ಐಪಿಎಲ್ 2021: ಕೆಕೆಆರ್‌ಗೆ 128 ರನ್‌ಗಳ ಸುಲಭ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪಂತ್ ಪಡೆ ಸವಾಲಿನ ಮೊತ್ತವನ್ನು ಪೇರಿಸಲು ವಿಫಲವಾಗಿದೆ. ನೈಟ್ ರೈಡರ್ಸ್ ಬೌಲರ್‌ಗಳ ದಾಳಿಗೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್ ದಾಂಡಿಗರು ಕೇವಲ 127 ರನ್‌ಗಳನ್ನು ಮಾತ್ರವೇ ಗಳಿಸಿದೆ. ಈ ಮೂಲಕ ಈ ಕುತೂಹಲಕಾರಿ ಕದನದಲ್ಲಿ ಸಮಾನ್ಯ ಗುರಿಯನ್ನು ನೀಡಿದ ಡೆಲ್ಲಿ ಕ್ಯಾಪಿಟಲ್ಸ್.
35 ರನ್‌ಗಳ ಸಾಧಾರಣ ಆರಂಭವನ್ನು ಪಡೆದ ನಂತರ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಯಾವೊಬ್ಬ ಆಟಗಾರ ಕೂಡ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ನಾಯಕ ರಿಷಭ್ ಪಂತ್ ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ಹೋರಾಟ ನಡೆಸಿದರೂ ಅವರಿಗೆ ಮತ್ತೊಂದು ತುದಿಯಲ್ಲಿ ಬೆಂಬಲ ದೊರೆಯಲಿಲ್ಲ. ರಿಷಭ್ ಪಂತ್ ಈ ಪಂದ್ಯದಲ್ಲಿ 39 ರನ್‌ಗಳಿಸಿ ರನೌಟ್ ಆದರು. ಆರಂಭಿಕ ಆಟಗಾರ ಸ್ಟೀವ್ ಸ್ಮಿತ್ ಕೂಡ 29 ರನ್‌ಗಳಿಸಿದ್ದಾರೆ. ಮತ್ತೋರ್ವ ಆರಂಭಿಕ ಆಟಗಾರ ಧವನ್ 24 ರನ್‌ಗಳ ಕೊಡುಗೆ ನೀಡಿದರು. ಉಳಿದಂತೆ ಎಲ್ಲಾ ಆಟಗಾರರು ಕೂಡ ಒಂದಂಕಿಗೆ ಔಟಾಗಿದ್ದಾರೆ.
ಈ ಪಂದ್ಯದಲ್ಲಿ ಕೆಕೆಆರ್ ಪೈಕಿ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಸುನಿಲ್ ನರೈನ್, ಲೂಕಿ ಫರ್ಗ್ಯೂಸನ್ ಹಾಗೂ ವೆಂಕಟೇಶ್ ಐಯ್ಯರ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದ್ದಾರೆ. ಇನ್ನೊಂದು ವಿಕೆಟ್ ಟಿಮ್ ಸೌಥಿ ಪಾಲಾಯಿತು.
ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡು ಬದಲಾವಣೆ ಮಾಡಿಕೊಂಡಿದೆ. ಪ್ರಸಿದ್ಧ್ ಕೃಷ್ಣ ಆಡುವ ಬಳಗದಿಂದ ಹೊರಗುಳಿದಿದ್ದು ಅವರ ಸ್ಥಾನಕ್ಕೆ ಸಂದೀಪ್ ವಾರಿಯರ್ ಕಾಣಿಸಿಕೊಂಡಿದ್ದಾರೆ. ಆಲ್‌ರೌಂಡರ್ ಆಂಡ್ರೆ ರಸೆಲ್ ಕೂಡ ಗಾಯದ ಕಾರಣಕ್ಕೆ ಹೊರಗುಳಿದಿದ್ದು ಟಿಮ್ ಸೌಥಿ ತಂಡಕ್ಕೆ ಸೇರಿಕೊಂಡಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೂಡ ಒಂದು ಬದಲಾವಣೆಯನ್ನು ಮಾಡಿಕೊಂಡಿದೆ. ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಗಾಯಗೊಂಡಿದ್ದು ಆಡುವ ಬಳಗದಿಮದ ಹೊರಗುಳಿದಿದ್ದರೆ ಅವರ ಸ್ಥಾನಕ್ಕೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಆಯ್ಕೆಯಾಗಿದ್ದು ಆರಂಭಿಕನಾಗಿ ಶಿಖರ್ ಧವನ್‌ಗೆ ಸಾಥ್ ನೀಡಲಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದೆ. ಆಡಿರುವ 10 ಪಂದ್ಯಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಗಳ ಪೈಕಿ ಡೆಲ್ಲಿ 8ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ತನ್ನ ಅದ್ಭುತ ಪ್ರದರ್ಶನವನ್ನು ಈ ಪಂದ್ಯದಲ್ಲಿಯೂ ಮುಂದುವರಿಸುವ ಆತ್ಮವಿಶ್ವಾಸದಲ್ಲಿದೆ. ಮತ್ತೊಂದೆಡೆ ಕೆಕೆಆರ್ ತಂಡ ಮೊದಲ ಚರಣದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನಿಡಿದ ಬಳಿಕ ಎರಡನೇ ಚರಣದಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI: ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ಲಾಕಿ ಫರ್ಗುಸನ್, ಟಿಮ್ ಸೌಥಿ, ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್
ಬೆಂಚ್: ಹರ್ಭಜನ್ ಸಿಂಗ್, ಶಕೀಬ್ ಅಲ್ ಹಸನ್, ಬೆನ್ ಕಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರ್ಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಟಿಮ್ ಸೀಫರ್ಟ್, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ವೈಭವ್ ಅರೋರಾ, ಪ್ರಸಿದ್ ಕೃಷ್ಣ, ಆಂಡ್ರೆ ರಸೆಲ್
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI: ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್/ ನಾಯಕ ), ಶಿಮ್ರಾನ್ ಹೆಟ್ಮೀರ್, ಲಲಿತ್ ಯಾದವ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಚ್ ನಾರ್ಕಿಯಾ, ಆವೇಶ್ ಖಾನ್
ಬೆಂಚ್: ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಉಮೇಶ್ ಯಾದವ್, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕಸ್ ಸ್ಟೋಯಿನಿಸ್, ಲುಕ್ಮಾನ್ ಮೇರಿವಾಲಾ, ಟಾಮ್ ಕುರ್ರನ್, ಬೆನ್ ದ್ವಾರಶುಯಿಸ್, ಪ್ರವೀಣ್ ದುಬೆ, ವಿಷ್ಣು ವಿನೋದ್, ಕುಲ್ವಂತ್ ಖೇಜ್ರೋಲಿಯಾ, ರಿಪಾಲ್ ಪಟೇಲ್, ಪೃಥ್ವಿ ಶಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications