Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋಲ್ಕತ್ತಾ, ಅಹ್ಮದಾಬಾದ್ ಸೇರಿ 5 ತಾಣಗಳಲ್ಲಿ 2021ರ ಐಪಿಎಲ್

IPL 2021: Kolkata, Ahmedabad among 5 centres shortlisted for IPL 2021

ನವದೆಹಲಿ: ಕೋಲ್ಕತ್ತಾ, ಅಹ್ಮದಾಬಾದ್ ಸೇರಿ ಒಟ್ಟು 5 ತಾಣಗಳಲ್ಲಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ನಡೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಯೋಚಿಸುತ್ತಿದೆ. ಹೀಗಾಗಿ ಒಟ್ಟು ಐದು ತಾಣಗಳನ್ನು ತಾಣಗಳ ಅಂತಿಮ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಆರಂಭದಲ್ಲಿ ಮುಂಬೈನಲ್ಲಿ ಮಾತ್ರ ಐಪಿಎಲ್ 2021ರ ಎಲ್ಲಾ ಪಂದ್ಯಗಳು ನಡೆಯಲಿವೆ ಎನ್ನಲಾಗಿತ್ತು. ಆದರೆ ಈಗ ಚೆನ್ನೈ, ಅಹ್ಮದಾಬಾದ್, ಕೋಲ್ಕತ್ತಾ, ಬೆಂಗಳೂರು ಮತ್ತು ಡೆಲ್ಲಿ ತಾಣಗಳನ್ನು ಅಂತಿಮ ಪಟ್ಟಿಯಲ್ಲಿ ಉಳಿಸಿಕೊಳ್ಳಾಗಿದೆ ಎಂದು ಹೇಳಲಾಗುತ್ತಿದೆ.

ಮುಂಬೈ ತಾಣವನ್ನು ಸದ್ಯ ಮೀಸಲು ತಾಣವಾಗಿ ಬಿಸಿಸಿಐ ಆಯ್ಕೆಯಾಗಿಟ್ಟುಕೊಂಡಿದೆ. ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಬಳಿಕ ತಾಣವನ್ನು ನಿರ್ಧರಿಸಲಾಗುತ್ತದೆ ಎಂದು ಮೂಲವೊಂದು ತಿಳಿಸಿದೆ. 14ನೇ ಆವೃತ್ತಿ ಐಪಿಎಲ್ ಏಪ್ರಿಲ್ 10 ವೇಳೆ ಶುರುವಾಗುವ ನಿರೀಕ್ಷೆಯಿದೆ.

'ಉದ್ಧವ್ ಠಾಕ್ರೆ ಮುಂದಾಳತ್ವದ ಮಹಾ ವಿಕಾಸ್ ಅಘಾದಿ ಸರ್ಕಾರದ ಜೊತೆಗಿನ ಮಾತುಕತೆ ಬಾಕಿಯಿರುವುದರಿಂದ ಮುಂಬೈ ತಾಣದ ಇನ್ನೂ ಅಂತಿಮಗೊಂಡಿಲ್ಲ,' ಎಂದು ಐಪಿಎಲ್ ಮೂಲವೊಂದು ಕ್ರಿಕ್ ಬಝ್‌ಗೆ ಮಾಹಿತಿ ನೀಡಿದೆ.

Story first published: Saturday, February 27, 2021, 16:49 [IST]
Other articles published on Feb 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+