Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಎಸ್‌ಆರ್‌ಎಚ್ ವಿರುದ್ಧ ಕೆಕೆಆರ್‌ಗೆ ಸುಲಭ ಜಯ

IPL 2021: Kolkata Knight Riders vs Sunrisers Hyderabad, Report

ದುಬೈ: ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಅಕ್ಟೋಬರ್ 3) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 49ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 6 ವಿಕೆಟ್‌ಗಳ ಸುಲಭ ಜಯ ಗಳಿಸಿದೆ. ಇದರೊಂದಿಗೆ ಕೆಕೆಆರ್ ಪ್ಲೇ ಆಫ್ಸ್‌ ದಾರಿ ಸುಲಭವಾಗಿಸಿಕೊಂಡಿದೆ. ಈ ಜಯದ ಮೂಲಕ ಕೋಲ್ಕತ್ತಾ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್, ಜೇಸನ್ ರಾಯ್ 10, ವೃದ್ಧಿಮಾನ್ ಸಹಾ 0, ಕೇನ್ ವಿಲಿಯಮ್ಸನ್ 26, ಪ್ರಿಯಂ ಗರ್ಗ್ 21, ಅಭಿಷೇಕ್ ಶರ್ಮಾ 6, ಅಬ್ದುಲ್ ಸಮದ್ 25, ಜೇಸನ್ ಹೋಲ್ಡರ್ 2, ರಶೀದ್ ಖಾನ್ 8, ಭುವನೇಶ್ವರ್ ಕುಮಾರ್ 7, ಸಿದ್ದಾರ್ಥ್ ಕೌಲ್ 7 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 115 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ವೆಂಕಟೇಶ್ ಐಯ್ಯರ್ 8, ರಾಹುಲ್ ತ್ರಿಪಾಠಿ 7, ಶುಬ್ಮನ್ ಗಿಲ್ 57, ನಿತೀಶ್ ರಾಣಾ 25, ದಿನೇಶ್ ಕಾರ್ತಿಕ್ ಅಜೇಯ 18, ನಾಯಕ ಇಯಾನ್ ಮಾರ್ಗನ್ ಅಜೇಯ 2 ರನ್‌ನೊಂದಿಗೆ 19.4ನೇ ಓವರ್‌ಗೆ 4 ವಿಕೆಟ್ ಕಳೆದು 119 ರನ್ ಗಳಿಸಿತು.

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಟಿಮ್ ಸೌಥೀ 2, ಶಿವಂ ಮಾವಿ 2, ವರುಣ್ ಚಕ್ರವರ್ತಿ 2 ಮತ್ತು ಶಕೀಬ್ ಅಲ್ ಹಸನ್ 1 ವಿಕೆಟ್‌ ಪಡೆದರೆ, ಕೋಲ್ಕತ್ತಾ ಇನ್ನಿಂಗ್ಸ್‌ನಲ್ಲಿ ಎಸ್‌ಆರ್‌ಎಚ್‌ನ ಜೇಸನ್ ಹೋಲ್ಡರ್ 2, ರಶೀದ್ ಖಾನ್ 1, ಸಿದ್ಧಾರ್ಥ್ ಕೌಲ್ 1 ವಿಕೆಟ್‌ನಿಂದ ಗಮನ ಸೆಳೆದಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI
ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ಸಿ), ಶಕೀಬ್ ಅಲ್ ಹಸನ್, ದಿನೇಶ್ ಕಾರ್ತಿಕ್ (ವಿಕೆ), ಸುನಿಲ್ ನರೈನ್, ಶಿವಂ ಮಾವಿ, ಟಿಮ್ ಸೌಥಿ, ವರುಣ್ ಚಕ್ರವರ್ತಿ.
ಬೆಂಚ್: ಟಿಮ್ ಸೀಫರ್ಟ್, ವೈಭವ್ ಅರೋರಾ, ಕಮಲೇಶ್ ನಗರ್ಕೋಟಿ, ರಿಂಕು ಸಿಂಗ್, ಲಾಕಿ ಫರ್ಗುಸನ್, ಪ್ರಸಿದ್ಧ್ ಕೃಷ್ಣ, ಆಂಡ್ರೆ ರಸೆಲ್, ಸಂದೀಪ್ ವಾರಿಯರ್, ಶೆಲ್ಡನ್ ಜಾಕ್ಸನ್, ಗುರ್ಕೀರತ್ ಸಿಂಗ್ ಮನ್, ಪವನ್ ನೇಗಿ, ಕರುಣ್ ನಾಯರ್, ಬೆನ್ ಕಟಿಂಗ್, ಹರ್ಭಜನ್ ಸಿಂಗ್.

ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI
ಜೇಸನ್ ರಾಯ್, ವೃದ್ಧಿಮಾನ್ ಸಹಾ (w), ಕೇನ್ ವಿಲಿಯಮ್ಸನ್ (c), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಸಿದ್ದಾರ್ಥ್ ಕೌಲ್.
ಬೆಂಚ್: ಸಂದೀಪ್ ಶರ್ಮಾ, ಶ್ರೀವತ್ ಗೋಸ್ವಾಮಿ, ಮನೀಶ್ ಪಾಂಡೆ, ಕೇದಾರ್ ಜಾಧವ್, ಮೊಹಮ್ಮದ್ ನಬಿ, ಶಹಬಾಜ್ ನದೀಮ್, ವಿರಾಟ್ ಸಿಂಗ್, ತುಳಸಿ ಥಂಪಿ, ಜಗದೀಶ ಸುಚಿತ್, ಖಲೀಲ್ ಅಹಮದ್, ಡೇವಿಡ್ ವಾರ್ನರ್, ಮುಜೀಬ್ ಉರ್ ರೆಹಮಾನ್.

Story first published: Monday, October 4, 2021, 10:28 [IST]
Other articles published on Oct 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+