ಐಪಿಎಲ್: ಕೆಟ್ಟ ದಾಖಲೆ ಮುಂದುವರೆಸಿದ ಪೃಥ್ವಿ ಶಾ

ಕಳೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಪೃಥ್ವಿ ಶಾ ಐಪಿಎಲ್ ನಲ್ಲಿ ಮಿಂಚುವ ಮುನ್ಸೂಚನೆಯನ್ನು ನೀಡಿದ್ದರು. ಯುಎಇಯಲ್ಲಿ ಕಳೆದ ಬಾರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪೃಥ್ವಿ ಶಾ ಭಾರೀ ಟೀಕೆಗೆ ಒಳಗಾಗಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ 2020ರ ಐಪಿಎಲ್ ಟೂರ್ನಿಯಲ್ಲಿ ಎದುರಾದ ಟೀಕೆಗಳಿಗೆ ಪೃಥ್ವಿ ಶಾ ಉತ್ತರವನ್ನು ನೀಡಿದ್ದರು. ಹಾಗೂ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಪೃಥ್ವಿ ಶಾ ಅಬ್ಬರಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 38 ಎಸೆತಗಳಿಗೆ 72 ರನ್ ಬಾರಿಸಿದರು. ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಪೃಥ್ವಿ ಶಾ 3 ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಸಿಡಿಸಿದ್ದರು. ಆದರೆ ಗುರುವಾರ ( ಏಪ್ರಿಲ್ 15 ) ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಶಾ ಆರಂಭಿಕ ಆಟಗಾರನಾಗಿ ಬಂದು 5 ಎಸೆತಗಳಿಗೆ ಕೇವಲ 2 ರನ್ ಗಳಿಸಿ ಜಯದೇವ್ ಉನಾದ್ಕತ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಪೃಥ್ವಿ ಶಾ ಐಪಿಎಲ್ ಇತಿಹಾಸದಲ್ಲಿ ತಮ್ಮ ಹೆಸರಿನಲ್ಲಿದ್ದ ಕೆಟ್ಟ ದಾಖಲೆಯೊಂದನ್ನು ಮತ್ತೆ ಮುಂದುವರಿಸಿದ್ದಾರೆ.
2019ರಿಂದ ಇಲ್ಲಿಯವರೆಗೂ ಅತಿಹೆಚ್ಚು ಬಾರಿ ಒಂದಂಕಿಗೆ ಔಟ್ ಆಗಿರುವ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಪೃಥ್ವಿ ಶಾ ಮತ್ತೊಂದು ಬಾರಿ ಒಂದಂಕಿಗೆ ಔಟ್ ಆಗುವ ಮೂಲಕ ತಮ್ಮ ಹಳೆಯ ಕೆಟ್ಟ ದಾಖಲೆಯನ್ನು ಮುಂದುವರೆಸಿದ್ದಾರೆ. 2019ರಿಂದ ಇಲ್ಲಿಯವರೆಗೂ ಅತಿಹೆಚ್ಚು ಬಾರಿ ಒಂದಂಕಿಗೆ ಔಟ್ ಆಗಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿ ಈ ಕೆಳಕಂಡಂತಿದೆ

ಪೃಥ್ವಿ ಶಾ
2019ರಿಂದ ಇಲ್ಲಿಯವರೆಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಪೃಥ್ವಿ ಶಾ 15 ಪಂದ್ಯಗಳಲ್ಲಿ ಒಂದಂಕಿಗೆ ಔಟ್ ಆಗುವುದರ ಮೂಲಕ ಅತಿ ಹೆಚ್ಚು ಬಾರಿ ಒಂದಂಕಿಗೆ ಔಟ್ ಆದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

2. ದಿನೇಶ್ ಕಾರ್ತಿಕ್
2019ರ ಐಪಿಎಲ್ ಟೂರ್ನಿಯಿಂದ ಇಲ್ಲಿವರೆಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ದಿನೇಶ್ ಕಾರ್ತಿಕ್ 13 ಪಂದ್ಯಗಳಲ್ಲಿ ಒಂದಂಕಿಗೆ ಔಟ್ ಆಗುವ ಮೂಲಕ ಅತಿ ಹೆಚ್ಚು ಬಾರಿ ಒಂದಂಕಿಗೆ ಔಟ್ ಆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

3. ಅಕ್ಷರ್ ಪಟೇಲ್
2019ರ ಐಪಿಎಲ್ ಟೂರ್ನಿಯಿಂದ ಇಲ್ಲಿಯವರೆಗೂ ಅತಿ ಹೆಚ್ಚು ಬಾರಿ ಒಂದಂಕಿಗೆ ಔಟ್ ಆದ ಆಟಗಾರರ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಕ್ಷರ್ ಪಟೇಲ್ ಮೂರನೇ ಸ್ಥಾನದಲ್ಲಿದ್ದಾರೆ. ಅಕ್ಷರ್ ಪಟೇಲ್ 11 ಬಾರಿ ಒಂದಂಕಿಗೆ ಔಟ್ ಆಗಿದ್ದಾರೆ.

4. ಶೇನ್ ವಾಟ್ಸನ್
ಸ್ಪೋಟಕ ಬ್ಯಾಟ್ಸ್‌ಮನ್ ಶೇನ್ ವ್ಯಾಟ್ಸನ್ ಕೂಡ ಅತಿ ಹೆಚ್ಚು ಬಾರಿ ಒಂದಕ್ಕೆ ಔಟ್ ಆದ ಆಟಗಾರರ ಪಟ್ಟಿಯಲ್ಲಿದ್ದಾರೆ. 2019ರ ಐಪಿಎಲ್ ಟೂರ್ನಿಯಿಂದ ಇಲ್ಲಿಯವರೆಗೂ 11 ಬಾರಿ ಒಂದಂಕಿಗೆ ಔಟ್ ಆಗುವ ಮೂಲಕ ಶೇನ್ ವಾಟ್ಸನ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

5. ಸಂಜು ಸ್ಯಾಮ್ಸನ್
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿರುವ ಸ್ಫೋಟಕ ಆಟಗಾರ ಸಂಜು ಸ್ಯಾಮ್ಸನ್ 2019ರಿಂದ ಇಲ್ಲಿಯವರೆಗೂ 11 ಪಂದ್ಯಗಳಲ್ಲಿ ಒಂದಂಕಿಗೆ ಔಟ್ ಆಗುವುದರ ಮೂಲಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications