Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಕೋಲ್ಕತ್ತಾ vs ಮುಂಬೈ, ಹವಾಮಾನ, ಪಿಚ್ ವರದಿ

IPL 2021, Kolkata Knight Riders vs Mumbai Indians, Match 5: Weather Forecast, Pitch Report

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 13) ಐಪಿಎಲ್ 5ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಡಲಿವೆ. ಎರಡೂ ತಂಡಗಳಿಗೂ ಇದು ಟೂರ್ನಿಯ ಎರಡನೇ ಪಂದ್ಯ.

ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿತ್ತು. ಇತ್ತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಗೆಲುವಿನ ಹುಮ್ಮಸ್ಸಿನಲ್ಲಿದೆ. ಇಂದು ಎರಡೂ ತಂಡಗಳೂ ಗೆಲುವಿನ ನಿರೀಕ್ಷೆಯಲ್ಲಿವೆಯಾದರೂ ಮುಂಬೈ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಹವಾಮಾನ ವರದಿ
ಪಂದ್ಯ ನಡೆಯುವ ಚೆನ್ನೈನಲ್ಲಿ 32 ಡಿಗ್ರೀ ಸೆಲ್ಶಿಯನ್ ತಾಪಮಾನ ಇರಲಿದೆ. ರಾತ್ರಿ ಹೊತ್ತು ಮಂಜು ಬೀಳುವ ಪ್ರಮಾಣ ಹೆಚ್ಚಿರಲಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯಿದೆ. ತೇವಾಂಶದಿಂದಾಗಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರನ್‌ ಗಳಿಸುವ ಅನುಕೂಲವಿರುವುದರಿಂದ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್‌ ಆರಿಸುವ ಸಾಧ್ಯತೆಯಿದೆ. ಮಳೆ ಬರುವ ಸಾಧ್ಯತೆಯಿಲ್ಲ.

ಚೆನ್ನೈ ಪಿಚ್ ವರದಿ
ಚೆನ್ನೈಯ ಚೆಪಕ್ ಸ್ಟೇಡಿಯಂ ಕೊಂಚ ಸ್ಲೋ ಪಿಚ್. ಐಪಿಎಲ್‌ನಲ್ಲೂ ಇದರ ಪರಿಣಾಮ ಕಾಣಸಿಗಲಿದೆ. ಹೊಸ ಚೆಂಡಿನಿಂದ ಬೌಲಿಂಗ್ ಮಾಡುವ ವೇಗಿಗಳು ವೇಗದಲ್ಲಿ ಬದಲಾವಣೆ ಮಾಡುತ್ತಿದ್ದರೆ ವಿಕೆಟ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಸ್ಪಿನ್ನರ್‌ಗಳೂ ಮೈದಾನವನ್ನು ತಂತ್ರಗಾರಿಕೆಯಿಂದ ಬಳಸಿಕೊಳ್ಳಬಹುದಾಗಿದೆ. ಯಾಕೆಂದರೆ ಈ ಪಿಚ್‌ನಲ್ಲಿ ಚೆಂಡು ತಿರುತ್ತದೆ. 170ಕ್ಕೂ ಹೆಚ್ಚು ರನ್ ಗಳಿಸಿದರೆ ಅದು ಉತ್ತಮ ಮೊತ್ತವಾಗಲಿದೆ.

Story first published: Tuesday, April 13, 2021, 15:34 [IST]
Other articles published on Apr 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+