ಐಪಿಎಲ್ 2021: ತವರಿಗೆ ಮರಳಿದ ಇಂಗ್ಲೆಂಡ್‌ನ ಕ್ರಿಕೆಟಿಗರು

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗಿಯಾಗಿದ್ದ ಬಹುತೇಕ ಇಂಗ್ಲೆಂಡ್‌ನ ಆಟಗಾರರು ಬುಧವಾರ ತವರಿಗೆ ಮರಳಿದ್ದಾರೆ. ಇಂಗ್ಲೆಂಡ್‌ನ 11 ಕ್ರಿಕೆಟಿಗರ ಪೈಕಿ ಎಂಟು ಮಂದಿ ಕ್ರಿಕೆಟಿಗರು ಬುಧವಾರವೇ ಪ್ರಯಾಣವನ್ನು ಬೆಳಸಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾದ ಜೋಸ್ ಬಟ್ಲರ್ ಮತ್ತು ಜಾನಿ ಬೈರ್‌ಸ್ಟೋವ್ ಕೂಡ ಬುಧವಾರ ತವರಿಗೆ ಮರಳಿದ ಆಟಗಾರರ ತಂಡದಲ್ಲಿದ್ದಾರೆ. ಸ್ಕೈ ಸ್ಪೋರ್ಟ್ಸ್ ವರದಿಯ ಪ್ರಕಾರ ಸ್ಯಾಮ್ ಕರನ್, ಟಾಮ್ ಕರನ್, ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್ ವೋಕ್ಸ್, ಮೊಯೀನ್ ಅಲಿ, ಜೇಸನ್ ರಾಯ್ ಕೂಡ ಇಂಗ್ಲೆಂಡ್‌ಗೆ ಮರಳಿದ ಆಟಗಾರರ ಪಟ್ಟಿಯಲ್ಲಿದ್ದಾರೆ ಎಂದು ಮಾಹಿತಿ ನೀಡಿದೆ.
ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕ ಇಯಾನ್ ಮಾರ್ಗನ್, ಡೇವಿಡ್ ಮಲನ್ ಹಾಗೂ ಕ್ರಿಸ್ ಜೋರ್ಡನ್ ಮುಂದಿನ 48 ಗಂಡೆಗಳ ಅಂತರದಲ್ಲಿ ಇಂಗ್ಲೆಂಡ್‌ಗೆ ಮರಳುವ ಸಾಧ್ಯತೆಯಿದೆ.
ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಳದಿಂದಾಗಿ ಯುಕೆಯ ರೆಡ್ ಲಿಸ್ಟ್‌ನಲ್ಲಿ ಭಾರತವಿದೆ. ಹೀಗಾಗಿ ಇಂಗ್ಲೆಂಡ್‌ಗೆ ಮರಳಿದ ಎಲ್ಲಾ ಆಟಗಾರರು ಕೂಡ ಸರ್ಕಾರದ ನಿಯಮದ ಪ್ರಕಾರ 10 ದಿನಗಳ ಕ್ವಾರಂಟೈನ್ ಪೂರೈಸಬೇಕಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಸರ್ಕಾರ ಮೇ 15ರವರೆಗೆ ಭಾರತದಿಂದ ತೆರಳುವ ಪ್ರಯಾಣವನ್ನು ನಿರ್ಬಂಧಿಸಿದೆ. ಹೀಗಾಗಿ ಆಸ್ಟ್ರೇಲಿಯಾ ಆಟಗಾರರು ಮಾಲ್ಡೀವ್ಸ್‌ಗೆ ಪ್ರಯಾಣವನ್ನು ಬೆಳೆಸಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್‌ನ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದೆ. ಐಪಿಎಲ್‌ನ ಬಯೋಬಬಲ್‌ನಲ್ಲಿಯೂ ಎರಡು ದಿನಗಳ ಅಂತರದಲ್ಲಿ ನಾಲ್ಕು ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ತಕ್ಷಣವೇ ಐಪಿಎಲ್ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications