ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಆರಂಭದ ದಿನಾಂಕ ಪ್ರಕಟ

ನವದೆಹಲಿ: 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭ ಮತ್ತು ಅಂತ್ಯದ ದಿನಾಂಕ ಪ್ರಕಟವಾಗಿದೆ. ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಏಪ್ರಿಲ್ 9ಕ್ಕೆ ಆರಂಭಗೊಂಡು ಮೇ 30ರಂದು ಫೈನಲ್ ನೊಂದಿಗೆ ಅಂತ್ಯಗೊಳ್ಳಲಿದೆ ಎಂದು ವರದಿಯೊಂದು ಹೇಳಿದೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿ ಈ ಸಾರಿ ಭಾರತದಲ್ಲೇ ನಡೆಯಲಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ ಏಪ್ರಿಲ್ 9ರಂದು ಟೂರ್ನಿ ಆರಂಭಗೊಂಡರೆ ಮೇ 30ರಂದು ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ.
ವರದಿಯ ಪ್ರಕಾರ, ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಐಪಿಎಲ್ ಗಾಗಿ 6 ತಾಣಗಳನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.
ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಅಹ್ಮದಾಬಾದ್ ತಾಣಗಳು 2021ರ ಐಪಿಎಲ್ ಗೆ ಆತಿಥ್ಯ ವಹಿಸಲಿದೆ. 52 ದಿನಗಳ ಟೂರ್ನಿ ಇದಾಗಿರಲಿದ್ದು ಒಟ್ಟು 60 ಪಂದ್ಯಗಳು ನಡೆಯಲಿವೆ ಎಂದು ತಿಳಿದು ಬಂದಿದೆ.
Story first published: Saturday, March 6, 2021, 15:46 [IST]
Other articles published on Mar 6, 2021
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications