
ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 21ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದ ಆರಂಭದಲ್ಲೇ ಕೋಲ್ಕತ್ತಾ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಪಂಜಾಬ್ ಕಿಂಗ್ಸ್ ನೀಡಿರುವ 124 ರನ್ ಬೆನ್ನಟ್ಟಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಶುಬ್ಮನ್ ಗಿಲ್ (9), ನಿತೀಶ್ ರಾಣಾ (0), ಸುನಿಲ್ ನರೈನ್ (0) ಬೇಗನೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ದಾರೆ. ಗಿಲ್ ವಿಕೆಟ್ ಮೊಹಮ್ಮದ್ ಶಮಿಗೆ ಲಭಿಸಿದರೆ, ರಾಣಾ ವಿಕೆಟ್ ಮೋಯ್ಸಸ್ ಹೆನ್ರಿಕ್ಸ್, ನರೈನ್ ವಿಕೆಟ್ ಅರ್ಷದೀಪ್ ಸಿಂಗ್‌ಗೆ ದೊರೆತಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್, ಕೆಎಲ್ ರಾಹುಲ್ 19, ಮಯಾಂಕ್ ಅಗರ್ವಾಲ್ 31, ನಿಕೋಲಸ್ ಪೂರನ್ 19, ಶಾರುಖ್ ಖಾನ್ 13, ಕ್ರಿಸ್ ಜೋರ್ಡನ್ 30 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಪಳೆದು 123 ರನ್ ಗಳಿಸಿತು.
ಪಂಜಾಬ್ ಇನ್ನಿಂಗ್ಸ್‌ನಲ್ಲಿ ಕೋಲ್ಕತ್ತಾದ ಶಿವಂ ಮಾವಿ 1, ಪ್ಯಾಟ್ ಕಮಿನ್ಸ್ 2, ಸುನಿಲ್ ನರೈನ್ 2, ಪ್ರಸಿದ್ಧ್ ಕೃಷ್ಣ 3, ವರುಣ್ ಚಕ್ರವರ್ತಿ 1 ವಿಕೆಟ್ ಪಡೆದರು. ಇದರಲ್ಲಿ ಕೃಷ್ಣ 30 ರನ್‌ಗೆ 3 ವಿಕೆಟ್ ಮುರಿದಿದ್ದು ಗಮನ ಸೆಳೆದಿತ್ತು.