ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಕೆ ಟಾಪ್ 5 ತಂಡಗಳು

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಎಂದ ಮೇಲೆ ಅಲ್ಲಿ ರನ್ ಹೊಳೆ ಇದ್ದೇ ಇರುತ್ತದೆ. ಹೊಡಿ ಬಡಿ ಆಟ ಎಂದೇ ಖ್ಯಾತಿ ಪಡೆದಿರುವ ಐಪಿಎಲ್ ಟೂರ್ನಿ ತಂಡದ ಅನೇಕ ತಂಡಗಳ ಬೃಹತ್ ಮೊತ್ತಗಳಿಗೆ ಸಾಕ್ಷಿಯಾಗಿದೆ. ಇದೀಗ ಮತ್ತೆ ಏಪ್ರಿಲ್ 9ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ ಶುರುವಾಗುತ್ತಿದ್ದು ಮತ್ತಷ್ಟು ಅಧಿಕ ರನ್‌ಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹೊಸ ಪ್ರತಿಭಾವಂತ ಆಟಗಾರರು ಆಡಲಿದ್ದು ಪ್ರತಿಯೊಂದು ತಂಡಗಳು ಸಹ ಬಲಿಷ್ಠತೆಯಿಂದ ಕೂಡಿದ್ದು ಮತ್ತಷ್ಟು ರನ್ ಹೊಳೆ ಹರಿದರೂ ಯಾವುದೇ ಅಚ್ಚರಿಯೇನಿಲ್ಲ. ಕೊರೊನಾ ವೈರಸ್‌ನಿಂದಾಗಿ ಕಳೆದ ವರ್ಷದ ಐಪಿಎಲ್ ಟೂರ್ನಿಯನ್ನು ಯು ಎ ಇ ಯಲ್ಲಿ ನಡೆಸಲಾಯಿತು, ಆದರೆ ಈ ಬಾರಿ ಭಾರತದ ಕ್ರೀಡಾಂಗಣಗಳಲ್ಲಿಯೇ ಐಪಿಎಲ್ ನಡೆಯಲಿದ್ದು ಹೆಚ್ಚು ಹೆಚ್ಚು ರನ್ ಬರುವ ನಿರೀಕ್ಷೆಯಿದೆ.

ಇದುವರೆಗೂ ನಡೆದಿರುವ ಒಟ್ಟು 13 ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳಲ್ಲಿ ಅತ್ಯಧಿಕ ರನ್ ಬಾರಿಸಿರುವ ಟಾಪ್ 5 ತಂಡಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ.

5. ಚೆನ್ನೈ ಸೂಪರ್ ಕಿಂಗ್ಸ್ (2008)

5. ಚೆನ್ನೈ ಸೂಪರ್ ಕಿಂಗ್ಸ್ (2008)

ಐಪಿಎಲ್ ಆರಂಭವಾದ ಮೊದಲನೇ ಆವೃತ್ತಿಯಲ್ಲಿ ಅಂದರೆ 2008ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ( ಈಗಿನ ಪಂಜಾಬ್ ಕಿಂಗ್ಸ್ )ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತ್ತು.

4. ಕೊಲ್ಕತ್ತಾ ನೈಟ್ ರೈಡರ್ಸ್ .

4. ಕೊಲ್ಕತ್ತಾ ನೈಟ್ ರೈಡರ್ಸ್ .

2018ರ ಐಪಿಎಲ್ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪಂಜಾಬ್ ಕಿಂಗ್ಸ್ ಅಂದರೆ ಆಗಿನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 6 ವಿಕೆಟ್ ನಷ್ಟಕ್ಕೆ 245 ರನ್ ಬಾರಿಸುವುದರ ಮೂಲಕ ಅತ್ಯಧಿಕ ತಂಡದ ಮೊತ್ತ ಪಟ್ಟಿಗೆ ಸೇರಿಕೊಂಡಿತು. ಈ ಪಂದ್ಯದಲ್ಲಿ ಸುನಿಲ್ ನರೈನ್ 36 ಎಸೆತಗಳಲ್ಲಿ ಬರೋಬ್ಬರಿ 75 ರನ್ ಬಾರಿಸಿ ಮಿಂಚಿದರು.

3. ಚೆನ್ನೈ ಸೂಪರ್ ಕಿಂಗ್ಸ್ ( 2010 )

3. ಚೆನ್ನೈ ಸೂಪರ್ ಕಿಂಗ್ಸ್ ( 2010 )

2008ರಲ್ಲಿ ಪಂಜಾಬ್ ವಿರುದ್ಧ 240 ರನ್ ಬಾರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ , 2010ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 246 ರನ್ ಬಾರಿಸಿತ್ತು. ಆ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುರಳಿ ವಿಜಯ್ 56 ಎಸೆತಗಳಿಗೆ 127 ರನ್ ಬಾರಿಸಿ ತಂಡದ ಬೃಹತ್ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

2. ರಾಯಲ್ ಚಾಲೆಂಜರ್ಸ್ ಬೆಂಗಳೂರು (2016)

2. ರಾಯಲ್ ಚಾಲೆಂಜರ್ಸ್ ಬೆಂಗಳೂರು (2016)

ಐಪಿಎಲ್ ಟೂರ್ನಿಯ ವಿಶೇಷ ದಾಖಲೆಗಳ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಕೇಳಿಬರದೆ ಇರಲು ಸಾಧ್ಯವೇ ಇಲ್ಲ. ಹಾಗೆಯೇ ತಂಡದ ಅತ್ಯಧಿಕ ಮೊತ್ತದ ದಾಖಲೆಯಲ್ಲಿಯೂ ಸಹ ಆರ್ ಸಿ ಬಿ ಹೆಸರು ಇದೆ. 2016ರ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3 ವಿಕೆಟ್ ನಷ್ಟಕ್ಕೆ ದಾಖಲೆಯ 248 ರನ್ ಗಳಿಸಿತು. ಈ ಪಂದ್ಯದಲ್ಲಿ ವಿರಾಟ್ 55 ಎಸೆತಗಳಿಗೆ 109 ರನ್ ಗಳಿಸಿ ಮಿಂಚಿದರು ಮತ್ತು ಎಬಿ ಡಿವಿಲಿಯರ್ಸ್ 52 ಎಸೆತಗಳಲ್ಲಿ ಅಜೇಯ 129 ರನ್ ಗಳಿಸಿದರು. ತಂಡ 4ನೇ ಓವರ್‌ನಲ್ಲಿಯೇ ಕ್ರಿಸ್ ಗೇಲ್ ಅವರ ವಿಕೆಟ್ ಕಳೆದುಕೊಂಡು 1 ವಿಕೆಟ್ ನಷ್ಟಕ್ಕೆ ಕೇವಲ 19 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಜತೆಯಾದ ಎಬಿಡಿ ಮತ್ತು ವಿರಾಟ್ ಕೊಹ್ಲಿ 229 ರನ್‌ಗಳ ದಾಖಲೆಯ ಜೊತೆಯಾಟವಾಡಿ ತಂಡ ಬೃಹತ್ ಮೊತ್ತ ತಲುಪಲು ಸಹಾಯವಾದರು.

1. ರಾಯಲ್ ಚಾಲೆಂಜರ್ಸ್ ಬೆಂಗಳೂರು (2013)

1. ರಾಯಲ್ ಚಾಲೆಂಜರ್ಸ್ ಬೆಂಗಳೂರು (2013)

ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ವೀಕ್ಷಿಸುವ ಪ್ರತಿ ಕ್ರಿಕೆಟ್ ಪ್ರೇಮಿಗೂ ಸಹ ಈ ಇನ್ನಿಂಗ್ಸ್ ಬಗ್ಗೆ ತಿಳಿಯದೆ ಇರಲು ಸಾಧ್ಯವೇ ಇಲ್ಲ. ಏಕೆಂದರೆ ಇದು ಐಪಿಎಲ್ ಇತಿಹಾಸದಲ್ಲಿಯೇ ತಂಡವೊಂದರ ಅತ್ಯಧಿಕ ಮೊತ್ತಕ್ಕೆ ಸಾಕ್ಷಿಯಾದ ಇನ್ನಿಂಗ್ಸ್. 2013ರ ಐಪಿಎಲ್ ಟೂರ್ನಿಯಲ್ಲಿ ಪುಣೆ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ ನಷ್ಟಕ್ಕೆ 263 ರನ್ ಬಾರಿಸಿ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿತ್ತು. ಇಂದಿಗೂ ಸಹ ಈ ಮೊತ್ತವನ್ನು ಯಾವುದೇ ತಂಡ ಮುರಿಯಲಾಗಿಲ್ಲ. ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದ ಕ್ರಿಸ್ ಗೇಲ್ 66 ಎಸೆತಗಳಲ್ಲಿ 175 ರನ್ ಬಾರಿಸಿ ಅತಿ ಹೆಚ್ಚು ರನ್ ಬಾರಿಸಿದ ಐಪಿಎಲ್ ಆಟಗಾರ ಎಂಬ ದಾಖಲೆ ನಿರ್ಮಿಸುವುದರ ಜೊತೆಗೆ ಆರ್ ಸಿ ಬಿ ತಂಡ ಬೃಹತ್ ಮೊತ್ತ ತಲುಪುವಲ್ಲಿಯೂ ಸಹಾಯ ಮಾಡಿದರು.

Story first published: Friday, April 2, 2021, 15:55 [IST]
Other articles published on Apr 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X