For Quick Alerts
ALLOW NOTIFICATIONS  
For Daily Alerts
 

ಬೆಂಗಳೂರಲ್ಲಿ ಕೊಹ್ಲಿ, ಎಬಿಡಿ ಮತ್ತು ಮ್ಯಾಕ್ಸ್‌ವೆಲ್ ರಸ್ತೆ!?

IPL 2021 : Latest trendy pictures edited by RCB fans have gone viral

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಶುರುವಾಯಿತೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಹಬ್ಬದ ವಾತಾವರಣವಿರುತ್ತದೆ. ಪ್ರತಿ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಭಿನ್ನವಿಭಿನ್ನವಾದ ಕ್ರಿಯೇಟಿವಿಟಿಯನ್ನು ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ತೋರಿಸುತ್ತಿರುತ್ತಾರೆ. ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಬೆಂಗಳೂರಿನ ಏರಿಯಾಗಳ ಹೆಸರಿನ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರ ಹೆಸರನ್ನು ಜೋಡಣೆ ಮಾಡಿ ಮಾಡಿದ್ದ ಮಿಮ್ಸ್ ಸಖತ್ ವೈರಲ್ ಆಗಿತ್ತು.

IPL 2021 : Latest trendy pictures edited by RCB fans have gone viral

ಈ ವರ್ಷದ ಐಪಿಎಲ್ ಟೂರ್ನಿ ಶುರುವಾದ ಸಮಯದಲ್ಲಿಯೂ ಸಹ ಕನ್ನಡ ಸಿನಿಮಾಗಳ ಹೆಸರಿನ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರ ಹೆಸರನ್ನು ಸೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಮಿಮ್ಸ್ ಮಾಡಿದ್ದರು. ಏರಿಯಾ ಆಯ್ತು, ಸಿನಿಮಾ ಆಯ್ತು ಇದೀಗ ಬೆಂಗಳೂರಿನ ರಸ್ತೆಗಳಿಗೆ ಆರ್‌ಸಿಬಿ ಆಟಗಾರರ ಹೆಸರನ್ನು ಇಡಬೇಕು ಎಂದು ಆರ್‌ಸಿಬಿ ಅಭಿಮಾನಿಗಳು ಎಡಿಟ್ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾ ಅಭಿಮಾನಿಯಾದ ಹರೀಶ್ ಅರಸು ಎಂಬುವವರು ಈ ಫೋಟೋಗಳನ್ನು ಎಡಿಟ್ ಮಾಡಿದ್ದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದರು.

IPL 2021 : Latest trendy pictures edited by RCB fans have gone viral

ವಿರಾಟ್ ಕೊಹ್ಲಿ ರಸ್ತೆ, ಎಬಿ ಡಿವಿಲಿಯರ್ಸ್ ರಸ್ತೆ, ದೇವದತ್ ಪಡಿಕ್ಕಲ್ ರಸ್ತೆ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ರಸ್ತೆ ಎಂದು ಚಿತ್ರಗಳನ್ನು ಎಡಿಟ್ ಮಾಡಿ ಬೆಂಗಳೂರಿನ ರಸ್ತೆಗಳಿಗೆ ಈ ಆಟಗಾರರ ಹೆಸರನ್ನು ಇಡಬೇಕು ಎಂದು ಆರ್‌ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ವಿಶೇಷವೆಂದರೆ ಇತ್ತೀಚಿನ ಕೆಲ ದಿನಗಳ ಹಿಂದೆ ಬೆಂಗಳೂರಿನ ಯಾವುದಾದರೂ ರಸ್ತೆಯೊಂದಕ್ಕೆ ಎಬಿ ಡಿವಿಲಿಯರ್ಸ್ ರಸ್ತೆ ಎಂದು ನಾಮಕರಣ ಮಾಡಬೇಕು ಎಂದು ಕರ್ನಾಟಕದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿ ಆರ್‌ಸಿಬಿ ಅಭಿಮಾನಿಗಳು ಟ್ವಿಟ್ಟರ್ ಅಭಿಯಾನವನ್ನು ಸಹ ನಡೆಸಿದ್ದರು. ಹೀಗೆ ಹೊಸ ಹೊಸ ಟ್ರೆಂಡ್ ಹುಟ್ಟು ಹಾಕುತ್ತಿರುವ ಆರ್‌ಸಿಬಿ ಅಭಿಮಾನಿಗಳು ಮುಂದೆ ಯಾವ ಐಡಿಯಾದೊಂದಿಗೆ ಮತ್ತೊಂದು ಟ್ರೆಂಡ್ ಹುಟ್ಟು ಹಾಕುತ್ತಾರೋ ಕಾದುನೋಡಬೇಕು.

IPL 2021 : Latest trendy pictures edited by RCB fans have gone viral

Story first published: Tuesday, April 20, 2021, 21:37 [IST]
Other articles published on Apr 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+