Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ರಾಜಸ್ಥಾನ್‌ಗೆ ಸಾಧಾರಣ ರನ್ ಗುರಿ ನೀಡಿದ ಕೋಲ್ಕತ್ತಾ

IPL 2021: Kolkata Knight Riders vs Rajasthan Royals, 18th Match, 1st Innings Update

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 18ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಡುತ್ತಿವೆ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ ಎದುರಾಳಿಗೆ 134 ರನ್ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್, ನಿತೀಶ್ ರಾಣಾ 22, ಶುಬ್ಮನ್ ಗಿಲ್ 11, ರಾಹುಲ್ ತ್ರಿಪಾಠಿ 36, ಸುನಿಲ್ ನರೈನ್ 6, ದಿನೇಶ್ ಕಾರ್ತಿಕ್ 25, ಆ್ಯಂಡ್ರೆ ರಸೆಲ್ 9, ಪ್ಯಾಟ್ ಕಮಿನ್ಸ್ 10 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 133 ರನ್ ಗಳಿಸಿತು.

ಕೋಲ್ಕತ್ತಾ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ನ ಕ್ರಿಸ್ ಮೋರಿಸ್ 4, ಜಯದೇವ್ ಉನಾದ್ಕತ್ 1, ಚೇತನ್ ಸಕಾರಿಯಾ 1, ಮುಸ್ತಫಿಝುರ್‌ ರಹ್ಮಾನ್ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಇದರಲ್ಲಿ 23 ರನ್‌ಗೆ 4 ವಿಕೆಟ್‌ ಮುರಿದ ಮೋರಿಸ್ ರಾಜಸ್ಥಾನ್‌ ತಂಡಕ್ಕೆ ಪ್ರಮುಖ ಕೊಡುಗೆ ನೀಡಿದ್ದು ಕಂಡುಬಂತು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈವರೆಗೆ ಆಡಿರುವ 4 ಪಂದ್ಯಗಳಲ್ಲಿ 1ರಲ್ಲಿ ಜಯ ಕಂಡಿದ್ದರೆ, ರಾಜಸ್ಥಾನ್ ರಾಯಲ್ಸ್ ಕೂಡ 4ರಲ್ಲಿ 1 ಗೆಲುವು ದಾಖಲಿಸಿದೆ. ಹೀಗಾಗಿ ಎರಡೂ ತಂಡಗಳಿಗೂ ಇಂದಿನ ಪಂದ್ಯದ ಗೆಲುವು ಪ್ರಮುಖವಾಗಿದೆ. ಆದರೆ ಇಂದಿನ ಪಂದ್ಯದಲ್ಲಿ ಕೆಕೆಆರ್‌ ಗೆಲ್ಲುವ ಸಾಧ್ಯತೆ ಕಡಿಮೆ.

Story first published: Saturday, April 24, 2021, 21:48 [IST]
Other articles published on Apr 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+