ಕೊರೊನಾ ಆತಂಕ ಮಧ್ಯೆಯೂ ಕ್ರಿಕೆಟ್ ಆಡುತ್ತಿರುವುದಕ್ಕೆ ಅದೃಷ್ಟಶಾಲಿ: ಕ್ರಿಸ್ ವೋಕ್ಸ್

ಈ ಬಾರಿಯ ಐಪಿಎಲ್ ಆರಂಭಕ್ಕೂ ಕೆಲವೇ ದಿನಗಳ ಮುನ್ನ ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಕಾಣಿಸಿಕೊಂಡಿದೆ. ಆದರೆ ಸಾಕಷ್ಟು ಮುನನ್ನೆಚ್ಚರಿಕೆಯನ್ನು ತೆಗೆದುಕೊಂಡು ಐಪಿಎಲ್‌ಅನ್ನು ಭಾರತದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಇಂತಾ ಸನ್ನಿವೇಶದಲ್ಲಿಯೂ ಕ್ರಿಕೆಟ್ ಆಡುತ್ತಿರುವುದಕ್ಕೆ ಐಪಿಎಲ್ ಸ್ಟಾರ್‌ಗಳು ಅದೃಷ್ಟಶಾಲಿಗಳು ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಕ್ರಿಕೆಟಿಗ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಕ್ರಿಸ್ ವೋಕ್ಸ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿಯ ಐಪಿಎಲ್ ಹಿಂದೆಂದಿಗಿಂತಲೂ ತುಂಬಾ ವಿಭಿನ್ನ ಎಂದಿರುವ ಕ್ರಿಸ್ ವೋಕ್ಸ್ ಡೆಲ್ಲಿ ಕ್ಯಾಪಟಿಲ್ಸ್ ತಂಡದ ಬಯೋಬಬಲ್‌ನಲ್ಲಿ ತಂಡದ ಸಹ ಆಟಗಾರರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕ್ರಿಸ್ ವೋಕ್ಸ್‌ಗೆ ರಾಷ್ಟ್ರೀಯ ತಂಡದ ಇಬ್ಬರು ಸಹ ಆಟಗಾರರಾದ ಟಾಮ್ ಕರನ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್ ಕೂಡ ಸಾಥ್ ನೀಡಿದ್ದಾರೆ.
"ಬಯೋ ಬಬಲ್‌ನಲ್ಲಿ ನಾವು ಸಾಕಷ್ಟು ಸಕಾರಾತ್ಮಕವಾಗಿರಲು ಪ್ರಯತ್ನಿಸುತ್ತೇವೆ. ನಾನು ಇನ್ನೂ ಕೂಡ ಕ್ರಿಕೆಟ್ ಆಡಲು ಅವಕಾಶ ಪಡೆದುಕೊಂಡಿರುವುದಕ್ಕೆ ಅದೃಷ್ಟಶಾಲಿಗಳು. ಈ ಮೂಲಕ ಹೊರಗಿನ ಅಭಿಮಾನಿಗಳನ್ನು ಮನರಂಜಿಸುತ್ತಿದ್ದೇವೆ" ಎಂದು ಕ್ರಿಸ್ ವೋಕ್ಸ್ ಹೇಳಿಕೆ ನೀಡಿದ್ದಾರೆ.
"ಈ ಕ್ಷಣದಲ್ಲಿ ನಾವು ಅತ್ಯಂತ ವಿಭಿನ್ನ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಇದು ಅತ್ಯಂತ ವಿಭಿನ್ನವಾದ ಐಪಿಎಲ್, ಅಭಿಮಾನಿಗಳು ಇಲ್ಲದೆ ಬಯೋಸೆಕ್ಯೂರ್ ಬಬಲ್‌ನಲ್ಲಿದ್ದೇವೆ. ಖಂಡಿತವಾಗಿಯೂ ಇದು ವಿಭಿನ್ನವಾದ ಅನುಭವ" ಎಂದು ಕ್ರಿಸ್ ವೋಕ್ಸ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications