಸ್

Story first published: Wednesday, September 22, 2021, 10:07 [IST]
Other articles published on Sep 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+