Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಎಲ್ ರಾಹುಲ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ: ಒಂದು ವಾರದ ವಿಶ್ರಾಂತಿಗೆ ಸೂಚನೆ

IPL 2021: KL Rahul successfully went appendicitis surgery and can start playing after a weeks rest

ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹಣಾಹಣಿಗೆ ಕೆಲವೇ ಗಂಟೆಗಳಿರುವಾಗ ತೀವ್ರ ಹೊಟ್ಟನೋವಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ರಾಹುಲ್ ಅಪೆಂಡಿಸಿಟಿಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ರಾಹುಲ್‌ಗೆ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಗಿತ್ತು.

ಈಗ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅವರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸೋಮವಾರ ಈ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದ್ದು ಒಂದು ವಾರಗಳ ವಿಶ್ರಾಂತಿಯನ್ನು ರಾಹುಲ್‌ಗೆ ಸೂಚಿಸಲಾಗಿದೆ. ಹೀಗಾಗಿ ಕೆಎಲ್ ರಾಹುಲ್ ಸದ್ಯ ಪಂಜಾಬ್ ತಂಡದ ಬಯೋಬಬಲ್‌ನಿಂದ ಹೊರಗುಳಿದಿರುವ ಕಾರಣ ಒಂದು ವಾರಗಳ ಕಡ್ಡಾಯ ಕ್ವಾರಂಟೈನ್‌ ನಂತರ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.

ಕೆಎಲ್ ರಾಹುಲ್ ಕನಿಷ್ಠ ತೀವ್ರತೆಯ ಶಸ್ತ್ರಚಿಕಿತ್ಸೆಯಾದ ಲ್ಯಾಪರೊಸ್ಕೋಪಿಕ್ ಅಪೆಂಡೆಕ್ಟೊಮಿಗೆ ಒಳಗಾಗಿದ್ದಾರೆ. ಹೀಗಾಗಿ ಒಂದು ವಾರದ ವಿಶ್ರಾಂತಿಯ ನಂತರ ಎಲ್ಲಾ ಚಟುವಟಿಕೆಗಳನ್ನು ಪುನರಾರಂಭಿಸಲು ಸಾಧ್ಯವಾಗುತ್ತದೆ ಎಂದು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಕೆಎಲ್ ರಾಹುಲ್‌ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ ಅಪೆಂಡಿಸಿಟಿಸ್‌ಗೆ ಸುತ್ತಾಗಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ತಕ್ಷಣವೇ ಅಹ್ಮದಾಬಾದ್‌ನಿಂದ ಚಾರ್ಟರ್ಡ್ ಫ್ಲೈಟ್‌ ಮೂಲಕ ಶಸ್ತ್ರಚಿಕಿತ್ಸೆಗಾಗಿ ಮುಂಬೈಗೆ ಕಳುಹಿಸಲಾಗಿತ್ತು. ಈಗ ಶಸ್ತ್ರ ಚಿಕಿತ್ಸೆ ಸಂಪೂರ್ಣವಾಗಿದ್ದು ವಿಶ್ರಾಂತಿಯ ನಂತರ ಕ್ವಾರಂಟೈನ್ ನಿಯಮಗಳನ್ನು ಪೂರೈಸು ಮತ್ತೆ ತಂಡವನ್ನು ಕೆಎಲ್ ರಾಹುಲ್ ಕೂಡಿಕೊಳ್ಳುವ ಸಾಧ್ಯತೆಯಿದೆ.

Story first published: Tuesday, May 4, 2021, 9:38 [IST]
Other articles published on May 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+