Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೋರಿಸ್ ಮಾರಕ ಬೌಲಿಂಗ್, ಕೋಲ್ಕತ್ತಾ ವಿರುದ್ಧ ರಾಜಸ್ಥಾನ್‌ಗೆ ಜಯ

IPL 2021: Kolkata Knight Riders vs Rajasthan Royals, 18th Match, Report

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 18ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಡಿದ್ದವು. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಇದರಲ್ಲಿ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ ಜಯ ದಾಖಲಿಸಿದೆ. ಕ್ರಿಸ್ ಮೋರಿಸ್ ಮಾರಕ ಬೌಲಿಂಗ್ ನೆರವಿನೊಂದಿಗೆ ಆರ್‌ಆರ್‌ ಟೂರ್ನಿಯ ಎರಡನೇ ಗೆಲುವು ಕಂಡಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್, ನಿತೀಶ್ ರಾಣಾ 22, ಶುಬ್ಮನ್ ಗಿಲ್ 11, ರಾಹುಲ್ ತ್ರಿಪಾಠಿ 36, ಸುನಿಲ್ ನರೈನ್ 6, ದಿನೇಶ್ ಕಾರ್ತಿಕ್ 25, ಆ್ಯಂಡ್ರೆ ರಸೆಲ್ 9, ಪ್ಯಾಟ್ ಕಮಿನ್ಸ್ 10 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 133 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, ಯಶಸ್ವಿ ಜೈಸ್ವಾಲ್ 22, ನಾಯಕ ಸಂಜು ಸ್ಯಾಮ್ಸನ್ ಅಜೇಯ 44, ಶಿವಂ ದೂಬೆ 22, ಡೇವಿಡ್ ಮಿಲ್ಲರ್ ಅಜೇಯ 24 ರನ್‌ನೊಂದಿಗೆ 18.5 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 134 ರನ್ ಗಳಿಸಿತು.

ಕೋಲ್ಕತ್ತಾ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ನ ಕ್ರಿಸ್ ಮೋರಿಸ್ 4, ಜಯದೇವ್ ಉನಾದ್ಕತ್ 1, ಚೇತನ್ ಸಕಾರಿಯಾ 1, ಮುಸ್ತಫಿಝುರ್‌ ರಹ್ಮಾನ್ 1 ವಿಕೆಟ್‌ ಪಡೆದರೆ, ರಾಜಸ್ಥಾನ್ ಇನ್ನಿಂಗ್ಸ್‌ನಲ್ಲಿ ಕೆಕೆಆರ್‌ನ ವರುಣ್ ಚಕ್ರವರ್ತಿ 2, ಶಿವಂ ಮಾಜಿ ಮತ್ತು ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು.

Story first published: Sunday, April 25, 2021, 0:30 [IST]
Other articles published on Apr 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+