ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಪಂಜಾಬ್ ಕಿಂಗ್ಸ್‌ ಮಣಿಸಿದ ಕೋಲ್ಕತ್ತಾ ನೈಟ್ ರೈಡರ್ಸ್

IPL 2021: Kolkata Knight Riders vs Punjab Kings, 21st Match, Report

ಅಹ್ಮದಾಬಾದ್‌: ಅಹ್ಮದಾಬಾದ್‌ನ ನರೇಂದ್ರ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 26) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 21ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್ ಸುಲಭ ಜಯ ಗಳಿಸಿದೆ. ನಾಯಕ ಇಯಾನ್ ಮಾರ್ಗನ್, ರಾಹುಲ್ ತ್ರಿಪಾಠಿ ಬ್ಯಾಟಿಂಗ್‌, ಪ್ರಸಿದ್ಧ್ ಕೃಷ್ಣ ಬೌಲಿಂಗ್‌ ನೆರವಿನೊಂದಿಗೆ ಕೆಕೆಆರ್‌ 2ನೇ ಜಯ ದಾಖಲಿಸಿದೆ.

ಕೋವಿಡ್-19ನಿಂದ ನಲುಗುತ್ತಿರುವ ಭಾರತಕ್ಕಾಗಿ ಪ್ರಾರ್ಥಿಸಿದ ಬಾಬರ್ಕೋವಿಡ್-19ನಿಂದ ನಲುಗುತ್ತಿರುವ ಭಾರತಕ್ಕಾಗಿ ಪ್ರಾರ್ಥಿಸಿದ ಬಾಬರ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್‌, ಕೆಎಲ್ ರಾಹುಲ್ 19, ಮಯಾಂಕ್ ಅಗರ್ವಾಲ್ 31, ನಿಕೋಲಸ್ ಪೂರನ್ 19, ಶಾರುಖ್ ಖಾನ್ 13, ಕ್ರಿಸ್ ಜೋರ್ಡನ್ 30 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್‌ ಕಳೆದು 123 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್ಮನ್ ಗಿಲ್ 9, ರಾಹುಲ್ ತ್ರಿಪಾಠಿ 41, ಇಯಾನ್ ಮಾರ್ಗನ್ 47, ಆ್ಯಂಡ್ರೆ ರಸೆಲ್ 10, ದಿನೇಶ್ ಕಾರ್ತಿಕ್ 12 ರನ್‌ನೊಂದಿಗೆ 16.4ನೇ ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 126 ರನ್ ಗಳಿಸಿತು.

ಪ್ರಮುಖ ಕ್ರಿಕೆಟಿಗರು ಐಪಿಎಲ್ ತೊರೆಯುತ್ತಿರುವುದಕ್ಕೆ ಅಸಲಿ ಕಾರಣಗಳಿವು!ಪ್ರಮುಖ ಕ್ರಿಕೆಟಿಗರು ಐಪಿಎಲ್ ತೊರೆಯುತ್ತಿರುವುದಕ್ಕೆ ಅಸಲಿ ಕಾರಣಗಳಿವು!

ಪಂಜಾಬ್ ಇನ್ನಿಂಗ್ಸ್‌ನಲ್ಲಿ ಕೋಲ್ಕತ್ತಾದ ಶಿವಂ ಮಾವಿ 1, ಪ್ಯಾಟ್ ಕಮಿನ್ಸ್ 2, ಸುನಿಲ್ ನರೈನ್ 2, ಪ್ರಸಿದ್ಧ್ ಕೃಷ್ಣ 3, ವರುಣ್ ಚಕ್ರವರ್ತಿ 1 ವಿಕೆಟ್‌ ಪಡೆದರೆ, ಕೋಲ್ಕತ್ತಾ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ಮೋಯ್ಸಸ್ ಹೆನ್ರಿಕ್ಸ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಮತ್ತು ದೀಪಕ್ ಹೂಡಾ 1 ವಿಕೆಟ್‌ನೊಂದಿಗೆ ಗಮನ ಸೆಳೆದರು.

Story first published: Tuesday, April 27, 2021, 0:12 [IST]
Other articles published on Apr 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X